More

    ಬಾಡಿಹೀಟ್ ಸಮಸ್ಯೆ ಆದರೆ ನಿಯಮಿತವಾಗಿ ಈ ಆಹಾರ ಸೇವಿಸಿ…

    ಬೆಂಗಳೂರು: ಬೇಸಿಗೆಯ ಬಿಸಿಗಾಳಿ ಮತ್ತು ಸುಡುವ ಬಿಸಿಲು ಹೆಚ್ಚುತ್ತಿರುವ ತಾಪಮಾನದೊಂದಿಗೆ, ನಮ್ಮ ಆಹಾರ ಕ್ರಮವನ್ನು ನಿಯಂತ್ರಣದಲ್ಲಿಟ್ಟುಕೊಳ್ಳ ಬೇಕಾಗಿರುವುದು ಮುಖ್ಯವಾಗಿದೆ. ಪ್ರತಿನಿತ್ಯ ಕೆಲ ಆಹಾರ ಸೇವನೆ ಮಾಡುವುದ್ರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಅನೇಕ ರೋಗಗಳಿಂದ ನಾವು ದೂರವಿರಬಹುದು.

    ಮನೆಯೊಳಗೆ ಉಳಿಯುವುದು ಉತ್ತಮ, ಹೊರಗೆ ಹೋಗುವುದು ಅನಿವಾರ್ಯ. ಆದ್ದರಿಂದ, ದಿನವಿಡೀ ನಿಮ್ಮ ದೇಹವನ್ನು ಆರೋಗ್ಯದಿಂದ ನೋಡಿಕೊಳ್ಳುವುದು ಕಡ್ಡಾಯವಾಗಿದೆ. ನಿಮ್ಮ ಆರೋಗ್ಯಕ್ಕೆ ಉತ್ತಮ ಆಹಾರಗಳು ಯಾವುದು ಎಂದು ಯೋಚಿಸುತ್ತಿರುವ ನಿಮಗೆ ಇಲ್ಲಿದೆ ಮಾಹಿತಿ.

    ಪರಿಸರದ ಉಷ್ಣತೆ ಮತ್ತು ಅನುಚಿತ ಆಹಾರ ಪದ್ಧತಿ ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತವೆ. ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತಿದ್ದಂತೆ ಮಿದುಳು, ಹೃದಯ, ಚಯಾಪಚಯ ಕ್ರಿಯೆ ಹೀಗೆ ವಿವಿಧ ಅಂಗಾಂಗಗಳಲ್ಲಿ ತೊಂದರೆ ಉಂಟಾಗುವುದು. ನಿಮ್ಮ ದೇಹದಲ್ಲಿ ತಂಪಾಗಿರುವ ಅಂಶವನ್ನು ಸೇರಿಸಲು ಕೆಲವು ಆಹಾರಗಳು ಇಲ್ಲಿವೆ..

    ಸೌತೆಕಾಯಿಯಂತೆ: ಸೌತೆಕಾಯಿ ಸೇವನೆ ಬಿಸಿಲಿನ ಶಾಖದ ವಿರುದ್ಧ ಹೋರಾಡುವ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಇದು ಹೆಚ್ಚಿನ ನೀರಿನ ಅಂಶವನ್ನು ಹೊಂದಿದೆ ಮತ್ತು ವಿಟಮಿನ್ ಎ, ಬಿ ಫೋಲೇಟ್‌ಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಕ್ಯಾಲೋರಿಗಳಲ್ಲಿ ತುಂಬಾ ಕಡಿಮೆಯಾಗಿದೆ. ನಿಮ್ಮ ದೇಹವನ್ನು ತಂಪಾಗಿರಿಸಿಕೊಳ್ಳುತ್ತದೆ.

    ಎಳನೀರು: ಇದು ಅತ್ಯುತ್ತಮ ನೈಸರ್ಗಿಕವಾದ ಪಾನೀಯವಾಗಿದೆ. ಪೌಷ್ಟಿಕವಾಗಿದೆ, ಸೋಡಿಯಂ ಮತ್ತು ಪೊಟ್ಯಾಸಿಯಮ್‌ನ ದೇಹದ ಸಮತೋಲನವನ್ನು ಕಾಪಾಡಲು ಎಳನೀರ ಸೇವನೆ ಮುಖ್ಯವಾಗಿದೆ.

    ಪುದೀನಾ: ಚಟ್ನಿ, ಜ್ಯೂಸ್​​​ ರೂಪದಲ್ಲಿ ಸೇವಿಸಲಾಗುತ್ತದೆ. ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳೊಂದಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    ಮೊಸರು: ರೈತಾ, ಮಜ್ಜಿಗೆ, ಲಸ್ಸಿ ಮುಂತಾದ ಹಲವಾರು ವಿಧಗಳಲ್ಲಿ ಸೇವಿಸಬಹುದು. ಮೊಸರಿನಲ್ಲಿರುವ ಕೆಲವು ಅಂಶಗಳು ಕರುಳಿನ ಆರೋಗ್ಯವನ್ನು ಹತೋಟಿಯಲ್ಲಿಡುತ್ತದೆ.

    ಹಣ್ಣುಗಳು: ಕಲ್ಲಂಗಡಿ, ಕರ್ಬೂಜ ಇವುಗಳ ಸೇವನೆಯನ್ನು ನೀವು ಬೇಸಿಗೆ ಸಮಯದಲ್ಲಿ ತಪ್ಪಿಸಬಾರದು. ಪೋಷಕಾಂಶಗಳಿಂದ ಸಮೃದ್ಧವಾಗಿವೆ ಮತ್ತು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ. ಇದು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.

    ಭಜರಂಗದಳ, ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರಿನಿಂದ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts