ಸಿನಿಮಾ

ಪ್ಯಾಷನ್ ಮತ್ತು ಹೊಟ್ಟೆಪಾಡು! ಜಾಹ್ನವಿಯ ಎಂಜಿನಿಯರಿಂಗ್ ಶಿಕ್ಷಣ, ಚಿತ್ರರಂಗದ ಪಯಣ

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ತೆರೆಗೆ ಬಂದ ‘ಹೊಟ್ಟೆಪಾಡು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ ಹುಡುಗಿ ಜಾಹ್ನವಿ ವಿಶ್ವನಾಥ್. ಇದೀಗ ‘ರೀತು’ ಎಂಬ ಮತ್ತೊಂದು ಚಿತ್ರದಲ್ಲಿ ಎರಡನೇ ನಾಯಕಿಯಾಗಿದ್ದಾರೆ.

ಬೆಂಗಳೂರು ಸಮೀಪದ ದಾಬಸ್‌ಪೇಟೆ ಮೂಲದ ಜಾಹ್ನವಿ, ಎಂಜಿನಿಯರಿಂಗ್ ಪದವೀಧರೆ. ‘ತಾತ ಮತ್ತು ಅಪ್ಪ ಇಬ್ಬರೂ ನಾಟಕಗಳನ್ನು ಮಾಡುತ್ತಿದ್ದರು. ನನಗೆ ಬಾಲ್ಯದಲ್ಲಿ ಅಷ್ಟಾಗಿ ನಟನೆಯ ಬಗ್ಗೆ ಕುತೂಹಲವಿರಲಿಲ್ಲ. ಆದರೆ ಎಂಜಿನಿಯರಿಂಗ್ ಓದುತ್ತಿರುವಾಗ ರಂಗಭೂಮಿ ಆಸಕ್ತಿ ಬೆಳೆಯಿತು. ಎರಡು ವರ್ಷಗಳ ಕಾಲ ನಾಟಕಗಳಲ್ಲಿ ಅಭಿನಯಿಸುತ್ತಾ ಅಭಿನಯ ಕಲಿತೆ. ಹಾಗೇ ಸಿನಿಮಾರಂಗಕ್ಕೆ ಬರಬೇಕು ಎಂಬ ಆಸೆ ಚಿಗುರಿತು. ಹೀಗಾಗಿ ಎಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿ ಚಿತ್ರರಂಗಕ್ಕೆ ಬಂದೆ. ‘ಹೊಟ್ಟೆಪಾಡು’ ಚಿತ್ರದಲ್ಲಿ ಕೆಟ್ಟ ತಂದೆಯ ವಿರುದ್ಧ ನಾಯಕನ ಜತೆ ಹೋರಾಡುವ ನಾಯಕಿಯ ಪಾತ್ರದಲ್ಲಿ ನಟಿಸಿದ್ದೆ’ ಎಂದು ಹೇಳಿಕೊಳ್ಳುತ್ತಾರೆ ಜಾಹ್ನವಿ.

ಇದನ್ನೂ ಓದಿ: ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವ ಎಚ್ಚರಿಕೆ ನೀಡಿದ ಮೈಸೂರು ಜಿಲ್ಲಾಧಿಕಾರಿ

ಇತ್ತೀಚೆಗಷ್ಟೆ ಅವರು ನಟಿಸುತ್ತಿರುವ ಎರಡನೇ ಚಿತ್ರ ‘ರೀತು’ ಮುಹೂರ್ತ ನೆರವೇರಿದೆ. ‘ಈ ಚಿತ್ರದಲ್ಲಿ ನಾನು ಎರಡನೇ ನಾಯಕಿ. ಇವತ್ತಿನ ಪೀಳಿಗೆಯ ಯುವತಿಯರು ಯಾವ ವಿಷಯಗಳಲ್ಲಿ ಎಡವುತ್ತಾರೆ ಎಂಬುದನ್ನು ನಿರ್ದೇಶಕಿ ಗೌರಿಶ್ರೀ ನನ್ನ ಪಾತ್ರದ ಮೂಲಕ ಹೇಳಲಿದ್ದಾರೆ. ಚಾಲೆಂಜಿಂಗ್ ಪಾತ್ರ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದೆ’ ಎನ್ನುತ್ತಾರೆ ಜಾಹ್ನವಿ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು ‘ಪ್ರೇಮಂ ಪೂಜ್ಯಂ’, ‘ಜೂಲಿಯೆಟ್ 2’ ಖ್ಯಾತಿಯ ಬೃಂದಾ ಆಚಾರ್ಯ, ನಾಗೇಂದ್ರ ಅರಸ್, ಲಯಾ ಕೋಕಿಲಾ ತಾರಾಗಣದಲ್ಲಿದ್ದಾರೆ. ಇದಲ್ಲದೇ ಜಾಹ್ನವಿ ಹೊಸ ಕಥೆಗಳನ್ನು ಕೇಳುತ್ತಿದ್ದು, ಕೆಲವೇ ದಿನಗಳಲ್ಲಿ ಹೊಸ ಚಿತ್ರದ ಭಾಗವಾಗುವ ನಿರೀಕ್ಷೆಯಲ್ಲಿದ್ದಾರೆ.

Latest Posts

ಲೈಫ್‌ಸ್ಟೈಲ್