ಯುವ ಮೊದಲ ಚಿತ್ರದ ಟೀಸರ್ ಮೇಕಿಂಗ್ ವಿಡಿಯೋ ಹೀಗಿದೆ ನೋಡಿ ...

Yuva Final
Published on

ಡಾ. ರಾಜಕುಮಾರ್ ಮೊಮ್ಮಗ, ರಾಘವೇಂದ್ರ ರಾಜಕುಮಾರ್ ಮಗ ಯುವ ರಾಜಕುಮಾರ್ ಅಭಿನಯದ ಮೊದಲ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವಾದ ಏಪ್ರಿಲ್ 24ರಂದು ಈ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿತ್ತು. ಈ ಮಧ್ಯೆ ಚಿತ್ರದ ಟೀಸರ್‌ನ ಚಿತ್ರೀಕರಣವಾಗಿದ್ದು, ಆ ಟೀಸರ್‌ನ ಮೇಕಿಂಗ್ ವಿಡಿಯೋ ಇಂದು ಬಿಡುಗಡೆ ಮಾಡಲಾಗಿದೆ.

ಯುವ ಅಭಿನಯದ ಮೊದಲ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ಈ ಚಿತ್ರವರು ‘ವೈಆರ್-01’ ಎಂದು ಕರೆಯಲಾಗುತ್ತಿದೆ. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಪುನೀತ್ ರುದ್ರನಾಗ್. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಪುನೀತ್‌ಗೆ ಗಿಫ್ಟ್​ ಆಗಿ ಚಿತ್ರತಂಡವು ಈ ಟೀಸರ್ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲ, ಅದನ್ನು ಯುವ ರಾಜಕುಮಾರ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

‘ನನ್ನ ಗುರುಗಳು ಹಾಗೂ ನನ್ನ ನಿರ್ದೇಶಕರಾದ ಪುನೀತ್ ರುದ್ರನಾಗ್ ಸಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ವಿಶ್ ಮಾಡುತ್ತಾ ಯುವ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಪುನೀತ್ ಅವರ ಹುಟ್ಟುಹಬ್ಬವಾದ್ದರಿಂದ, ಹೆಚ್ಚಾಗಿ ಅವರನ್ನೇ ಈ ವಿಡಿಯೋದಲ್ಲಿ ಫೋಕಸ್ ಮಾಡಲಾಗಿದೆ. ಅವರು ಸೆಟ್‌ನಲ್ಲಿ ಹೇಗೆ ಕೆಲಸ ಮಾಡುತ್ತಿದ್ದರು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ವಿಶೇಷವೆಂದರೆ, ಪುನೀತ್ ರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಸಹ ಸೆಟ್‌ಗೆ ಭೇಟಿ ಕೊಟ್ಟು ಚಿತ್ರತಂಡಕ್ಕೆ ಶುಭ ಹಾರೈಸಿ ಹೋಗಿದ್ದಾರೆ. ಸೆಟ್‌ನಲ್ಲಿ ಪುನೀತ್ ಮತ್ತು ರಾಘವೇಂದ್ರ ರಾಜಕುಮಾರ್ ಇರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಇನ್ನು ‘ವೈಆರ್ - 01’ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳೆಲ್ಲಾ ಮುಗಿದಿದ್ದು, ಲಾಕ್‌ಡೌನ್ ಮುಗಿದ ನಂತರ ಬಹುಶಃ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net