Zodiac Signs : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು ಧರ್ಮದಲ್ಲಿ ಈ ಜನ್ಮ ದಿನಾಂಕ ಮತ್ತು ಹುಟ್ಟಿದ ಗಳಿಗೆಯು ವ್ಯಕ್ತಿಯ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ ಮತ್ತು ವ್ಯಕ್ತಿತ್ವ ಹಾಗೂ ಹಣಕಾಸಿನ ಸ್ಥಿತಿಯ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಜನಿಸಿದ ಮಹಿಳೆಯರು ಸ್ವಭಾವತಃ ತುಂಬಾ ಹಠಮಾರಿಗಳಾಗಿರುತ್ತಾರೆ. ಅವರಿಗೆ ಮೊಂಡುತನ ತುಂಬಾನೇ ಜಾಸ್ತಿ ಇರುತ್ತದೆ. ಅಲ್ಲದೆ, ನಾನು ಮಾಡಿದ್ದೇ ಸರಿ, ನಮ್ಮ ಅಭಿಪ್ರಾಯವೇ ಸರಿಯಾದದ್ದು ಎಂದು ವಾದಿಸುತ್ತಾರೆ. ಹಾಗಾದರೆ, ಯಾವ ಸ್ತ್ರೀ ರಾಶಿಚಕ್ರ ಚಿಹ್ನೆಗಳು ಹಠಮಾರಿತನದ ಪ್ರತಿರೂಪವಾಗಿರುತ್ತವೆ ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ಮೇಷ ರಾಶಿ
ಮೇಷ ರಾಶಿಯಲ್ಲಿ ಜನಿಸಿದ ಮಹಿಳೆಯರು ತಮ್ಮ ಮಾತನ್ನು ಸಾಬೀತುಪಡಿಸಲು ಯಾವುದೇ ಹಂತಕ್ಕೆ ಹೋಗಬಲ್ಲರು. ಯಾವುದೇ ಪರಿಸ್ಥಿತಿಯಲ್ಲಿಯೂ ತಮ್ಮ ಗುರಿಗಳನ್ನು ಸಾಧಿಸಲು ಅವರು ದೃಢನಿಶ್ಚಯ ಹೊಂದಿರುತ್ತಾರೆ. ತಮ್ಮ ಅಭಿಪ್ರಾಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಮತ್ತು ಅವುಗಳನ್ನು ಯಾರಿಗಾಗಿಯೂ ಬಿಟ್ಟುಕೊಡುವುದಿಲ್ಲ. ಈ ರಾಶಿಯ ಮಹಿಳೆಯರು ಯಾವಾಗಲೂ ಯಾವುದೇ ಸ್ಪರ್ಧೆಯನ್ನು ಎದುರಿಸಲು ಸಿದ್ಧರಾಗಿರುತ್ತಾರೆ ಮತ್ತು ಇತರರಿಗೆ ನಾವೇ ಸರಿ ಎಂದು ಸಾಬೀತುಪಡಿಸುತ್ತಾರೆ. ಅವರು ಸ್ವಭಾವತಃ ತಮಾಷೆಯಾಗಿ ಕಂಡುಬಂದರೂ, ಸ್ಪರ್ಧೆ ಅಥವಾ ಚರ್ಚೆಯ ವಿಷಯಕ್ಕೆ ಬಂದಾಗ ಅವರು ಸಂಪೂರ್ಣವಾಗಿ ನಕಾರಾತ್ಮಕರಾಗುತ್ತಾರೆ.
ಇದನ್ನೂ ಓದಿ: ಗಾಯಕಿ ಕೆನಿಶಾ ನನ್ನ… ಪತ್ನಿ ಆರತಿ ಪೋಸ್ಟ್ಗೆ ಜಯಂ ರವಿ ನೀಡಿದ ಪ್ರತ್ಯುತ್ತರ ವೈರಲ್! Ravi Mohan
ವೃಷಭ ರಾಶಿ
ವೃಷಭ ರಾಶಿಯ ಸಂಕೇತವೇ ಗೂಳಿ. ಅದೇ ರೀತಿ, ಈ ರಾಶಿಯಲ್ಲಿ ಜನಿಸಿದ ಮಹಿಳೆಯರು ಬಲವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರನ್ನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ. ಈ ರಾಶಿಯ ಮಹಿಳೆಯರು ಸ್ವಾಭಾವಿಕವಾಗಿ ಬಲಿಷ್ಠರು ಮತ್ತು ಹಠಮಾರಿಗಳು. ಅವರ ಮೊಂಡುತನದ ಸ್ವಭಾವವು ಜೀವನದ ವಿವಿಧ ಅಂಶಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ಅವರ ಮೊಂಡುತನದಲ್ಲಿ ಖಂಡಿತವಾಗಿಯೂ ನ್ಯಾಯಯುತವಾಗಿರುತ್ತದೆ.
ಕನ್ಯಾ ರಾಶಿ
ಕನ್ಯಾರಾಶಿಯ ಚಿಹ್ನೆಯಡಿಯಲ್ಲಿ ಜನಿಸಿದ ಮಹಿಳೆಯರು ಇತರರನ್ನು ಮುನ್ನಡೆಸುವ ಸಾಮರ್ಥ್ಯದೊಂದಿಗೆ ಜನಿಸುತ್ತಾರೆ. ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ಅವರು ಹಲವಾರು ಬಾರಿ ಯೋಚಿಸಿ, ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನಂತರ, ಇತರರು ಅದನ್ನು ಒಪ್ಪುತ್ತಾರೆ ಎಂದು ಅವರಿಗೆ ಖಚಿತವಾಗಿರುತ್ತದೆ. ಈ ರಾಶಿಯವರ ಮೊಂಡುತನವು ಅವರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಅವರು ಯಾವಾಗಲೂ ತಮ್ಮ ಅಭಿಪ್ರಾಯಗಳನ್ನು ಗೌರವಿಸುವವರೊಂದಿಗೆ ಮಾತ್ರ ಮಾತನಾಡಲು ಬಯಸುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.
ತನ್ನ ಜಮೀನಿನಲ್ಲಿ 3000 ಕೋಟಿಗೂ ಅಧಿಕ ಚಿನ್ನ ಪತ್ತೆ ಮಾಡಿದ ರೈತ: ನಂತರ ನಡೆದಿದ್ದು ಬೇಸರದ ಸಂಗತಿ! Gold
ಸಸ್ಯಾಹಾರಿ ಕೊಹ್ಲಿ ತಿನ್ನುವ ಚಿಕನ್ ರಹಸ್ಯ ಬಯಲು! ಏನಿದು ಮಾಕ್ ಚಿಕನ್? ಇಷ್ಟೊಂದು ಲಾಭಗಳಿವೆಯಾ? Virat Kohli