ಹೃದಯದ ಶಸ್ತ್ರಚಿಕಿತ್ಸೆ; ಆಸ್ಪತ್ರೆಯಿಂದಲೇ ಕವಿ ಎಚ್​ಎಸ್​ವಿ ಸಂದೇಶ: ಕಾಳಜಿ ತೋರಿದವರಿಗೆ ಹೇಳಿದ್ದೇನು?

Poet HSV
Published on

ಬೆಂಗಳೂರು: ಸಾಹಿತಿ, ಕವಿ ಎಚ್​.ಎಸ್​.ವೆಂಕಟೇಶಮೂರ್ತಿ ಅವರು ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದವರಿಗೆ ಅವರು ಅಲ್ಲಿಂದಲೇ ಸಂದೇಶವನ್ನು ಕೂಡ ರವಾನಿಸಿದ್ದಾರೆ.

ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ತಮ್ಮ ದಣಿವಿನ ದನಿಯಲ್ಲೇ ಗಾಯಕ ಉಪಸನಾ ಮೋಹನ್ ಜೊತೆ ಮಾತನಾಡಿದ್ದು, ತಮ್ಮ ಬಗ್ಗೆ ಕಾಳಜಿ ತೋರಿದ್ದವರಿಗೆ ಪ್ರೀತಿಪೂರ್ವಕವಾಗಿ ನಮಸ್ಕಾರಗಳನ್ನು ತಿಳಿಸಿದ್ದಾರೆ. ಎಲ್ಲರಿಗೂ ಪ್ರತ್ಯೇಕವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗದ್ದರಿಂದ ಅವರ ಆಡಿಯೋ ಸಂದೇಶವನ್ನು ಮೋಹನ್ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

"ಇಂದಿನ ದಿನಗಳಲ್ಲಿ ನನ್ನ ಆರೋಗ್ಯ ವಿಷಮಿಸಿದ್ದು ತಮಗೆ ಗೊತ್ತು. ನನ್ನ ಅನೇಕ ಸ್ನೇಹಿತರು ತುಂಬಾ ವಿಶ್ವಾಸದಿಂದ ಬೇಗ ನಿಮ್ಮ ಆರೋಗ್ಯ ಚೇತರಿಸಲಿ ಎಂದು ಶುಭಾಶಯಗಳನ್ನು ಕಳುಹಿಸಿದ್ದಾರೆ. ನಾನಿನ್ನೂ ಆಸ್ಪತ್ರೆಯಲ್ಲೇ ಇರುವ ಕಾರಣ ಆ ಎಲ್ಲಾ ಬಂಧುಗಳಿಗೂ ಉತ್ತರಿಸಲು ಆಗುತ್ತಿಲ್ಲ. ಆದ್ದರಿಂದ ಈ ಸಂದೇಶವನ್ನು ಕಳುಹಿಸುತ್ತಿದ್ದೇನೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿ, ನನ್ನ ಬಗ್ಗೆ ಪ್ರೀತಿ ವಿಶ್ವಾಸ ವ್ಯಕ್ತಪಡಿಸಿರುವ ಎಲ್ಲಾ ಆತ್ಮೀಯರಿಗೂ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು.." ಎಂಬುದಾಗಿ ಎಚ್​ಎಸ್​ವಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net