More

  ನಿಖಿಲ್ ಕುಮಾರಸ್ವಾಮಿಗೆ ಅದೃಷ್ಟ ಇಲ್ಲವೆಂದು ರಾಮನಗರ ಜೆಡಿಎಸ್ ಅಧ್ಯಕ್ಷ ರಾಜಶೇಖರ್ ರಾಜೀನಾಮೆ

  ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಅಸಮಾಧಾನಗೊಂಡಿರುವ ರಾಮನಗರ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್ ರಾಜೀನಾಮೆ ನೀಡಿದ್ದಾರೆ.

  ರಾಮನಗರ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್ ರಾಜೀನಾಮೆ ನೀಡಿದ್ದಾರೆ. ಇವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅತ್ಯಾಪ್ತರಾಗಿದ್ದರು.

  ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ರಾಜಶೇಖರ್, “ರಾಜೀನಾಮೆ ನೀಡಿದ್ದಾಗಿ ಘೋಷಣೆ ಮಾಡಿದ್ದಾರೆ. ಜೆಡಿಎಸ್​ನಲ್ಲೇ ಇರುತ್ತೇನೆ, ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ. ನಿಖಿಲ್ ಕುಮಾರಸ್ವಾಮಿ ಅವರಿಗೆ ಯಾಕೋ ಅದೃಷ್ಟ ಇಲ್ಲ. ಮಂಡ್ಯದ ರೀತಿ ರಾಮನಗರದಲ್ಲಿಯೂ ಆಗಿದೆ. ಆದರೆ ರಾಮನಗರದ ಜನರು ಯಾಕೋ ಕೈಹಿಡಿಯಲಿಲ್ಲ. ಹಾಗಾಗಿ ನಾನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡ್ತಿದ್ದೇನೆ” ಎಂದು ಹೇಳುತ್ತಾ ಗದ್ಗದಿತರಾಗಿದ್ದಾರೆ.

  ಸುದೀಪ್ 46ನೇ ಸಿನಿಮಾ ಬಗ್ಗೆ ಸಿಕ್ತು ಅಪ್​ಡೇಟ್; ತಮಿಳು ನಿರ್ಮಾಪಕರ ಜತೆ ಕೈ ಜೋಡಿಸಿದ ಕಿಚ್ಚ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts