More

    ಅಮ್ಮಂದಿರ ದಿನಕ್ಕೆ ‘ಕೆಜಿಎಫ್​’ ತಂಡದಿಂದ ಹೀಗೊಂದು ವಿಶೇಷ ನಮನ

    ಬೆಂಗಳೂರು: ರಾಕಿಂಗ್​ ಸ್ಟಾರ್ ಯಶ್ ನಾಯಕತ್ವದ ‘ಕೆಜಿಎಫ್​’ ಸಿನಿಮಾ ಸ್ಯಾಂಡಲ್​ವುಡ್ ಇತಿಹಾಸದಲ್ಲಿ ಹೊಸ ದಾಖಲೆಗೆ ಕಾರಣವಾದ ಸಿನಿಮಾ. ಮಾಸ್​ ಪ್ರೇಕ್ಷಕರನ್ನು ಸೆಳೆದಿದ್ದ ಈ ಸಿನಿಮಾ, ಭಾವುಕ ಆಡಿಯನ್ಸ್​ಗೂ ಇಷ್ಟವಾಗಿತ್ತು. ನಾಯಕ ಮತ್ತು ಆತನ ತಾಯಿಯ ಸೆಂಟಿಮೆಂಟ್ ಸಿನಿಮಾದ ಹೈಲೈಟ್​ಗಳಲ್ಲೊಂದು. ಅದರಲ್ಲೂ ಗರ್ಭದಿ ನನ್ನಿರಿಸಿ.. ಹಾಡು ದೊಡ್ಡ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು. ಈಗ ಅದೇ ಹಾಡು ಮತ್ತೆ ಸುದ್ದಿಯಲ್ಲಿದೆ.

    ಇದನ್ನೂ ಓದಿ: ಮದರ್ಸ್​ ಡೇ ಪ್ರಯುಕ್ತ ಅಮ್ಮನ ಫೋಟೋ ಹಂಚಿಕೊಂಡ ಸಿನಿಮಾ, ಕಿರುತೆರೆ ತಾರೆಯರು..

    ಹೌದು, ತಾಯಿಯ ಬಗ್ಗೆ ಹೇಳುವ ಈ ಹಾಡನ್ನು ತಾಯಂದಿರ ದಿನಕ್ಕೆ ಅರ್ಪಣೆ ಮಾಡಿದೆ ಕೆಜಿಎಫ್​ ತಂಡ. ತಾಯಂದಿರ ದಿನದ ನಿಮಿತ್ತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್​ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆ ಹಾಡಿನ ಲಿಂಕ್​ ಅನ್ನು ಮತ್ತೆ ಪೋಸ್ಟ್ ಮಾಡಿಕೊಂಡು, ಈ ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ ಎಂದಿದೆ.

    ಇದನ್ನೂ ಓದಿ: ಅಮಿತಾಬ್​ ಬಚ್ಚನ್​ ನಟನೆಯ ಈ ಎರಡು ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆ

    ಸದ್ಯ ಬಹುತೇಕ ಚಿತ್ರೀಕರಣದ ಕೆಲಸಗಳನ್ನು ಮುಗಿಸಿಕೊಂಡಿರುವ ‘ಕೆಜಿಎಫ್​’ ಅಕ್ಟೋಬರ್​ ವೇಳೆಗೆ ತೆರೆಗೆ ಬರಲಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್​ ಕೆಲಸಗಳಲ್ಲಿ ಬಿಜಿಯಾಗಿದೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಬಾಲಿವುಡ್​ ನಟ ಸಂಜಯ್​ ದತ್ ಮತ್ತು ರವೀನಾ ಟಂಡನ್ ಸಹ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.

    ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ನಾಣ್ಯ ನೀಡಿದ ಸ್ಯಾಂಡಲ್​ವುಡ್ ನಿರ್ಮಾಪಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts