ನಿರ್ದೇಶಕ ಪುರಿ ಜಗನ್ನಾಥ್​ ಚಿತ್ರದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ​!? ಯಾರವರು ಎಂಬುದಕ್ಕೆ ಇಲ್ಲಿದೆ ಉತ್ತರ!

Puri-Jagannath-1024x681
Published on

ಲಾಕ್​ಡೌನ್​ ಹಿನ್ನೆಲೆಯಲ್ಲಿಯೂ ಸಿನಿಮಾ ಸಂಬಂಧಿ ಕೆಲಸಗಳಿಗೆ ಈಗಷ್ಟೇ ಆಯಾ ಸರ್ಕಾರಗಳು ಅನುಮತಿ ನೀಡಿವೆ. ಅನುಮತಿ ಸಿಕ್ಕಿದ್ದೇ ತಡ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಶುರುವಾಗಲಿವೆ. ಇನ್ನು ನಿರ್ದೇಶಕರು ಹೊಸ ಕಥೆಗಳ ಸೃಷ್ಟಿಯಲ್ಲಿ ಬಿಜಿಯಾಗಿದ್ದಾರೆ. ಕಲಾವಿದರು ನಿಯಮಿತ ಆಹಾರ, ದೇಹಾರೋಗ್ಯ ಕಾಪಾಡಿಕೊಳ್ಳುತ್ತ ಮುಂದಿನ ಸಿನಿಮಾಗಳಿಗೆ ಸಜ್ಜಾಗುತ್ತಿದ್ದಾರೆ. ಹೀಗಿರುವಾಗಲೇ ಟಾಲಿವುಡ್​ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಅಚ್ಚರಿ ವಿಷಯ ಏನೆಂದರೆ ಆ ಸಿನಿಮಾದಲ್ಲಿ ನಟಿಸುವಂತೆ ವಿದೇಶಿ ಕ್ರಿಕೆಟಿಗನಿಗೆ ಆಫರ್​ ನೀಡಿದ್ದಾರೆ ಜಗನ್ನಾಥ್​.

ಹೌದು, ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ದೇಶಾದ್ಯಂತ ಐಪಿಎಲ್ ಅಬ್ಬರ ಜೋರಾಗಿರುತ್ತಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಅದು ಸ್ಥಗಿತಗೊಂಡಿದೆ. ಇತ್ತ ಸಿನಿಮಾನೂ ಇಲ್ಲ, ಐಪಿಎಲ್​ ಸಹ ರದ್ದಾಯ್ತು. ಹಾಗಾಗಿ ಸನ್​ರೈಸರ್ಸ್ ಹೈದರಾಬಾದ್​ ಕ್ಯಾಪ್ಟನ್​ ಡೇವಿಡ್​ ವಾರ್ನರ್​, ಟಿಕ್​ಟಾಕ್​ನಲ್ಲಿ ಕಮಾಲ್​ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಬುಟ್ಟ ಬೊಮ್ಮ ಹಾಡಿಗೆ ಕುಟುಂಬದೊಟ್ಟಿಗೆ ಹೆಜ್ಜೆ ಹಾಕಿದ್ದ ವಿಡಿಯೋ ವೈರಲ್​ ಆಗಿತ್ತು. ಅದರ ಬೆನ್ನಲ್ಲೇ ಮಹೇಶ್​ ಬಾಬು ಸಿನಿಮಾದ ಡೈಲಾಗ್​ ಹೊಡೆದಿದ್ದಾರೆ. ಆ ಡೈಲಾಗ್​ ನೋಡಿಯೇ ಪುರಿ ಜಗನ್ನಾಥ್ ವಾರ್ನರ್​ಗೆ ಆಫರ್​ ನೀಡಿದ್ದಾರೆ.

ಮಹೇಶ್​ ಬಾಬು ‘ಪೊಕಿರಿ‘ ಚಿತ್ರದ ವಿಡಿಯೋ ನೋಡಿ ಥ್ರಿಲ್​ ಆದ ಪುರಿ, ‘ಡೇವಿಡ್​, ತುಂಬ ಚೆನ್ನಾಗಿದೆ. ಆ ಕೋಪ ತಾಪ ಸೂಪರ್​. ಈ ಡೈಲಾಗ್​ ನಿಮಗೆ ತುಂಬ ಚೆನ್ನಾಗಿ ಒಪ್ಪುತ್ತದೆ. ನೀವೊಬ್ಬ ಅದ್ಬುತ ನಟ. ನನ್ನ ಸಿನಿಮಾದಲ್ಲಿ ಒಂದು ಪಾತ್ರ ಮಾಡೇ ಮಾಡುತ್ತೀರಾ. ಲವ್​ ಯೂ’ ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ ನಟಿಸಲು ಪ್ರಯತ್ನಿಸುವೆ ಸರ್​ ಎಂದು ವಿನಮ್ರವಾಗಿ ಉತ್ತರ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net