ಕೋಮಲ್ ಮದುವೆಯಾಗಿ 20 ದಿನಕ್ಕೆ ಏನೆಲ್ಲಾ ಆಯ್ತು? ಜಗ್ಗೇಶ್ ಹೇಳುತ್ತಾರೆ ಕೇಳಿ

Jaggesh - Komal Final
Published on

ಲಾಕ್‌ಡೌನ್ ಸಮಯದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ ‘ನವರಸ ನಾಯಕ’ ಜಗ್ಗೇಶ್. ಇತ್ತೀಚಗಷ್ಟೇ ‘ಬಂಗಾರದ ಪಂಜರ’ ಚಿತ್ರವನ್ನು ಗೀತಾಂಜಲಿ ಚಿತ್ರಮಂದಿರದಲ್ಲಿ 70 ಪೈಸೆ ಕೊಟ್ಟು ನೋಡಿದ ಘಟನೆಯನ್ನು ಅವರು ನೆನಪಿಸಿಕೊಂಡಿದ್ದರು. ಭಾನುವಾರ ರಾತ್ರಿ ಕೋಮಲ್ ಮದುವೆಯ ಕಥೆಯನ್ನು ಅವರು ಬಿಚ್ಚಿಟ್ಟಿದ್ದಾರೆ.

ಈಗೇನು ಕೋಮಲ್ ಮದುವೆ ವಾರ್ಷಿಕೋತ್ಸವವಾ ಎಂಬ ಪ್ರಶ್ನೆ ಬರಬಹುದು. ಹಾಗೇನಿಲ್ಲ. ಭಾನುವಾರ, ಅಂತಾರಾಷ್ಟ್ರೀಯ ಅಮ್ಮಂದಿರ ದಿನಾಚರಣೆ ಇದ್ದಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಸಂದರ್ಭದಲ್ಲಿ ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ ಜಗ್ಗೇಶ್. ಕೋಮಲ್ ಮದುವೆಯಾದ 20 ದಿನಕ್ಕೆ ಅಮ್ಮ ದೇಹತ್ಯಾಗ ಮಾಡಿದರು ಎಂದು ಭಾವುಕರಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಅಮ್ಮ ನನಗೆ ಬೇಗ ಕೋಮಲ್ ಮದುವೆ ಮಾಡೋ ಈಶ, ಯಾಕೋ ಶಿವ ಕರೆದಂತೆ ಆಗುತ್ತಿದೆ ಎಂದು ಹಿಂಸೆಕೊಟ್ಟಳು. ವಾರದಲ್ಲೇ ಸ್ನೇಹಿತನ ತಂಗಿಯನ್ನು ಒಪ್ಪಿ, 20 ವರ್ಷದ ಕೋಮಲ್‌ಗೆ ಮದುವೆ ಮಾಡಿಸಿಬಿಟ್ಟೆ. ಕೂತು ಚಪ್ಪಾಳೆ ತಟ್ಟಿ ಆನಂದಿಸಿ, ಅವನು ಮದುವೆಯಾದ 20 ದಿನಕ್ಕೆ ದೇಹತ್ಯಾಗ ಮಾಡಿಬಿಟ್ಟಳು ಅಮ್ಮ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ಜಗ್ಗೇಶ್. ಜತೆಗೆ ಕೋಮಲ್​ ಮದುವೆಯ ಫೋಟೋವೊಂದನ್ನು ಅವರು ಶೇರ್​ ಮಾಡಿದ್ದಾರೆ

ಇನ್ನು ಮತ್ತೊಂದು ಟ್ವೀಟ್‌ನಲ್ಲಿ ತಾಯಿಯ ಮಹತ್ವದ ಬಗ್ಗೆ ಬರೆದಿರುವ ಅವರು, ‘ಇದ್ದಾಗಲೇ ಅವಳಿಗಾಗಿ ಬಾಳಿ. ಸತ್ತ ಮೇಲೆ ಫೋಟೋ ಮುಂದೆ ಅವಳ ಹೆಸರಲ್ಲಿ ವಡೆ-ಪಾಯಸ ಪ್ರೀತಿ ಬೇಡ. ಹೋದ ಮೇಲೆ ಮತ್ತೆ ಸಿಗಳು ಆ ದೇವತೆ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net