ಹೆಣ್ಮಕ್ಳೇ ಸ್ಟ್ರಾಂಗು ಗುರು |ಮೊದಲು ಮನೆಯಲ್ಲಿನ ತಾಯಿಯನ್ನು ಗೌರವಿಸಿ: ನಿಮಿಕಾ ರತ್ನಾಕರ್

Nimika Rathnakar
Published on

ಹೆಣ್ಮಕ್ಳೇ ಸ್ಟ್ರಾಂಗು ಗುರು!

‘ಮಾ.8ರ ಮಹಿಳಾ ದಿನವ ಕೇವಲ ಒಂದೇ ದಿನ ಆಚರಿಸುವಂಥದ್ದಲ್ಲ. ಅದು ನಿತ್ಯದ ಸಂಭ್ರಮ, ಸಡಗರ’- ಹೀಗೆ ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತ ಮಾಡಬೇಡಿ ಎಂಬುದು ಸಿನಿಮಾ, ಕಿರುತೆರೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡವರ ಮಾತು. ಏಕೆ ಎಂಬುದನ್ನು ಅವರೇ ವಿಜಯವಾಣಿ ಜತೆ ಹೇಳಿಕೊಂಡಿದ್ದಾರೆ..

ಮೊದಲು ಮನೆಯಲ್ಲಿನ ತಾಯಿಯನ್ನು ಗೌರವಿಸಿ

ನಮಗೆ ಅಂತ ಒಂದು ದಿನ ಇದೆ. ಆ ಒಂದು ದಿನವಷ್ಟೇ ಸಂಭ್ರಮಿಸುವುದರಲ್ಲಿ ಅರ್ಥವಿಲ್ಲ. ಪ್ರತಿ ದಿನವೂ ಸೆಲೆಬ್ರೆಷನ್ ಆಗಬೇಕು. ಅದರಲ್ಲೂ ಮೊದಲಿಗೆ ಪ್ರತಿ ಮನೆಯಲ್ಲಿನ ತಾಯಿಗೂ ಗೌರವ ಸಲ್ಲಿಸಬೇಕು. ಏಕೆಂದರೆ ಅವರದ್ದು ಬೆಲೆಕಟ್ಟಲಾಗದ ಕೆಲಸ. ನಾವು ದಿನದ ಏಳೆಂಟು ಗಂಟೆ ಮಾತ್ರ ಕೆಲಸ ಮಾಡುತ್ತೇವೆ. ಮನೆಯಲ್ಲಿರುವ ತಾಯಿಗೆ ವರ್ಷಪೂರ್ತಿ ಕೆಲಸ. ಹಾಗಾಗಿ ನಮ್ಮ ಮನೆಗಳಲ್ಲಿನ ಆ ತಾಯಿಗೆ ಮೊದಲು ಗೌರವ ನೀಡಬೇಕಿದೆ. ಅವಳ ಶ್ರಮಕ್ಕೆ ಸಲಾಂ ಎನ್ನಬೇಕಿದೆ. ಇದೆಲ್ಲವನ್ನು ಬದಿಗಿಟ್ಟು ಹೊರಗಡೆ ಬಂದರೆ, ಸಮಾನತೆ ವಿಚಾರದಲ್ಲಿ ಪುರುಷ ಮತ್ತು ಸ್ತ್ರೀ ಸರಿಸಮವಾಗಿದ್ದಾರೆ. ಅವಕಾಶಗಳ ಬಗ್ಗೆ ಹೇಳುವುದಾದರೆ, ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ಮುಂಚೂಣಿಯಲ್ಲಿದ್ದಾಳೆ. ಸಲ್ಲಬೇಕಾದ ಗೌರವವೂ ಸಲ್ಲುತ್ತಿದೆ. ಒಂದಷ್ಟು ಸಣ್ಣ ಪುಟ್ಟ ಅಡೆತಡೆಗಳು ಎದುರು ಬಂದರೂ ಅದನ್ನು ಅಷ್ಟೇ ಧೈರ್ಯದಿಂದ ಎದುರಿಸುತ್ತಿದ್ದಾಳೆ.

| ನಿಮಿಕಾ ರತ್ನಾಕರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net