More

    ಸಿಟಿ ವ್ಯಾಪ್ತಿಯಲ್ಲೇ ಆಹ್ಲಾದಕರ ಬದುಕು

    ಹುಬ್ಬಳ್ಳಿ: ನಗರ ಪ್ರದೇಶದ ಜಂಜಾಟದಿಂದ ಬೇಸತ್ತು ಅನೇಕ ಜನರು ಆಗಾಗ ಹೊರಗಡೆ ಹೋಗುವುದುಂಟು. ದೂರದ ಗುಡ್ಡ, ಬೆಟ್ಟಗಳಲ್ಲಿ ಕೆಲಹೊತ್ತು ಕಾಲ ಕಳೆದು ಬರುವವರೂ ಇದ್ದಾರೆ. ಟ್ರಾಫಿಕ್, ಸದ್ದು- ಗದ್ದಲಗಳಿಂದ ಮುಕ್ತವಾದ ಹಾಗೂ ಹಸಿರು ವಾತಾವರಣದಲ್ಲಿ ಕೆಲಹೊತ್ತಾದರೂ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ.

    ಇಂತಹ ಆಶಯ ಇರುವವರಿಗಾಗಿಯೇ ನಗರ ಪ್ರದೇಶ ಹಾಗೂ ನಗರದಿಂದ ಒಂದಿಷ್ಟು ದೂರದಲ್ಲಿ ಇಷ್ಟದ ವಾತಾವರಣವನ್ನು ನಮ್ಮ ಅವಳಿನಗರದ ಡೆವಲಪರ್‌ಗಳು ಕಲ್ಪಿಸಿಕೊಡುತ್ತಿದ್ದಾರೆ. ಅದುವೇ ಫಾರ್ಮಲ್ಯಾಂಡ್ ಪರಿಕಲ್ಪನೆ.

    ಸಿಟಿ ವ್ಯಾಪ್ತಿಯಲ್ಲೇ ಆಹ್ಲಾದಕರ ಬದುಕು

    ಕನಿಷ್ಠ 5.1 ಗುಂಟೆ ಜಾಗದಲ್ಲಿ ಒಂದು ತೋಟದ ಮನೆ, ಸಕಲ ಸೌಲಭ್ಯಗಳನ್ನು ನಿರ್ಮಿಸಿ ಕೊಡುತ್ತಿದ್ದು, ಇಲ್ಲಿಗೆ ವೀಕೆಂಡ್, ರಜೆ ಅಥವಾ ಇತರೆ ಸಂದರ್ಭದಲ್ಲಿ ಬಂದು ಸಂತೋಷದ ಕ್ಷಣಗಳನ್ನು ಕಳೆಯಬಹುದಾಗಿದೆ. ಜಮೀನು ಇಲ್ಲದ ಜನರಿಗೂ ಇದು ಅತ್ಯಂತ ಪ್ರಶಸ್ತ ಸ್ಥಳವಾಗಲಿದೆ.

    ಏನಿದು ಫಾರ್ಮಲ್ಯಾಂಡ್: ಹಸಿರು ವಾತಾವರಣದಲ್ಲಿ ಸಕಲ ಸೌಲಭ್ಯಗಳನ್ನು ಮಾಡಿಕೊಡುವ ವ್ಯವಸ್ಥೆಯಾಗಿದೆ. ಇದನ್ನು ಖರೀದಿಸುವ ಗ್ರಾಹಕರು ಈ ಜಾಗವನ್ನು ತೋಟದ ಮನೆಯಾಗಿ ಬಳಕೆ ಮಾಡಿಕೊಳ್ಳಬಹುದು.

    ಏನೇನು ಸೌಲಭ್ಯ: ಒಂದು ವಿಸ್ತಾರ ಜಾಗದಲ್ಲಿ ಐದು ಗುಂಟೆ ಜಾಗಗಳನ್ನು ಗುರುತು ಮಾಡಿ ಫಾರ್ಮಲ್ಯಾಂಡ್ ನಿರ್ಮಿಸಲಾಗುತ್ತದೆ. ಅದರಲ್ಲಿ ಒಂದೊಂದು ಫಾರ್ಮಹೌಸ್ ಕಟ್ಟಿಸಿ ಅಗತ್ಯ ಮೂಲ ಸೌಲಭ್ಯಗಳನ್ನು ನೀಡಲಾಗುತ್ತದೆ.
    ಈ ಎಲ್ಲ ಪ್ರದೇಶವು ಇಂಟಿಗ್ರೇಟೆಡ್ ಗೇಟೆಡ್ ಕಮ್ಯುನಿಟಿಯಾಗಿರುತ್ತದೆ. ಭದ್ರತೆ, ಸುರಕ್ಷತೆ ಎಲ್ಲವೂ ಇರುತ್ತದೆ. ಇಲ್ಲಿ ಕ್ಲಬ್ ಹೌಸ್, ಸ್ವೀಮಿಂಗ್ ಪೂಲ್, ಮಕ್ಕಳ ಆಟದ ಮೈದಾನ, ಲಾನ್, ಪಾರ್ಕಿಂಗ್ ಏರಿಯಾ ಇರುತ್ತದೆ. ಸಾಮಾನ್ಯವಾಗಿ ನಗರದ ಮನೆಗಳಿಗೆ ಇರುವಂತೆ ರೋಡ್, ಗಟಾರು, ವಾಟರ್‌ಲೈನ್ ಎಲ್ಲ ವ್ಯವಸ್ಥೆ ಮಾಡಲಾಗಿರುತ್ತದೆ. ವೀಕೆಂಡ್ ಹಾಗೂ ರಜಾ ದಿನಗಳನ್ನು ಕಳೆಯಲು ಈ ಎಲ್ಲ ಸವಲತ್ತುಗಳು ನೆರವಾಗುತ್ತವೆ.
    ಜತೆಗೆ ಮನೆಗಾಗಿ ಒಂದಿಷ್ಟು ರಾಸಾಯನಿಕ ಮುಕ್ತ ಆಹಾರ ಬೆಳೆದುಕೊಳ್ಳಲು ನಿಮ್ಮದೇ ಭೂಮಿ ಇರುತ್ತದೆ. ಸ್ವತಃ ನೀವೇ ಬೆಳೆಯಬಹುದು ಇಲ್ಲವೇ ನೆರವು ಪಡೆದು ಆರ್ಗ್ಯಾನಿಕ್ ಫಾರ್ಮಿಂಗ್ ಮಾಡಿಸಬಹುದು. ಅಬ್ಬಾ! ಒಂದು ಫಾರ್ಮಲ್ಯಾಂಡ್‌ನಲ್ಲಿ ಎಷ್ಟೆಲ್ಲ ಅನುಕೂಲಗಳಿವೆ ಅಲ್ಲವೇ?

    ಕಾಂಕ್ರೀಟ್ ಜಂಗಲ್ ಜಂಜಾಟದಿಂದ ದೂರವಿದ್ದು, ಒಂದಿಷ್ಟು ನೆಮ್ಮದಿಯಿಂದ ಕಾಲ ಕಳೆಯಲು ಫಾರ್ಮಲ್ಯಾಂಡ್ ಕಲ್ಪನೆ ಜಾರಿಗೆ ತರಲಾಗಿದೆ. ತೋಟದ ಮನೆ ಕಟ್ಟಿ ಆರ್ಗ್ಯಾನಿಕ್ ಫಾರ್ಮಿಂಗ್‌ಗೆ ಅವಕಾಶ ಇರುವುದರಿಂದ ರಾಸಾಯನಿಕ ಮುಕ್ತ ಆಹಾರದ ಭದ್ರತೆಯೂ ಗ್ರಾಹಕರಿಗೆ ಸಿಗಲಿದೆ. ಹುಬ್ಬಳ್ಳಿ ಧಾರವಾಡ ಸಿಟಿ ಪಕ್ಕ ಹಾಗೂ ಒಂದಿಷ್ಟು ದೂರದಲ್ಲಿ ಫಾರ್ಮಲ್ಯಾಂಡ್ ಖರೀದಿಗೆ ಲಭ್ಯ ಇವೆ.

    ಶ್ರೀಪಾದ ಶೇಜವಾಡಕರ, ನಿರ್ದೇಶಕರು, ಎಸ್‌ಇಪಿಎಲ್ ಇನ್ಪ್ರಾ ಪ್ರೈವೇಟ್ ಲಿಮಿಟೆಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts