More

    ಅಮಿತಾಬ್​ ಬಚ್ಚನ್​ ನಟನೆಯ ಈ ಎರಡು ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆ

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಬಗ್ಗೆ ಸದ್ಯಕ್ಕೆ ಯಾವುದೇ ಪಾಸಿಟಿವ್​ ಪ್ರತಿಕ್ರಿಯೆ ಸಿಗುತ್ತಿಲ್ಲ. ಕರೊನಾ ಹಾವಳಿ ತಗ್ಗಿ, ಸಿನಿಮಾ ಬಿಡುಗಡೆಗೆ ಸರ್ಕಾರ ಹಸಿರು ನಿಶಾನೆ ತೋರಿದ ಬಳಿಕವಷ್ಟೇ ರಿಲೀಸ್​ ಭಾಗ್ಯ. ಅಲ್ಲಿಯವರೆಗೂ ಶೂಟಿಂಗ್​ ಹೊರತುಪಡಿಸಿ ಸಿನಿಮಾ ಸಂಬಂಧಿಸಿದ ಕೆಲಸಗಳನ್ನು ಮುಗಿಸಿಕೊಳ್ಳುವುದೊಂದೆ ಕೆಲಸ. ಹೀಗಿರುವಾಗಲೇ ಬಾಲಿವುಡ್​ನಲ್ಲೀಗ ಓಟಿಟಿ (ಓವರ್​ ದಿ ಟಾಪ್​) ಪ್ಲಾಟ್​ಫಾರ್ಮ್​ ಚುರುಕು ಪಡೆದುಕೊಂಡಿದೆ. ಸಾಲು ಸಾಲು ಸಿನಿಮಾಗಳನ್ನು ಬಿಡುಗಡೆ ಮಾಡಲು ಸಿದ್ಧತೆ ಅಲ್ಲಿನ ನಿರ್ಮಾಪಕರು ಮಾಡಿಕೊಳ್ಳಲಾಗುತ್ತಿದ್ದಾರೆ.

    ಇದನ್ನೂ ಓದಿ: ಅನ್ನಪೂರ್ಣ ಕೈ ಹಿಡಿದ ನಿರ್ದೇಶಕ ಎ.ಪಿ ಅರ್ಜುನ್​

    ಹೌದು, ಬಾಲಿವುಡ್​ನಲ್ಲಿ ಓಟಿಟಿ ವೇದಿಕೆಗೆ ಒಳ್ಳೇ ಬೇಡಿಕೆ ಇದೆ. ಸಣ್ಣ ಬಜೆಟ್​ನಲ್ಲಿ ಸಿದ್ಧವಾದ ಸಿನಿಮಾಗಳನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ, ನಿರ್ಮಾಪಕರು ಸೇಫ್! ಇದರೊಂದಿಗೆ ಲಾಕ್​ಡೌನ್​ ಬೆನ್ನಲ್ಲೇ ಓಟಿಟಿ ಬಳಕೆದಾರರ ಸಂಖ್ಯೆಯಲ್ಲೂ ಹೆಚ್ಚಳ ಕಂಡು ಬಂದಿದ್ದು, ಅದನ್ನೂ ನಿರ್ಮಾಪಕರು ಎನ್​ಕ್ಯಾಶ್​ ಮಾಡಿಕೊಂಡು, ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇದೀಗ ಆ ಪೈಕಿ ಅಮಿತಾಬ್​ ಬಚ್ಚನ್​ ಮತ್ತು ಆಯುಷ್ಮಾನ್​ ಖುರಾನಾ ನಾಯಕತ್ವದ ‘ಗುಲಾಬೊ​ ಸಿತಾಬೋ’ ಸಿನಿಮಾ ನೇರವಾಗಿ ಓಟಿಟಿಗೆ ಬರಲು ಸಿದ್ಧವಾಗಿದೆ. ಸೂಜಿತ್​ ಸಿರ್ಕಾರ್​ ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ಚಿತ್ರ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಲಿದೆ. ಶೀಘ್ರದಲ್ಲಿ ರಿಲೀಸ್ ದಿನಾಂಕವನ್ನೂ ಹಂಚಿಕೊಳ್ಳಲಿದೆ ಚಿತ್ರತಂಡ.

    ಇದನ್ನೂ ಓದಿ: ವಿಜಯ್​ ದೇವರಕೊಂಡ ಬರ್ತ್​ಡೇ: ಕಾಮ್ರೆಡ್​ ಕ್ರಷ್​ಗೆ ರಶ್ಮಿಕಾ ಮಂದಣ್ಣ ವಿಶ್​ ಹೇಗಿದೆ ನೋಡಿ!!

    ಇನ್ನು ನವಾಜುದ್ದೀನ್​ ಸಿದ್ಧಿಕಿ ಮುಖ್ಯಭೂಮಿಕೆ ನಿಭಾಯಿಸಿರುವ ಅಮಿತಾಬ್​ ಅತಿಥಿ ಪಾತ್ರ ನಿಭಾಯಿಸಿರುವ ‘ಘೂಮಕೇತು’ ಸಿನಿಮಾ ಸಹ ಜೀ 5ನಲ್ಲಿ ಬಿಡುಗಡೆ ಆಗಲಿದೆ. ಮೇ 22ರಂದು ಸಿನಿಮಾ ಬಿಡುಗಡೆ ಆಗುವ ಬಗ್ಗೆ ಈಗಾಗಲೇ ಜೀ5 ಅಧಿಕೃತ ಘೋಷಣೆ ಮಾಡಿಕೊಂಡಿದ್ದು, ಫ್ಯಾಂಟಮ್​ ಮತ್ತು ಸೋನಿ ಪಿಕ್ಚರ್ಸ್​ ಚಿತ್ರಕ್ಕೆ ಬಂಡವಾಳ ಹೂಡಿವೆ. ಇದರ ಜತೆಗೆ ಅಕ್ಷಯ್​ ಕುಮಾರ್ ನಟನೆಯ ಲಕ್ಷ್ಮೀ ಬಾಂಬ್​ ಸಿನಿಮಾ ಸಹ ಓಟಿಟಿಯಲ್ಲಿ ರಿಲೀಸ್​ ಆಗಲಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್​)

    ಮದರ್ಸ್​ ಡೇ ಪ್ರಯುಕ್ತ ಅಮ್ಮನ ಫೋಟೋ ಹಂಚಿಕೊಂಡ ಸಿನಿಮಾ, ಕಿರುತೆರೆ ತಾರೆಯರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts