More

    ನಾನು ಎಂದುಕೊಂಡು ಫಾಲೋ ಮಾಡಬೇಡಿ… ಅಭಿಮಾನಿಗಳಿಗೆ ಭಾವನಾ ಮೆನನ್ ಮನವಿ

    ಬೆಂಗಳೂರು: ಸಿನಿಮಾ ತಾರೆಯರಿಗೂ ಸಾಮಾಜಿಕ ಜಾಲತಾಣಗಳಿಗೂ ಅವಿನಾಭಾವ ನಂಟು. ಸಿನಿಮಾ, ವೈಯಕ್ತಿಕ ಹೀಗೆ ಎಲ್ಲವನ್ನೂ ಅಭಿಮಾನಿಗಳ ಜತೆ ಹಂಚಿಕೊಳ್ಳುವುದಕ್ಕಿರುವ ಬೃಹತ್ ವೇದಿಕೆ. ಒಂದಷ್ಟು ಜನ ಜಾಲತಾಣಗಳ ಬಳಕೆಯಲ್ಲಿ ಮುಂದಿದ್ದರೆ, ಮತ್ತೆ ಕೆಲವರು ಅಷ್ಟಕಷ್ಟೇ. ಅದನ್ನೇ ಎನ್​ಕ್ಯಾಷ್ ಮಾಡಿಕೊಳ್ಳುವ ಕೆಲ ಫೇಕ್ ಗ್ರೂಪ್​ಗಳು ಕಲಾವಿದರ ಹೆಸರಲ್ಲಿ ಖಾತೆ ತೆರೆದು ಅಫಿಷಿಯಲ್ ಎಂದು ಹೇಳಿಕೊಂಡಿರುತ್ತವೆ. ಅಂತ ಸಾಕಷ್ಟು ಪುಟಗಳು ಈಗಲೂ ಚಾಲನೆಯಲ್ಲಿವೆ. ಈಗ ಆ ಫೇಕ್ ಫೇಸ್​ಬುಕ್ ಖಾತೆ ಬಗ್ಗೆಯೇ ನಟಿ ಭಾವನಾ ಮೆನನ್ ಮಾತನಾಡಿದ್ದಾರೆ.

    ಹೌದು, ಲಾಕ್​ಡೌನ್ ಹೊತ್ತಲ್ಲಿ ಸಾಕಷ್ಟು ಸಿನಿಮಾ ಮಂದಿಯ ಫೇಕ್ ಫೇಸ್​ಬುಕ್ ಖಾತೆಗಳು ತೆರೆಯಲ್ಪಟ್ಟಿದ್ದು, ಈಗಾಗಲೇ ಸೈಬರ್ ಕ್ರೖೆಂನಲ್ಲಿ ದೂರುಗಳು ದಾಖಲಾಗಿವೆ. ಅದೇ ರೀತಿ ಭಾವನಾ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಯಾಗಿತ್ತು. ಅದಕ್ಕೆ ಇನ್ಸ್​ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ನಾನು ಫೇಸ್​ಬುಕ್​ನಲ್ಲಿಲ್ಲ. ಬಳಕೆಯನ್ನೂ ಮಾಡುತ್ತಿಲ್ಲ. ಇದೀಗ ನನ್ನ ಹೆಸರಲ್ಲಿ ತೆರೆದ ಖಾತೆ ನಕಲಿ. ಹಾಗಾಗಿ ಇದನ್ನು ಯಾರೂ ಫಾಲೋ ಮಾಡಬೇಡಿ’ ಎಂದು ಅಭಿಮಾನಿಗಳನ್ನು ಅಲರ್ಟ್ ಮಾಡಿದ್ದಾರೆ. ಸದ್ಯ ಕನ್ನಡದಲ್ಲಿ ‘ಇನ್ಸ್​ಪೆಕ್ಟರ್ ವಿಕ್ರಂ’ ಸಿನಿಮಾದಲ್ಲಿ ಭಾವನಾ ನಟಿಸಿದ್ದಾರೆ. ಶಿವರಾಜ್ ಕುಮಾರ್ ಜತೆಗೆ ‘ಭಜರಂಗಿ 2’ ಮತ್ತು ಸುಮಂತ್ ಶೈಲೇಂದ್ರ ಜತೆಗೆ ‘ಗೋವಿಂದ ಗೋವಿಂದ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts