

ಬೆಂಗಳೂರು: ಮರಳು ಮಾಫಿಯಾದಿಂದ ತಮ್ಮ ಕುಟುಂಬವನ್ನ ರಕ್ಷಿಸಿ ಎಂದು ಕೆನಡಾದಿಂದ ಪತ್ರ ಬರೆದಿದ್ದ ಮಂಜು ಎಂಬುವವರಿಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ.
ಕೂಡಲೇ ಪೊಲೀಸರಿಗೆ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಸೊರಬ ತಾಲೂಕಿನ ಲಕ್ಕವಳ್ಳಿಯ ತಮ್ಮ ಮನೆಯ ಅಕ್ಕಪಕ್ಕ ಅಕ್ರಮ ಮರಳು ಸಂಗ್ರಹ ಮಾಡುತ್ತಿರುವುದನ್ನು ಪ್ರಶ್ನಿಸಿರುವುದಕ್ಕೆ ತಮ್ಮ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಎಂದು ಮಂಜು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸಿಎಂ ಸೂಚಿಸಿದ್ದಾರೆ.