ಡೈರೆಕ್ಟರ್ ಆದ್ರು ಸಲ್ಮಾನ್ ...‘ತೇರೆ ಬಿನಾ’ ಎಂಬ ಹಾಡಿಗೆ ಆ್ಯಕ್ಷನ್-ಕಟ್!

Salman Khan Final
Published on

ಲಾಕ್‌ಡೌನ್‌ನಿಂದ ತಮ್ಮ ಪನ್ವೇಲ್‌ನ ಫಾರ್ಮ್ ಹೌಸ್‌ನಲ್ಲಿ ಗೆಳತಿಯರಾದ ಜಾಕ್ವೆಲಿನ್ ರ್ನಾಂಡಿಸ್ ಮತ್ತು ಲೂಲಿಯಾ ಜತೆಗೆ ಸಲ್ಮಾನ್ ಖಾನ್ ಸಿಕ್ಕಿಬಿದ್ದಿರುವುದು ಗೊತ್ತೇ ಇದೆ. ಕೆಲಸ ಇಲ್ಲದೆ ಸುಸ್ತೆದ್ದು ಹೋಗಿದ್ದ ಸಲ್ಮಾನ್ ಏನ್ಮಾಡಿದ್ದಾರೆ ಗೊತ್ತಾ? ತಮ್ಮ ಫಾರ್ಮ್‌ಹೌಸ್‌ನಲ್ಲೇ ‘ತೇರೆ ಬಿನಾ’ ಎಂಬ ಹಾಡು ಶೂಟ್ ಮಾಡಿದ್ದಾರೆ. ಈಗಾಗಲೇ ಈ ಹಾಡಿನ ಟೀಸರ್​ ಬಿಡುಗಡೆಯಾಗಿದ್ದು, ಹಾಡನ್ನು ನಾಳೆ ಅಧಿಕೃತವಾಗಿ ಯೂಟ್ಯೂಬ್‌ನ ತಮ್ಮ ಚಾನಲ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ.

ಹೌದು, ಇದುವರೆಗೂ ನಿರ್ದೇಶನದಿಂದ ದೂರವೇ ಉಳಿದಿದ್ದ ಸಲ್ಮಾನ್ ಖಾನ್, ಈಗ ‘ತೇರೆ ಬಿನಾ ...’ ಎಂಬ ಹಾಡನ್ನು ಡೈರೆಕ್ಟ್ ಮಾಡಿದ್ದಾರೆ. ಈ ಹಾಡನ್ನು ಅವರು ತಮ್ಮದೇ ಫಾರ್ಮ್‌ಹೌಸ್‌ನಲ್ಲಿ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಶೂಟ್ ಮಾಡಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಇದೊಂದು ಅದ್ಭುತ ಲರ್ನಿಂಗ್ ಎಕ್ಸ್‌ಪೀರಿಯೆನ್ಸ್. ಮೂರೇ ಜನ ಒಂದು ಹಾಡನ್ನು ಶೂಟ್ ಮಾಡಬಹುದು ಎಂದು ತೋರಿಸಿಕೊಟ್ಟ ಹಾಡು. ಕಾಸ್ಟೂಮರ್, ಮೇಕಪ್ ಮ್ಯಾನ್ ಯಾರ ಸಹಾಯವೂ ಇಲ್ಲದೆ ಚಿತ್ರೀಕರಣ ಮಾಡಲಾಗಿದೆ. ಸಂಪೂರ್ಣವಾಗಿ ನಮ್ಮ ಫಾರ್ಮ್‌ಹೌಸ್‌ನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಮೇ 12ರಂದು ಮಧ್ಯಾಹ್ನ 12ಕ್ಕೆ ನನ್ನ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಲಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನು ಈ ಹಾಡಿನ ಕಾನ್ಸೆಪ್ಟ್ ಬಹಳ ಕಾಲದಿಂದ ಅವರ ತಲೆಯಲ್ಲಿತ್ತಂತೆ. ‘ನಮ್ಮ ಾರ್ಮ್ ಹೌಸ್‌ನ ಹುಡುಗರು ಪ್ರತಿ ರಾತ್ರಿ ಸಿನಿಮಾ ಹಾಡುಗಳನ್ನು ಹಾಡಿ ಸುಸ್ತಾಗಿದ್ದರು. ಬೇರೆ ಏನಾದರೂ ಹೊಸತು ಮಾಡಬೇಕೆಂದನಿಸಿತು. ಈ ಹಾಡಿನ ಯೋಚನೆ ಬಹಳ ಸಮಯದಿಂದ ಇತ್ತು. ಈಗ ಅವಕಾಶ ಸಿಕ್ಕಿದ್ದರಿಂದ ಇಲ್ಲೇ ಶೂಟಿಂಗ್ ಮಾಡಿದ್ದೇವೆ’ ಎಂದು ಸಲ್ಮಾನ್ ಹೇಳಿದ್ದಾರೆ.

ಈ ಹಾಡನ್ನು ಶಬ್ಬಿರ್ ಅಹ್ಮದ್ ಬರೆದರೆ, ಅಜಯ್ ಭಾಟಿಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನು ಈ ಹಾಡನ್ನು ಸಲ್ಮಾನ್ ಖಾನ್ ಅವರೇ ಹಾಡಿರುವುದು ಇನ್ನೊಂದು ಸ್ಪೆಷಾಲಿಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net