Tim David : ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದ ಕೆಲ ಕಾಲ ಸ್ಥಗಿತಗೊಂಡಿದ್ದ ಐಪಿಎಲ್ 2025 ಲೀಗ್ ಶನಿವಾರ (ಮೇ 17) ದಿಂದ ಪುನಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ಆಟಗಾರರು ಒಬ್ಬೊಬ್ಬರಾಗಿ ಭಾರತಕ್ಕೆ ಮರಳುತ್ತಿದ್ದಾರೆ. ಈಗಾಗಲೇ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಎಲ್ಲಾ ಆಟಗಾರರು ತಂಡವನ್ನು ಸೇರಿಕೊಂಡಿದ್ದಾರೆ. ವಿದೇಶಿ ಆಟಗಾರರು ಸಹ ಆಗಮಿಸಿದ್ದಾರೆ.

ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡ, ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಎದುರಿಸಲಿದೆ. ಎರಡೂ ತಂಡಗಳ ಆಟಗಾರರು ಈಗಾಗಲೇ ಬೆಂಗಳೂರಿಗೆ ತಲುಪಿದ್ದಾರೆ. ಆರ್‌ಸಿಬಿ ಆಟಗಾರರು ಗುರುವಾರ ಅಭ್ಯಾಸ ಮಾಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದರು. ಆದರೆ, ಅಭ್ಯಾಸ ಮಾಡುವಾಗ ಜೋರಾಗಿ ಮಳೆ ಸುರಿಯಿತು. ಇದರಿಂದ ಅಭ್ಯಾಸಕ್ಕೆ ಅಡ್ಡಿಯಾಯಿತು. ಈ ವೇಳೆ ಆಟಗಾರರೆಲ್ಲ ಡ್ರೆಸ್ಸಿಂಗ್ ಕೋಣೆಗೆ ಹೋದರು. ಮೈದಾನದ ಸಿಬ್ಬಂದಿ ಪಿಚ್‌ಗಳು ಒದ್ದೆಯಾಗದಂತೆ ಅವುಗಳನ್ನು ಮುಚ್ಚಿದರು.
ಇದನ್ನೂ ಓದಿ: ನಕ್ಸಲ್ ಕಾರ್ಯಾಚರಣೆ ವೇಳೆ ಜೇನುನೋಣಗಳ ದಾಳಿ: ತಂಡದ ಗುರಾಣಿಯಂತಿದ್ದ CRPF Rolo ಹುತಾತ್ಮ!
ಭಾರೀ ಮಳೆಯಿಂದಾಗಿ, ಪಿಚ್‌ಗಳು ಒದ್ದೆಯಾಗದಂತೆ ಅಳವಡಿಸಿದ್ದ ಕವರ್‌ಗಳ ಮೇಲೆ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಯಿತು. ಈ ವೇಳೆ, ಆಸ್ಟ್ರೇಲಿಯಾದ ಸ್ಫೋಟಕ ಆಟಗಾರ ಟಿಮ್ ಡೇವಿಡ್ ತನ್ನ ಶರ್ಟ್ ಮತ್ತು ಪ್ಯಾಂಟ್ ಬಿಚ್ಚಿ, ಕೇವಲ ಅಂಡರ್ವೇರ್ನಲ್ಲಿ ಮಗುವಿನಂತೆ ಮಳೆಯ ನೀರಲ್ಲಿ ಆಟವಾಡಿದರು. ಕವರ್‌ಗಳ ಮೇಲಿನ ನೀರನ್ನು ಈಜುಕೊಳದಂತೆ ಭಾವಿಸಿದ ಡೇವಿಡ್, ಓಡಿ ಬಂದು ಅದರ ಮೇಲೆ ಡೈವ್ ಹೊಡೆಯುವ ಮೂಲಕ ನೀರಿನಲ್ಲಿ ಮೋಜು ಮಸ್ತಿ ಮಾಡಿದರು.
Tim David ❌
Swim David ✅Bengaluru rain couldn’t dampen Timmy’s spirits… Super TD Sopper came out in all glory. 😂
This is Royal Challenge presents RCB Shorts. 🩳🤣#PlayBold #ನಮ್ಮRCB #IPL2025 pic.twitter.com/PrXpr8rsEa
— Royal Challengers Bengaluru (@RCBTweets) May 16, 2025
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ‘ಟಿಮ್ ಡೇವಿಡ್ ಅಲ್ಲ.. ಸ್ಮಿಮ್ ಡೇವಿಡ್. ಮಳೆಗೆ ಡೇವಿಡ್ನ ಉತ್ಸಾಹವನ್ನು ತಡೆಯಲು ಸಾಧ್ಯವಾಗಲಿಲ್ಲ’ ಎಂಬ ಶೀರ್ಷಿಕೆ ನೀಡಿದೆ. ಇದೀಗ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಈ 3 ರಾಶಿಯಲ್ಲಿ ಜನಿಸಿದ ಮಹಿಳೆಯರಿಗೆ ಮೊಂಡುತನ ತುಂಬಾ ಜಾಸ್ತಿಯಂತೆ! ನಿಮ್ಮದೂ ಇದೇ ರಾಶಿನಾ? Zodiac Signs