ಸಿನಿಮಾ

ಟಿ20 ಕ್ರಿಕೆಟ್​ನಲ್ಲಿ ಹೊಸ ದಾಖಲೆ: ಬರೋಬ್ಬರಿ 324 ರನ್​ ಗಳಿಸಿದ ತಂಡ..!

ಲಂಡನ್‌: ಇಲ್ಲಿನ ರಿಚ್‌ಮಂಡ್ ಕ್ರಿಕೆಟ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ಎರಡನೇ ಇಲೆವೆನ್ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಸಸೆಕ್ಸ್ 2ನೇ ಇಲೆವನ್​ ತಂಡವು ಮಿಡ್ಲ್‌ಸೆಕ್ಸ್ 2ನೇ ಇಲೆವನ್​ ತಂಡದ ವಿರುದ್ಧ ದಾಖಲೆಯ ಮೊತ್ತವನ್ನು ಗಳಿಸಿದೆ.

ರವಿ ಬೋಪಾರ ಅವರ ಭರ್ಜರಿ ಬ್ಯಾಟಿಂಗ್​ ನೆರವಿನಿಂದ ಸಸೆಕ್ಸ್ 2ನೇ ಇಲೆವನ್​ ತಂಡ ನಿಗದಿತ 20 ಓವರ್​ಗಳಲ್ಲಿ 324 ರನ್​ಗಳನ್ನು ಗಳಿಸಿತು. 49 ಎಸೆತಗಳಲ್ಲಿ 144 ರನ್ ಗಳಿಸಿದ ಬೋಪಾರ 14 ಬೌಂಡರಿ ಹಾಗೂ 12 ಸಿಕ್ಸ್​​ ಬಾರಿಸಿದರು. ಇವರಿಗೆ ಜಾರ್ಜ್​ ಗಾರ್ಟನ್​ ಮತ್ತು ಟಾಮ್​ ಅಸ್ಲಾಪ್​ ಉತ್ತಮ ಸಾಥ್​ ನೀಡಿದರು.

ಇದನ್ನೂ ಓದಿ: ಪ್ಯಾಷನ್ ಮತ್ತು ಹೊಟ್ಟೆಪಾಡು! ಜಾಹ್ನವಿಯ ಎಂಜಿನಿಯರಿಂಗ್ ಶಿಕ್ಷಣ, ಚಿತ್ರರಂಗದ ಪಯಣ

ಬೃಹತ್​ ಮೊತ್ತವನ್ನು ಬೆನ್ನತ್ತಿದ ಮಿಡ್ಲ್‌ಸೆಕ್ಸ್ ಎರಡನೇ ಇಲೆವೆನ್ ತಂಡವು ಮೊದಲ 4 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಮ್ಯಾಕ್ಸ್​ ಹ್ಯಾರಿಸ್, ಜೊಶುವಾ ಮತ್ತು ಸ್ಯಾಮ್​ ರಾಬ್ಸನ್ ಮಿಡ್ಲ್‌ಸೆಕ್ಸ್ ತಂಡದ ಪರ ಗರಿಷ್ಟ ರನ್​ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಪೆವಿಲಿಯನ್​ ಪರೇಡ್​ ನಡೆಸಿದರು. ಅಂತಿಮವಾಗಿ ಮಿಡ್ಲ್‌ಸೆಕ್ಸ್ ತಂಡವು ಕೇವಲ 130 ರನ್​ಗಳಿಗೆ ಆಲೌಟ್​ ಆಯಿತು.

ಬೌಲಿಂಗ್​ನಲ್ಲಿಯೂ ಮಿಂಚಿದ ರವಿ ಬೋಪಾರ ಮೂರು ಓವರ್​ಗಳಲ್ಲಿ 4 ವಿಕೆಟ್​ ಕಿತ್ತರು. ಕೋಲೆ ಒಂದು ವಿಕೆಟ್​ ಪಡೆಯುವಲ್ಲಿ ಸಫಲವಾದರೆ, ಗಾರ್ಟನ್ ಎರಡು ಮತ್ತು ಬ್ರಾಡ್ಲಿ ಕ್ಯೂರಿ ಮೂರು ವಿಕೆಟ್​ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. (ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್