More

    ಶೀಘ್ರದಲ್ಲಿ ತಾಪ್ಸೀ ಪನ್ನು ಕಲ್ಯಾಣ! ಮದುವೆ ಗಂಡು ಯಾರು?

    ಸಿನಿಮಾ ಮಂದಿಯ ಮದುವೆ ಅಂದರೆ ಅದೊಂದು ಕೌತುಕದ ಕಣಜ. ಯಾರು ಯಾರನ್ನು ಮದುವೆ ಆಗುತ್ತಾರೆ ಎಂಬ ಕುತೂಹಲ. ಆ ಕುತೂಹಲ ಹೆಚ್ಚಿಸಲು ಬಾಲಿವುಡ್​ ನಟಿಯೊಬ್ಬರು ಅಣಿಯಾಗಿದ್ದಾರೆ. ಅಂದರೆ, ಶೀಘ್ರದಲ್ಲಿ ಸಿಂಗಲ್​ ಬದುಕಿಗೆ ಇತಿಶ್ರೀ ಹಾಡಿ, ಜಂಟಿಯಾಗಲಿದ್ದಾರಂತೆ.

    ಇದನ್ನೂ ಓದಿ: ಡೈರೆಕ್ಟರ್ ಆದ್ರು ಸಲ್ಮಾನ್ …‘ತೇರೆ ಬಿನಾ’ ಎಂಬ ಹಾಡಿಗೆ ಆ್ಯಕ್ಷನ್-ಕಟ್!

    ಹೌದು, ಸದ್ಯ ಕಂಟೆಂಟ್ ಓರಿಯೆಂಟೆಡ್​ ಶೈಲಿಯ ಸಿನಿಮಾಗಳಿಂದಲೇ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ತಾಪ್ಸೀ ಪನ್ನು, ಮದುವೆ ಬಗ್ಗೆ ಮಾತನಾಡಿದ್ದಾರೆ. ಆದರೆ, ಆ ಮದುವೆ ಹೇಗೆ ನಡೆಯಬೇಕು ಎಂಬುದಕ್ಕೆ ಒಂದಷ್ಟು ಕಂಡಿಷನ್​ಗಳನ್ನೂ ಹೇಳಿಕೊಂಡಿದ್ದಾರೆ. ‘ಯಾವುದೇ ಕಾರಣಕ್ಕೂ ಅದ್ದೂರಿಯಾಗಿ ಮದುವೆ ನಡೆಯಕೂಡದು. ನಮ್ಮ ಕುಟುಂಬಸ್ಥರಿಗೆ ಮಾತ್ರ ಅದು ಸೀಮಿತವಾಗಿರಬೇಕು. ನನಗೆ ಮೂರ್ನಾಲ್ಕು ದಿನದ ಮದುವೆ ಕಾರ್ಯಕ್ರಮ ಇಷ್ಟವಾಗುವುದಿಲ್ಲ. ಒಂದೇ ದಿನದಲ್ಲಿ ಮದುವೆ ಮುಗಿಯಬೇಕು’ ಎಂದಿದ್ದಾರೆ.

    ಶೀಘ್ರದಲ್ಲಿ ತಾಪ್ಸೀ ಪನ್ನು ಕಲ್ಯಾಣ! ಮದುವೆ ಗಂಡು ಯಾರು?

    ಇದನ್ನೂ ಓದಿ: ನನ್ನ ಭವಿಷ್ಯದ ಮಕ್ಕಳ ತಾಯಿ … ನಯನತಾರಾ ಜತೆಗೆ ಸಂಸಾರ ನಡೆಸುವ ಹಿಂಟ್ ಕೊಟ್ಟ ಶಿವನ್

    ಇಷ್ಟೆಲ್ಲ ಆಯ್ತು ಹಾಗಾದರೆ, ತಾಪ್ಸೀ ಮದುವೆ ಆಗೋ ಹುಡುಗ ಯಾರು? ಈಗಾಗಲೇ ಗೊತ್ತಿರುವಂತೆ ಬ್ಯಾಡ್ಮಿಂಟನ್​ ಆಟಗಾರ ಮಾಥಿಯಾಸ್ ಬಿಯೊ ಜತೆಗೆ ತಾಪ್ಸೀ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಲವು ವರ್ಷಗಳಿಂದ ಹರಿದಾಡುತ್ತಲೇ ಇದೆ. ಆದರೆ, ಸದ್ಯಕ್ಕೆ ಅವರ ಜತೆಯಲ್ಲೇ ಕಲ್ಯಾಣವಾಗುತ್ತಾ ಅಥವಾ ಬೇರೆ ಯಾರನ್ನಾದರೂ ಮದುವೆ ಆಗಲಿದ್ದಾರಾ ಎಂಬುದು ಸದ್ಯದ ಪ್ರಶ್ನೆ. (ಏಜೆನ್ಸೀಸ್​)

    ಕಿರುಚಿತ್ರ ಮಾಡುವ ಆಸೆ ಇದೆಯಾ? ಬಾಲಿವುಡ್ ನಟ ಸುನೀಲ್​ ಶೆಟ್ಟಿ ಕೊಡ್ತಿದ್ದಾರೆ ಅವಕಾಶ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts