More

    ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಟ್‌ವೀಲ್‌ ಮಾಡಲು ಹೋದವನ ಸ್ಥಿತಿ ಏನಾಯ್ತು?

    ಬಿಹಾರ: ಸಾಮಾಜಿಕ ಮಾಧ್ಯಮದಲ್ಲಿ ವೀಕ್ಷಕರನ್ನು ಗಮನಸೆಳೆಯುವ ಪ್ರಯತ್ನದಲ್ಲಿ, ಲೈಕ್ಸ್ ಪಡೆಯಲು ಹಲವಾರು ಜನರು ಅಪಾಯಕಾರಿ ಸಾಹಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದೀಗ ಬಿಹಾರದ ಮನ್ಪುರ್ ಜಂಕ್ಷನ್‌ನ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ಯುವಕನೊಬ್ಬ ಕಾರ್ಟ್‌ವೀಲ್ ಪ್ರದರ್ಶನ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ತಮ್ಮ ಅಧಿಕೃತ ಟ್ವಿಟರ್‌ ಪೇಜ್​​​​ನಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. ಅಷ್ಟೇ ಅಲ್ಲ, ಕಾರ್ಟ್‌ವೀಲ್ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದೆ.

    ವಿಡಿಯೋದಲ್ಲಿ ಯುವಕನು ಕಾರ್ಟ್‌ವೀಲ್‌ ಮಾಡುತ್ತಾ ಕೌಶಲ ತೋರಿಸುತ್ತಿರುವಾಗ ಇತರ ಪ್ರಯಾಣಿಕರು ಅವನನ್ನು ಬೆರಗಾಗಿ ನೋಡುತ್ತಿದ್ದಾರೆ. ಸದ್ಯ ಮಾನ್ಪುರ್ ಜಂಕ್ಷನ್‌ನಲ್ಲಿ ಕಾರ್ಟ್‌ವೀಲ್ ಮಾಡಿದ ಯುವಕನನ್ನು ಅನಧಿಕೃತ ಪ್ರವೇಶಕ್ಕಾಗಿ #RPF ಬಂಧಿಸಿದೆ. “ಸಾಮಾಜಿಕ ಮಾಧ್ಯಮದಲ್ಲಿ ಲೈಕ್‌ಗಳು ಮತ್ತು ಶೇರ್‌ಗಳಿಗಾಗಿ ತಮ್ಮ ಜೀವನವನ್ನೇ ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಿರುವ ಇತರರಿಗೆ ಇದು ಪಾಠವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ. #SafetyFirst ಎಂದು RPF” ಬರೆದುಕೊಂಡಿದೆ.

    ಈ ಟ್ವೀಟ್ ಇಂಟರ್ನೆಟ್ ಬಳಕೆದಾರರಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದು, ಬಹುಪಾಲು ಬಳಕೆದಾರರು ಈ ಸಾಹಸವನ್ನು ಬೆಂಬಲಿಸದಿದ್ದರೂ, ಯುವಕನನ್ನು ಬಂಧಿಸುವುದು ಸರಿಯಲ್ಲ. ಎಚ್ಚರಿಕೆ ಅಥವಾ ಸಲಹೆ ನೀಡಬೇಕಾಗಿತ್ತು ಎಂದು ಹೇಳಿದ್ದಾರೆ. ಏತನ್ಮಧ್ಯೆ, ಅನೇಕರು ಯುವಕನ ವಿರುದ್ಧ ತೆಗೆದುಕೊಂಡ ಕ್ರಮವನ್ನು ಬೆಂಬಲಿಸಿದ್ದಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts