More

    ಪೊಗರು ‘ಖರಾಬು’ ಹಾಡಿಗೆ ವಿದೇಶಿ ಪೈಲ್ವಾನರ ಸ್ಟೆಪ್

    ಬೆಂಗಳೂರು ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ನಾಯಕತ್ವದ ‘ಪೊಗರು’ ಚಿತ್ರದ ‘ಖರಾಬು …’ ಹಾಡು ಏಪ್ರಿಲ್ 2ರಂದು ರಾಮನವಮಿ ನಿಮಿತ್ತ, ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿತ್ತು. ಅದಾದ ಬಳಿಕ ಕೆಲವೇ ದಿನಗಳಲ್ಲಿ ಕೋಟಿ ಜನರಿಂದ ವೀಕ್ಷಣೆಗೊಳಪಟ್ಟಿತ್ತು. ಇದೀಗ ಈ ಹಾಡು ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ. ಅಲ್ಲಿನ ಜಿಮ್ಗಳಲ್ಲಿ ಈ ಹಾಡು ಮೊಳಗುತ್ತಿದೆ. ಅಷ್ಟೇ ಅಲ್ಲ, ಅಲ್ಲಿನ ಬಾಡಿ ಬಿಲ್ಡರ್‌ಗಳು ಧ್ರುವ ರೀತಿಯಲ್ಲಿಯೇ ಹಾಡಿಗೆ ಸ್ಟೆಪ್ ಹಾಕುತ್ತಿದ್ದಾರೆ!
    ಕನ್ನಡ ಸಿನಿಮಾಗಳಿಗೆ ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಅದರಲ್ಲೂ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಎಂದೇ ಹೇಳಲಾಗುತ್ತಿರುವ ‘ಪೊಗರು’, ಸದ್ಯ ಪ್ರೇಕ್ಷಕರ ಪಾಲಿಗೆ ಹಾಟ್ ಕೇಕ್ ರೀತಿ ಪರಿಣಮಿಸಿದೆ. ಫ್ರಾನ್ಸ್ ಮತ್ತು ಅಮೆರಿಕದಲ್ಲಿ ‘ಖರಾಬು …’ ಹಾಡು ಸೌಂಡ್ ಮಾಡುತ್ತಿದೆ. ಹಾಗೆ ಸದ್ದು ಮಾಡುತ್ತಿರುವುದಕ್ಕೆ ಕಾರಣ ‘ಪೊಗರು’ ಚಿತ್ರದಲ್ಲಿನ ಖಳನಾಯಕರು.

    ಇದನ್ನೂ ಓದಿ: ಅಮ್ಮಂದಿರ ದಿನಕ್ಕೆ ‘ಕೆಜಿಎಫ್​’ ತಂಡದಿಂದ ಹೀಗೊಂದು ವಿಶೇಷ ನಮನ

    ಹೌದು, ಸಿನಿಮಾದಲ್ಲಿ ಫ್ರೆಂಚ್ ಬಾಡಿಬಿಲ್ಡರ್ ಮಾರ್ಗನ್ ಆಸ್ತೆ, ಅಮೆರಿಕದ ಕೈ ಗ್ರೀನಿ, ಜಾನ್ ಲುಕಾಸ್, ಜಿ ಲಿಂಡರ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಅಷ್ಟೇ ಅಲ್ಲ, ನಿರ್ದೇಶಕ ನಂದಕಿಶೋರ್ ಮತ್ತು ಧ್ರುವ ಸರ್ಜಾ ಅವರ ಹೆಸರನ್ನೂ ಹೇಳಿ ಜಿಮ್ನಲ್ಲಿ ಕುಣಿದಿದ್ದಾರೆ. ಕೊನೆಗೆ ‘ಜೈ ಆಂಜನೇಯ’ ಅಂತಲೂ ಎಂದಿದ್ದಾರೆ. ಈ ವಿಡಿಯೋಗಳನ್ನು ಸ್ವತಃ ಧ್ರುವ ಜಾಲತಾಣದಲ್ಲಿ ಹಂಚಿಕೊಂಡಿದ್ದು, ‘ಪೊಗರು ಇಂಟರ್‌ನ್ಯಾಶನಲ್’ ಎಂಬ ಕ್ಯಾಪ್ಷನ್ ಕೊಟ್ಟು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ನಾಣ್ಯ ನೀಡಿದ ಸ್ಯಾಂಡಲ್​ವುಡ್ ನಿರ್ಮಾಪಕಿ

    ಹಾಡಿನಲ್ಲಿ ಪಕ್ಕಾ ಟಪೋರಿ ಸ್ಟೈಲ್ನಲ್ಲಿ ಕಾಣಿಸಿಕೊಂಡಿರುವ ಧ್ರುವ, ಮಾಸ್ ಅವತಾರದಲ್ಲಿ ಅಭಿಮಾನಿಗಳನ್ನು ಹಾಡಿನ ಮೂಲಕ ರಂಜಿಸಿದ್ದಾರೆ. ರಶ್ಮಿಕಾ ಮಂದಣ್ಣ ಸಹ ಹಾಡಿನಲ್ಲಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಡೈಲಾಗ್ ಟೀಸರ್ ಮೂಲಕ ಅಬ್ಬರಿಸಿದ್ದ ಧ್ರುವ, ಕರೊನಾ ಹೊತ್ತಲ್ಲಿ ಖರಾಬು ದರ್ಶನ ಮಾಡಿಸಿದ್ದರು. ಅಂದಹಾಗೆ, ಈ ಹಾಡಿಗೆ ಸಂಗೀತ ನೀಡಿ, ಸಾಹಿತ್ಯ ಬರೆದು ಧ್ವನಿ ನೀಡಿರುವುದು ಚಂದನ್ ಶೆಟ್ಟಿ. ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದು, ಬಿ.ಕೆ ಗಂಗಾಧರ್ ಬಂಡವಾಳ ಹೂಡಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ ತಿಂಗಳಲ್ಲೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೋವಿಡ್ ಹಾವಳಿಯಿಂದ ಸಿನಿಮಾ ರಿಲೀಸ್ ಮುಂದೂಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts