

ಮುಂಬೈ: ಸ್ಟಾರ್ ನಟರಾದ ಶಾರುಖ್ ಖಾನ್ ಮತ್ತು ನಯನತಾರಾ ಇದೇ ಮೊದಲ ಬಾರಿಗೆ ತೆರೆಯ ಮೇಲೆ ರೊಮ್ಯಾನ್ಸ್ ಮಾಡಲಿದ್ದಾರೆ. ಅಟ್ಲಿ ಅವರ ಬಾಲಿವುಡ್ನ ಚೊಚ್ಚಲ ಚಿತ್ರ ಜವಾನ್‌ನಲ್ಲಿ ಇಬ್ಬರೂ ನಟಿಸಿದ್ದು, ನಯನತಾರಾ ಅವರ ಪತಿ ಮತ್ತು ಜವಾನ್ ಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್, ಅಟ್ಲಿ ಮತ್ತು ಶಾರುಖ್ ಖಾನ್ ಅವರನ್ನು ಪ್ರಶಂಸಿಸಿದ್ದಾರೆ.
ಬುಧವಾರ ಶಾರುಖ್ ಖಾನ್ ಅವರು ಜವಾನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕಾಗಿ ವಿಘ್ನೇಶ್ ಅವರಿಗೆ ಧನ್ಯವಾದ ಅರ್ಪಿಸಿ, ಅವರ ಪತ್ನಿ ನಯನತಾರಾ ಬಗ್ಗೆ ಎಚ್ಚರಿಕೆ ನೀಡಿದರು. ಹೌದು, ಟ್ವೀಟ್ನಲ್ಲಿ "ವಿಘ್ನೇಶ್ ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ನಯನತಾರಾ ಅದ್ಭುತ. ನಿಮಗೆ ಈಗಾಗಲೇ ತಿಳಿದಿದೆ. ಆದರೆ ಹುಷಾರಾಗಿರಿ, ಅವರು ಈಗ ಕೆಲವು ಪ್ರಮುಖ ಕಿಕ್ ಮತ್ತು ಪಂಚ್ಗಳನ್ನು ಕಲಿತಿದ್ದಾರೆ!" ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.
ಶಾರುಖ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ವಿಘ್ನೇಶ್ ಶಿವನ್, "ನಗುವಿನ ಇಮೋಜಿ ಹಾಕಿ ನೀವು ತುಂಬಾ ಒಳ್ಳೆಯವರು. ಹೌದು, ಸರ್ ನಾನು ತುಂಬಾ ಜಾಗರೂಕನಾಗಿರಬೇಕು. ಆದರೆ ಸಿನಿಮಾದಲ್ಲಿ ನಿಮ್ಮಿಬ್ಬರ ರೊಮ್ಯಾನ್ಸ್ ಚೆನ್ನಾಗಿ ಮೂಡಿಬಂದಿದೆ ಎಂದು ಕೇಳಿದ್ದೇನೆ. ಆಕೆ ನಿಮ್ಮಿಂದ ಸಾಕಷ್ಟು ಕಲಿತಿದ್ದಾರೆ, ಚಿತ್ರ ಬ್ಲಾಕ್ ಬಸ್ಟರ್ ಆಗಲಿದೆ'' ಎಂದೆಲ್ಲಾ ಕೊಂಡಾಡಿದ್ದಾರೆ.