CRPF Rolo : ಛತ್ತೀಸ್‌ಗಢದ ಅಪಾಯಕಾರಿ ಕೊರ್ಗೋಟಲು ಬೆಟ್ಟಗಳಲ್ಲಿ ನಡೆದ ಅತಿದೊಡ್ಡ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಭಾಗವಾಗಿದ್ದ ಎರಡು ವರ್ಷದ ಬೆಲ್ಜಿಯಂ ಶೆಫರ್ಡ್ ಶ್ವಾನ ಜೇನು ನೋಣಗಳ ದಾಳಿಗೆ ತನ್ನ ಪ್ರಾಣ ಕಳೆದುಕೊಂಡಿದೆ.

ಶ್ವಾನದ ಹೆಸರು ಕೆ9 ರೋಲೋ. ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಶ್ವಾನ ಘಟಕದ ಗಣ್ಯ ಸದಸ್ಯನಾಗಿದ್ದ. ರೋಲೋ, ಕಳೆದ ತಿಂಗಳಷ್ಟೇ ತನ್ನ ಎರಡನೇ ವರ್ಷಕ್ಕೆ ಕಾಲಿಟ್ಟಿತ್ತು. ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗುಟ್ಟಲು ಬೆಟ್ಟಗಳಲ್ಲಿ ಸಿಆರ್‌ಪಿಎಫ್ ಮತ್ತು ಛತ್ತೀಸ್‌ಗಢ ಪೊಲೀಸರು ನಡೆಸಿದ 21 ದಿನಗಳ ನಕ್ಸಲ್ ಕಾರ್ಯಾಚರಣೆಯ ಭಾಗವಾಗಿತ್ತು.
ಬೆಂಗಳೂರಿನ ಸಿಆರ್‌ಪಿಎಫ್ ಶ್ವಾನ ಸಾಕಣೆ ಮತ್ತು ತರಬೇತಿ ಶಾಲೆಯಲ್ಲಿ (ಡಿಬಿಟಿಎಸ್) ತರಬೇತಿ ಪಡೆದ ಈ ಶ್ವಾನವನ್ನು 2024, ಏಪ್ರಿಲ್ ತಿಂಗಳಲ್ಲಿ ಸಿಆರ್‌ಪಿಎಫ್ 228ನೇ ಬೆಟಾಲಿಯನ್‌ನಲ್ಲಿ ನಕ್ಸಲ್ ವಿರೋಧಿ ಕರ್ತವ್ಯಗಳಿಗೆ ಸೇರಿಸಲಾಯಿತು.
ಕೆಜಿಹೆಚ್‌ನಲ್ಲಿ ವಿಶೇಷ ಕಾರ್ಯಾಚರಣೆಯ ಸಮಯದಲ್ಲಿ, ರೋಲೋ ಮತ್ತು ಇತರ ಸಿಆರ್‌ಪಿಎಫ್ ಪಡೆಗಳು ತೀವ್ರ ಶೋಧ ಕಾರ್ಯಾಚರಣೆಯಲ್ಲಿದ್ದಾಗ, ಜೇನುನೊಣಗಳ ಗುಂಪೊಂದು ಏಕಾಏಕಿ ರೋಲೋ ಮೇಲೆ ದಾಳಿ ಮಾಡಿತು. ಈ ವೇಳೆ ರೋಲೋ ನಿರ್ವಾಹಕ ವೇಗವಾಗಿ ಓಡಿ, ಜೇನುನೊಣಗಳ ದಾಳಿಯನ್ನು ತಡೆಯಲು ಪಾಲಿಥಿಲೀನ್ ಹೊದಿಕೆಯಿಂದ ಅದನ್ನು ರಕ್ಷಿಸಲು ಪ್ರಯತ್ನಿಸಿದರು. ದುರದೃಷ್ಟವಶಾತ್, ಜೇನುನೊಣಗಳು ಹೊದಿಕೆಯೊಳಗೆ ನುಸುಳಿ ಇನ್ನಷ್ಟು ಮಾರಕವಾಗಿ ದಾಳಿ ಮಾಡಿದರು.
ಇದನ್ನೂ ಓದಿ: ತನ್ನ ಜಮೀನಿನಲ್ಲಿ 3000 ಕೋಟಿಗೂ ಅಧಿಕ ಚಿನ್ನ ಪತ್ತೆ ಮಾಡಿದ ರೈತ: ನಂತರ ನಡೆದಿದ್ದು ಬೇಸರದ ಸಂಗತಿ! Gold
ತೀವ್ರ ನೋವು ಮತ್ತು ಕಿರಿಕಿರಿಯಿಂದ ತತ್ತರಿಸಿ ಹೋಗಿದ್ದ ರೋಲೋ, ಕೋಪಗೊಂಡು ತನ್ನ ಹೊದಿಕೆಯನ್ನು ಒಮ್ಮೆ ಜೋರಾಗಿ ಅಲ್ಲಾಡಿಸಿತು. ಇದರಿಂದಾಗಿ ಜೇನುನೋಣುಗಳ ಇನ್ನಷ್ಟು ದಾಳಿಗೆ ಗುರಿಯಾಯಿತು. ಈ ಭೀಕರ ದಾಳಿಯ ಅಂತ್ಯದ ವೇಳೆಗೆ, ಅದರೊಳಗೆ ಸುಮಾರು 200 ಜೇನುನೊಣಗಳ ಕೊಂಡಿಗಳು ಇದ್ದವು. ಹೀಗಾಗಿ ರೋಲೋ ಪ್ರಜ್ಞೆ ಕಳೆದುಕೊಳ್ಳಬೇಕಾಯಿತು.
#crpfindia डीजी #gpsinghips ने K9 डॉग रोलो को मरणोपरांत डीजी कमेंडेशन डिस्क (सम्मान) देने की घोषणा की है। इस ऑपरेशन में शामिल डॉगी ‘रोलो’ ने जवानों को आईईडी से बचाने के लिए सर्चिंग में काफ़ी मदद की थी।#CRPF जवानों ने हथियार उल्टे कर रोलो को सलामी दी।#CRPFJAWAN#k9#rolo… pic.twitter.com/3OJXu9fsAn
— Paramilitary News(CAPF)🇮🇳 (@Paramilitary_in) May 15, 2025
ರೋಲೋವನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು. ಆದರೆ, ಪಶುವೈದ್ಯಕೀಯ ಆಸ್ಪತ್ರೆಗೆ ತಲುಪುವ ಮೊದಲೇ ವಿಷಪೂರಿತ ಕಡಿತಕ್ಕೆ ರೋಲೋ ಬಲಿಯಾಯಿತು. ಈ ಸಾವಿನಿಂದ ಸಿಆರ್ಪಿಎಫ್ಗೆ ಭಾರಿ ನಷ್ಟವಾಗಿದೆ. ರೋಲೋ ತ್ಯಾಗವನ್ನು ನೆನೆದು ಸಿಆರ್‌ಪಿಎಫ್ ಯೋಧರು ಕಣ್ಣೀರಿಟ್ಟರು. ರೋಲೋ ಧೈರ್ಯ ಮತ್ತು ಸೇವೆಯನ್ನು ಗುರುತಿಸಿ, ಸಿಆರ್‌ಪಿಎಫ್ ಮಹಾನಿರ್ದೇಶಕರು ಮರಣೋತ್ತರವಾಗಿ ಶ್ವಾನಕ್ಕೆ ನೀಡುವ ಅಪರೂಪದ ಗೌರವವಾದ ಡಿಜಿಯ ಪ್ರಶಂಸಾ ಡಿಸ್ಕ್ ಅನ್ನು ನೀಡುವ ಮೂಲಕ ಗೌರವ ಸಲ್ಲಿಸಿದರು. (ಏಜೆನ್ಸೀಸ್)
ಗಾಯಕಿ ಕೆನಿಶಾ ನನ್ನ… ಪತ್ನಿ ಆರತಿ ಪೋಸ್ಟ್ಗೆ ಜಯಂ ರವಿ ನೀಡಿದ ಪ್ರತ್ಯುತ್ತರ ವೈರಲ್! Ravi Mohan