ಎಜುಕೇಷನ್ ಎಕ್ಸ್​ಪೋಗೆ ನಾಳೆ ಚಾಲನೆ: ವಿಜಯವಾಣಿ ಆಯೋಜನೆ, ರವಿಸುಬ್ರಮಣ್ಯ, ವಿದ್ಯಾಶಂಕರ್, ರಾಕೇಶ್ ಅಡಿಗ ಉಪಸ್ಥಿತಿ | Education expo

Education expo

Education expo : ಸಿಇಟಿ, ನೀಟ್, ಜೆಇಇ ಸೇರಿ ವಿವಿಧ ಉನ್ನತ ಶಿಕ್ಷಣದ ಕೋರ್ಸ್​ಗೆ ಸೇರಲು ಬಯಸುವ ವಿದ್ಯಾರ್ಥಿಗಳಿಗಾಗಿ ಹಾಗೂ ಸಲಹೆ ಸೂಚನೆಗಳನ್ನು ಪಡೆಯಲು ಪಾಲಕರಿಗಾಗಿ ಪ್ರತಿ ವರ್ಷ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ‘ಎಜುಕೇಷನ್ ಎಕ್ಸ್​ಪೋ’ ಆಯೋಜಿಸುತ್ತಿದೆ. ಈ ವರ್ಷ 17 ಮತ್ತು 18ರಂದು ಹಮ್ಮಿಕೊಂಡಿದ್ದು, ವಿದ್ಯಾಪೀಠ ವೃತ್ತದ ಡೊಂಕಾಳ ಗ್ರೌಂಡ್​ನಲ್ಲಿ (ಶಂಕರನಾಗ್ ಆಟದ ಮೈದಾನ) ಶನಿವಾರ ಚಾಲನೆ ಸಿಗಲಿದೆ.

ಬೆಳಗ್ಗೆ 11.30ಕ್ಕೆ ಬಸವನಗುಡಿ ಶಾಸಕ ರವಿಸುಬ್ರಮಣ್ಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಡಾ.ಎಸ್. ವಿದ್ಯಾಶಂಕರ್, ನಟ ರಾಕೇಶ್ ಅಡಿಗ ಉದ್ಘಾಟಿಸಲಿದ್ದಾರೆ. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಭಾಗವಹಿಸಲಿದ್ದಾರೆ. ಇಂಜಿನಿಯರಿಂಗ್, ಮೆಡಿಕಲ್ ಸೇರಿ ವಿವಿಧ ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕೆ ಎದುರು ನೋಡುತ್ತಿರುವ ವಿದ್ಯಾ ರ್ಥಿಗಳು, ಸಾಮಾನ್ಯ ಪದವಿಗಳಲ್ಲಿರುವ ಉತ್ತಮ ಕೋರ್ಸ್ ಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಅಗತ್ಯ ಮಾರ್ಗದರ್ಶನ ಎಕ್ಸ್​ಪೋದಲ್ಲಿ ಸಿಗಲಿದೆ.

ಎರಡು ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 7ರವರೆಗೆ ಮೇಳ ನಡೆಯಲಿದೆ. ನಗರದ ಹೆಸರಾಂತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಎಕ್ಸ್​ಪೋದಲ್ಲಿ ಮಳಿಗೆ ಸ್ಥಾಪಿಸಲಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರು ವಿಸõತವಾಗಿ ಮಾಹಿತಿ ಪಡೆದುಕೊಂಡು ಇಷ್ಟದ ಕೋರ್ಸ್​ಗಳಿಗೆ ಸೇರಬಹುದಾಗಿದೆ.

ವಿವಿಧ ಪಾರ್ಟ್ನರ್ಸ್​

ಎಕ್ಸ್​ಪೋದಲ್ಲಿ ಟ್ರಾವೆಲ್ ಪಾರ್ಟ್​ನರ್ ಆಗಿ ವಿಜಯಾನಂದ ಟ್ರಾವೆಲ್ಸ್, ಸ್ಟಾಲ್ ಪಾರ್ಟ್​ನರ್ ಆಗಿ ಆಕಾಶ್ ಗ್ರೂಪ್ ಆಫ್ ಇನ್​ಸ್ಟಿ ಟ್ಯೂಷನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್, ಗ್ರೇಸ್ ಐಎಎಸ್ ಸೇರಿ ಹಲವು ಸಂಸ್ಥೆಗಳು ಭಾಗವಹಿಸಲಿವೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 88844 32337 (ಸೌಜನ್ಯಾ), 88844 32365 (ನವೀನ್) ಸಂರ್ಪಸಬಹುದು.

ಇದನ್ನೂ ಓದಿ: ಗಾಯಕಿ ಕೆನಿಶಾ ನನ್ನ… ಪತ್ನಿ ಆರತಿ ಪೋಸ್ಟ್​ಗೆ ಜಯಂ ರವಿ ನೀಡಿದ ಪ್ರತ್ಯುತ್ತರ ವೈರಲ್! Ravi Mohan ​

ಬೇಗ ಬನ್ನಿ ಲ್ಯಾಪ್​ಟಾಪ್ ಗೆಲ್ಲಿ

ಮೊದಲ ದಿನ ಬೆಳಗ್ಗೆ 9ರಿಂದ 10.30ರೊಳಗೆ ಎಕ್ಸ್​ಪೋಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಲಕ್ಕಿ ಡಿಪ್ ಕೂಪನ್ ನೀಡಲಾಗುತ್ತದೆ. ಅದೃಷ್ಟಶಾಲಿ ವಿದ್ಯಾರ್ಥಿಗೆ ಸಪ್ತಗಿರಿ ವಿವಿ ವತಿಯಿಂದ ಲ್ಯಾಪ್​ಟಾಪ್ ಅನ್ನು ಉಡುಗೊರೆಯಾಗಿ ನೀಡ ಲಾಗುತ್ತದೆ. ಮೇಳಕ್ಕೆ ಪ್ರವೇಶ ಉಚಿತವಾಗಿರುತ್ತದೆ. ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚಿನ ಅಂಕ ಪಡೆದಿರುವ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ತೋರಿಸಿ ಆಕರ್ಷಕ ಬಹುಮಾನಗಳನ್ನು ಪಡೆಯುವ ವಿಶೇಷ ಸಂದರ್ಭ ಇದಾಗಿದೆ.

