More

    ಸುದೀಪ್ 46ನೇ ಸಿನಿಮಾ ಬಗ್ಗೆ ಸಿಕ್ತು ಅಪ್​ಡೇಟ್; ತಮಿಳು ನಿರ್ಮಾಪಕರ ಜತೆ ಕೈ ಜೋಡಿಸಿದ ಕಿಚ್ಚ

    ಬೆಂಗಳೂರು: ಸ್ಯಾಂಡಲ್​ವುಟ್​ ನಟ ಸುದೀಪ್ ಅವರ 46ನೇ ಸಿನಿಮಾ ಕುರಿತಾಗಿ ಬಿಗ್​ ಅಪ್​ಡೇಟ್ ಸಿಕ್ಕಿದೆ. ಸುದೀಪ್ ಅವರ ಮುಂದಿನ ಸಿನಿಮಾವನ್ನು ತಮಿಳು ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡುತ್ತಿದ್ದು, ‘ಕಬಾಲಿ’ ನಿರ್ಮಾಪಕರ ಜೊತೆ ಕೈ ಜೋಡಿಸಿದ್ದಾರೆ.

    ಸಿನಿಮಾದ ನಿರ್ಮಾಪಕರು ಯಾರು ಎಂದು ಸಣ್ಣದೊಂದು ಝಲಕನ್ನು ತಮಿಳಿನ ಕಲೈಪುಲಿ ಎಸ್ ಥಾನು ನಿರ್ಮಾಣ ಸಂಸ್ಥೆ ಬಿಡುಗಡೆ ಮಾಡಿದೆ. ಕಿಚ್ಚ ಕಾರಿನಿಂದ ಇಳಿಯುವುದರ ಜೊತೆಗೆ ಮೇಕಪ್ ನಲ್ಲಿ ಭಾಗಿಯಾಗುವ ಸಣ್ಣದೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.

    ವಿಕ್ರಾಂತ್​ ರೋಣ ತೆರೆಕಂಡ ಬಳಿಕ ಸುದೀಪ್​ ಅಭಿನಯದ 46ನೇ ಸಿನಿಮಾ ಕುರಿತು ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದರು. ಅವರಿಗೆಲ್ಲ ಖುಷಿ ಸುದ್ದಿ ಸಿಕ್ಕಿದೆ. ತಮಿಳಿನಲ್ಲಿ ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ‘ವಿ ಕ್ರಿಯೇಷನ್ಸ್​’ ಸಂಸ್ಥೆಗೆ ಇದೆ. ಈ ಬ್ಯಾನರ್​ ಜೊತೆ ಸುದೀಪ್​ ಅವರು ಸಿನಿಮಾ ಮಾಡಲಿರುವುದು ವಿಶೇಷವಾಗಿದೆ.

    https://twitter.com/Kichchacreatiin/status/1661331665548111872/history

    ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಜೊತೆ ಸುದೀಪ್ ಕೈ ಜೋಡಿಸಿದ್ದಾರೆ. ‘ವಿ ಕ್ರಿಯೇಷನ್ಸ್​’ ಮೂಲಕ ಅವರ ಹೊಸ ಸಿನಿಮಾ ನಿರ್ಮಾಣ ಆಗಲಿದೆ. ಈ ಚಿತ್ರಕ್ಕೆ ಕಲೈಪುಲಿ ಎಸ್​. ಥಾನು ಅವರು ಬಂಡವಾಳ ಹೂಡಲಿದ್ದಾರೆ

    ಬಿಗ್​ ಬಜೆಟ್​ ಸಿನಿಮಾಗಳನ್ನು ನಿರ್ಮಿಸಿರುವ ‘ವಿ ಕ್ರಿಯೇಷನ್ಸ್​’ ಜೊತೆ ಸುದೀಪ್​ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ಕೌತಕ ಹೆಚ್ಚಾಗಿದೆ. ಈ ಸಿನಿಮಾಗೆ ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ.

    ಬಾಡಿಹೀಟ್ ಸಮಸ್ಯೆ ಆದರೆ ನಿಯಮಿತವಾಗಿ ಈ ಆಹಾರ ಸೇವಿಸಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts