VIDEO| ಯುವಕರೊಂದಿಗೆ ಕಬಡ್ಡಿ ಅಖಾಡಕ್ಕಿಳಿದ ನಟಿ-ರಾಜಕಾರಣಿ ರೋಜಾ..!

Roja 1
Published on

ವಿಜಯವಾಡ: ವಿರೋಧ ಪಕ್ಷದ ನಾಯಕರನ್ನು ಸದಾ ಟೀಕಿಸುವ ಮೂಲಕ ಸುದ್ದಿಯಾಗುವ ನಟಿ, ರಾಜಕಾರಣಿ ರೋಜಾ ಸದ್ಯ ಆಂಧ್ರ ಪ್ರದೇಶದಲ್ಲಿ ನಡೆಯಲಿರುವ ಮುನ್ಸಿಪಾಲ್​ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ನಗರಿ ಕ್ಷೇತ್ರದ ಶಾಸಕಿ ಹಾಗೂ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಮಂಡಳಿಯ ಅಧ್ಯಕ್ಷೆಯು ಆಗಿರುವ ರೋಜಾ ಭಾನುವಾರ ತಮ್ಮ ನಗರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ನಾಯಕರು ಮತ್ತು ಪುತ್ತೂರ್​ ಮುನ್ಸಿಪಾಲಿಟಿ ನಾಯಕರ ಜತೆ ಓಡಾಡಿ ತಮ್ಮ ಬೆಂಬಲಿಗರಿಗೆ ಮತ ಹಾಕುವಂತೆ ಮನವಿ ಮಾಡಿದರು.

ರೋಜಾ ಅವರ ಭೇಟಿ ವೇಳೆಯೇ ಚಿತ್ತೂರ್​ ಜಿಲ್ಲೆಯ ನಿಂದ್ರಾದಲ್ಲಿರುವ ಶಾಲೆಯಲ್ಲಿ ಕಬಡ್ಡಿ ಟೂರ್ನಮೆಂಟ್​ ಆಯೋಜಿಸಲಾಗಿತ್ತು. ಟೂರ್ನಮೆಂಟ್​ ಬಳಿ ಹೋದ ರೋಜಾ, ಆಟಗಾರರನ್ನು ಹುರಿದುಂಬಿಸಲು ಸೀರೆ ಎತ್ತಿ ಸೊಂಟಕ್ಕೆ ಕಟ್ಟಿಕೊಂಡು ಕಬಡ್ಡಿ ಕೋರ್ಟ್​ಗೆ ಇಳಿದರು.

ಕಬಡ್ಡಿ... ಕಬಡ್ಡಿ ಎನ್ನುತ್ತಾ ಕೆಲಕಾಲ ಆಟಗಾರರ ಜತೆ ಆಡುವ ಮೂಲಕ ಅವರನ್ನು ಹುರಿದುಂಬಿಸಿದರು. ರೋಜಾ ಮತ್ತೊಮ್ಮೆ ಥಿರುವೆಲಾಂಗಾಡು ತಂಡದ ಜತೆ ಆಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net