ಈ ಶಿಕ್ಷಣ ಸಂಸ್ಥೆಗಳು ಭಾಗಿ

ಎಕ್ಸ್​ಪೋದಲ್ಲಿ ರಾಜ್ಯದ ಹೆಸರಾಂತ ಶಿಕ್ಷಣ ಸಂಸ್ಥೆಗಳು ಭಾಗವಹಿಸಲಿವೆ. ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯ, ಸಪ್ತಗಿರಿ ಎನ್​ಪಿಎಸ್ ವಿಶ್ವವಿದ್ಯಾಲಯ, ಪ್ರೆಸಿಡೆನ್ಸಿ ವಿವಿ, ಚಾಣಕ್ಯ ವಿವಿ, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್​ಸ್ಟಿಟ್ಯೂಷನ್ಸ್, ಕೇಂಬ್ರಿಡ್ಜ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೆಎಲ್​ಇ ಸೊಸೈಟಿ (ಬೆಳಗಾವಿ), ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್​ಸ್ಟಿಟ್ಯೂಷನ್ಸ್, ಕಮ್ಮವಾರಿ ಸಂಘಂ ಗ್ರೂಪ್ ಆಫ್ ಇನ್​ಸ್ಟಿಟ್ಯೂಷನ್ಸ್ (ಕೆಎಸ್​ಐಟಿ), ಸಿಎಂಆರ್ ಯೂನಿವರ್ಸಿಟಿ, ಎಎಂಸಿ ಇಂಜಿನಿಯರಿಂಗ್ ಕಾಲೇಜು, ಸಿಟಿ ಗ್ರೂಪ್ ಆಫ್ ಇನ್​ಸ್ಟಿಟ್ಯೂಷನ್ಸ್, ಶ್ರೀದೇವಿ ಎಜುಕೇಷನ್, ದಯಾನಂದ ಸಾಗರ್ ಯೂನಿವರ್ಸಿಟಿ, ಶ್ರೀ ಸಪ್ತಗಿರಿ ಪಿಯು ಕಾಲೇಜು, ರಾಜರಾಜೇಶ್ವರಿ ಕಾಲೇಜ್ ಆಫ್ ಇಂಜಿನಿಯರಿಂಗ್, ಸಾಯಿರಾಮ್ ಕಾಲೇಜ್ ಆಫ್ ಇಂಜಿನಿಯರಿಂಗ್, ಇನ್​ಸೈಟ್ಸ್ ಐಎಎಸ್, ಸಿದ್ಧಗಂಗಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ತುಮಕೂರು), ಸರ್ ಎಂವಿ ಪಿಯು ಕಾಲೇಜು (ದಾವಣಗೆರೆ), ಎಸಿಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್, ಎಸ್-ವ್ಯಾಸ ಸ್ಕೂಲ್ ಆಫ್ ಅಡ್ವಾನ್ಡ್ ಸ್ಟಡೀಸ್, ವಿಷನ್ ನೀಟ್ ಅಕಾಡೆಮಿ, ಎಸ್​ಇಎ ಗ್ರೂಪ್ ಆಫ್ ಇನ್​ಸ್ಟಿಟ್ಯೂಷನ್ಸ್, ಶೇಷಾದ್ರಿಪುರಂ ಕಾಲೇಜು, ಲರ್ನ್​ಟೆಕ್ ಬೆಂಗಳೂರು ಸ್ಟಡಿ, ಎಡ್ವೇ ಎಜುಕೇಷನ್ ಕನ್ಸಲ್ಟಿಂಗ್, ಜ್ಯೋತಿ ಇನ್​ಸ್ಟಿಟ್ಯೂಟ್ ಆಪ್ ಕಾಮರ್ಸ್ ಆಂಡ್ ಮ್ಯಾನೇಜ್​ವೆುಂಟ್, ಸವೋದಯ ಪಿಯು ಕಾಲೇಜು-ತುಮಕೂರು, ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್-ಮೈಸೂರು ಭಾಗವಹಿಲಿವೆ.

Vijayavani Education Expo

ಸಸ್ಯಾಹಾರಿ​ ಕೊಹ್ಲಿ ತಿನ್ನುವ ಚಿಕನ್​ ರಹಸ್ಯ ಬಯಲು! ಏನಿದು ಮಾಕ್​ ಚಿಕನ್​? ಇಷ್ಟೊಂದು ಲಾಭಗಳಿವೆಯಾ? Virat Kohli

ತನ್ನ ಜಮೀನಿನಲ್ಲಿ 3000 ಕೋಟಿಗೂ ಅಧಿಕ ಚಿನ್ನ ಪತ್ತೆ ಮಾಡಿದ ರೈತ: ನಂತರ ನಡೆದಿದ್ದು ಬೇಸರದ ಸಂಗತಿ! Gold

Share This Article

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…