Gold : ಮಧ್ಯ ಫ್ರಾನ್ಸ್ ಮೂಲದ ರೈತನೊಬ್ಬ ತನ್ನ ಖಾಸಗಿ ಭೂಮಿಯಲ್ಲಿ ದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪವನ್ನು ಪತ್ತೆಹಚ್ಚಿದ್ದು, ಆರಂಭಿಕ ಅಂದಾಜಿನ ಪ್ರಕಾರ ಚಿನ್ನದ ಮೌಲ್ಯ ಬರೋಬ್ಬರಿ 4 ಬಿಲಿಯನ್ ಯೂರೋಗಿಂತ ಹೆಚ್ಚು ಮೌಲ್ಯದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಭಾರತೀಯ ಕರೆನ್ಸಿ ಪ್ರಕಾರ 3000 ಕೋಟಿಗೂ ಅಧಿಕವಾಗಿದೆ.

ಫ್ರಾನ್ಸ್ನ ಆವೆರ್ಗ್ನೆ ಮೂಲದ 52 ವರ್ಷದ ರೈತ ಮೈಕೆಲ್ ಡುಪಾಂಟ್ ಈ ಅಮೂಲ್ಯ ನಿಧಿಯನ್ನು ಕಂಡುಹಿಡಿದ್ದಾರೆ. ನಾಲ್ಕು ಬಿಲಿಯನ್ ಯುರೋಗಳಿಗಿಂತ ಹೆಚ್ಚು ಮೌಲ್ಯದ ಚಿನ್ನದ ನಿಕ್ಷೇಪವು ಭೂಗತದಲ್ಲಿ ಪತ್ತೆಯಾಗಿದೆ. ಈ ಘಟನೆಯ ಬಗ್ಗೆ ತಿಳಿದ ಫ್ರೆಂಚ್ ಸರ್ಕಾರ, ಚಿನ್ನ ಪತ್ತೆಯಾದ ಪ್ರದೇಶದಲ್ಲಿನ ಎಲ್ಲ ಚಟುವಟಿಕೆಗಳನ್ನು ಇದೀಗ ಸ್ಥಗಿತಗೊಳಿಸಿದೆ. ಈ ವಿಷಯದ ಬಗ್ಗೆ ಸ್ಪಷ್ಟ ವಿಶ್ಲೇಷಣೆ ಅಗತ್ಯವಿದೆ ಎಂದು ಸರ್ಕಾರ ಹೇಳಿದ್ದು, ಪರಿಸರ ಅಧ್ಯಯನ ಮತ್ತು ಕಾನೂನು ಅಂಶಗಳನ್ನು ಹುಡುಕಬೇಕಾಗಿದೆ ಎಂದು ವಿವರಿಸಿದೆ.
ಜಮೀನನ್ನು ಎಂದಿನಂತೆ ನಿಯಮಿತ ಪರಿಶೀಲನೆ ನಡೆಸುತ್ತಿದ್ದಾಗ, ರೈತನಿಗೆ ಮಣ್ಣಿನಲ್ಲಿ ಅಸಾಮಾನ್ಯ ಹೊಳಪು ಕಂಡುಬಂದಿದೆ. ಬಳಿಕ ಆ ಸ್ಥಳವನ್ನು ಸ್ವಲ್ಪ ಆಳವಾಗಿ ಅಗೆದಾಗ, ಚಿನ್ನದ ನಿಕ್ಷೇಪವನ್ನು ಕಂಡು ಆಶ್ಚರ್ಯವಾಯಿತು ಎಂದು ರೈತ ಮೈಕೆಲ್ ಡುಪಾಂಟ್ ಹೇಳಿದ್ದಾರೆ. ಚಿನ್ನ ಪತ್ತೆಯಾದರೂ ಅದನ್ನು ಅನುಭವಿಸುವ ಹಕ್ಕು ಆ ರೈತನಿಗೆ ಇಲ್ಲದಿರುವುದೇ ಆತನಿಗೆ ಬೇಸರದ ಸಂಗತಿಯಾಗಿದೆ.
ಚಿನ್ನದ ನಿಕ್ಷೇಪ ಪತ್ತೆಯಾದ ಕೂಡಲೇ ಈ ಸುದ್ದಿ ಬೇಗನೆ ಹರಡಿದೆ. ಮಾಹಿತಿ ತಿಳಿದ ತಕ್ಷಣ ಸರ್ಕಾರಿ ಅಧಿಕಾರಿಗಳು ಸಹ ಸ್ಥಳಕ್ಕೆ ತಲುಪಿ, ಪ್ರಾಥಮಿಕ ಪರಿಶೀಲನೆಗಳ ನಂತರ, ಹೊಲದಲ್ಲಿ 150 ಟನ್‌ಗಳಿಗಿಂತ ಹೆಚ್ಚು ಚಿನ್ನ ಇರಬಹುದು ಎಂದು ಅಧಿಕಾರಿಗಳು ಘೋಷಿಸಿದರು. ಪರಿಸರ ಅಧ್ಯಯನಗಳು ಪ್ರಾರಂಭವಾಗಿರುವುದರಿಂದ ಸದ್ಯಕ್ಕೆ ಆ ಹೊಲವನ್ನು ಮುಚ್ಚಲಾಗಿದೆ.
ಇದು ಖಾಸಗಿ ಭೂಮಿಯಲ್ಲಿ ಕಂಡುಬಂದರು ಕೂಡ ಫ್ರಾನ್ಸ್ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದೆ. ಭೂಗತದಲ್ಲಿ ಅಡಗಿರುವ ಎಲ್ಲವೂ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಖಾಸಗಿ ವ್ಯಕ್ತಿಗಳು ಅದನ್ನು ಹೊಂದಲು ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ.
ಅಂದಹಾಗೆ, ಆವೆರ್ಗ್ನೆ ಪ್ರದೇಶವು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿರುವ ಪ್ರದೇಶವಾಗಿದ್ದು, ಚಿನ್ನದ ಆವಿಷ್ಕಾರದ ನಂತರ ದೊಡ್ಡ ಪ್ರಮಾಣದ ಗಣಿಗಾರಿಕೆಯು ಪ್ರಮುಖ ಪರಿಸರ ಪರಿಣಾಮಗಳನ್ನು ಬೀರುತ್ತದೆ ಎಂದು ಸ್ಥಳೀಯ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಈ ಚಿತ್ರದಲ್ಲಿ 200 ಕೆಜಿ ಚಿನ್ನ ಧರಿಸಿದ್ದರಂತೆ ಐಶ್ವರ್ಯಾ ರೈ: ಕಾವಲು ಕಾಯಲೆಂದೇ 50 ಜನರಿದ್ದರಂತೆ! Aishwarya Rai