

ಮುಂಬೈ: ಬಾಲಿವುಡ್ನ ಮಾದಕ ಬೆಡಗಿ, ರೂಪದರ್ಶಿ ಪೂನಂ ಪಾಂಡೆ ಮತ್ತು ಆಕೆಯ ಗೆಳೆಯನನ್ನು ಭಾನುವಾರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಂದಿಲ್ಲೊಂದು ವಿವಾದ, ಬೋಲ್ಡ್ ಫೋಟೋಶೂಟ್ಗಳಿಂದಲೇ ಸದಾ ಸುದ್ದಿಯಲ್ಲಿರುವ 29 ವರ್ಷದ ಪೂನಂ ಪಾಂಡೆ ಈ ಬಾರಿ ಕೋವಿಡ್-19 ಲಾಕ್ಡೌನ್ ಉಲ್ಲಂಘಿಸಿ ಕಾನೂನು ಕ್ರಮ ಎದುರಿಸುವಂತಾಗಿದೆ. ಇಡೀ ದೇಶವೇ ಕರೊನಾ ಮಣಿಸುವ ಹೋರಾಟದಲ್ಲಿದೆ. ಈಕೆ ಮಾತ್ರ ಲಾಕ್ಡೌನ್ ನಿಯಮ ಜಾರಿಯಲ್ಲಿದ್ದರೂ ಕ್ಯಾರೆ ಎನ್ನದೆ ಮುಂಬೈನ ಮರೀನ್ ಡ್ರೈವ್ನಲ್ಲಿ ತನ್ನ ಗೆಳೆಯ ಸ್ಯಾಮ್ ಅಹ್ಮದ್ ಬಾಂಬೆ (46) ಜತೆ ಸುತ್ತಾಡಲು ಕಾರಿನಲ್ಲಿ ಹೋಗಿದ್ದಳು.
ಇದನ್ನೂ ಓದಿರಿ ಯುವ ಮೊದಲ ಚಿತ್ರದ ಟೀಸರ್ ಮೇಕಿಂಗ್ ವಿಡಿಯೋ ಹೀಗಿದೆ ನೋಡಿ …
ಜೀವಕ್ಕೆ ಅಪಾಯ ತರುವ ರೋಗದ ಸೋಂಕನ್ನು ಹರಡುವ ಸಾಧ್ಯತೆ ಇರುವ ನಿರ್ಲಕ್ಷ್ಯದ ಕ್ರಿಯೆ ಮತ್ತು ಲಾಕ್ಡೌನ್ಗೆ ಅಸಹಕಾರ, ರಾಷ್ಟ್ರೀಯ ವಿಪತ್ತು ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪೂನಂ ಪಾಂಡೆ ಮತ್ತು ಸ್ಯಾಮ್ ಅಹ್ಮದ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಮೃತ್ಯುಂಜಯ ಹಿರೇಮಠ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತನ್ನ ಮೈಮಾಟ ತೋರಿಸುತ್ತಲೇ ಲಕ್ಷಾಂತರ ಅಭಿಮಾನಿಗಳನ್ನು ಪೂನಂ ಪಾಂಡೆ ಹೊಂದಿದ್ದಾಳೆ. ಪಡ್ಡೆಹುಡುಗರ ಫೇವರಿಟ್ ನಟಿ, ಬಿಟೌನ್ ವೈಯ್ಯಾರಿ ಈಗ ಕಾನೂಕು ಸಂಕಷ್ಟಕ್ಕೆ ಸಿಲುಕಿರುವುದು ಅವರ ಅಭಿಮಾನಿಗಳಿಗೆ ಭಾರಿ ಬೇಸರದ ವಿಷಯವಾದರೂ, ಲಾಕ್ಡೌನ್ ಉಲ್ಲಂಘಿಸುವ ಅನಿವಾರ್ಯತೆಯಾದಾರೂ ಏನಿತ್ತು? ಎಂದು ಕೆಲವರು ಟೀಕಿಸಿದ್ದಾರೆ.