More

    ಖಾತೆ ಹಂಚಿಕೆಗೂ ಮೊದಲೇ ಪೊಲೀಸರಿಗೆ ಖಡಕ್ ನಿರ್ದೇಶನಗಳನ್ನು ನೀಡಿದ ಪ್ರಿಯಾಂಕ್ ಖರ್ಗೆ!

    ಕಲಬುರ್ಗಿ: ಸಚಿವ ಪ್ರಿಯಾಂಕ ಖರ್ಗೆ ಕಲಬುರಗಿ ಪೊಲೀಸ್ ಕಮಿಷನರ್ ಹಾಗೂ ಎಸ್ಪಿಗೆ ಟಾಸ್ಕ್ ನೀಡಿದ್ದು ಖಾತೆ ಹಂಚಿಕೆಗೂ ಮುನ್ನವೇ ಕೆಲಸಕ್ಕಿಳಿದಿದ್ದಾರೆ.

    ಪೊಲೀಸ್ ಠಾಣೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಟಾಸ್ಕ್ ನೀಡಲಾಗಿದ್ದು ಅಕ್ರಮ ಜೂಜು ಮತ್ತು ಬೆಟ್ಟಿಂಗ್ ದಂಧೆಗೆ ಬ್ರೇಕ್ ಹಾಕಲು ಸೂಚನೆ ನೀಡಿದ್ದಾರೆ.

    ಪ್ರಿಯಾಂಕ್​ ಖರ್ಗೆ ಜಿಲ್ಲೆಯಲ್ಲಿನ ಅಕ್ರಮ ಮರಳು ದಂಧೆ ಮತ್ತು ಅಕ್ರಮ ಗಣಿಗಾರಿಕೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ್ದು ಕಲಬುರಗಿ ಜಿಲ್ಲೆಯಲ್ಲಿನ ಮಾದಕ ದಂಧೆಗಳಾದ ಡ್ರಗ್, ಗಾಂಜಾ, ಅಫೀಮ್ ದಂಧೆ ನಿಲ್ಲಿಸುವಂತೆ ಖಡಕ್ ಆಗಿ ಆದೇಶ ನೀಡಿದ್ದಾರೆ.

    ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಬಲಗೈ ಬಂಟ ಅರೆಸ್ಟ್..!

    ಇನ್ನು ಚಿತ್ತಾಪುರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ, ರೌಡಿಶೀಟರ್ ಮಣಿಕಂಠ ರಾಠೋಡ್ ವಿರುದ್ಧ ಪರೋಕ್ಷವಾಗಿ ಆದೇಶ ನೀಡಿದ್ದು ರೌಡಿಗಳು ಮತ್ತು ದ್ವೇಷಭಾಷಣ ಮಾಡುವವರನ್ನ ನಿಯಂತ್ರಿಸುವಂತೆ ಸೂಚನೆ ನೀಡಿದ್ದಾರೆ. ಇನ್ನು ಸಾರ್ವಜನಿಕರಿಗೆ ಅನಗತ್ಯವಾಗಿ ಪೊಲೀಸರು ಕಿರುಕುಳ ನೀಡುವುದನ್ನ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.

    ಪೊಲೀಸ್ ಕಮಿಷನರ್ ಆರ್ ಚೇತನ್, ಎಸ್​ಪಿ ಇಶಾ ಪಂತ್​ಗೆ ಖುದ್ದು ಕರೆ ಮಾಡಿ ಸೂಚನೆ ನೀಡಿದ ಸಚಿವ ಪ್ರೀಯಾಂಕ ಖರ್ಗೆ ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸೋದಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್ ಫೇಸ್​ಬುಕ್‌ನಲ್ಲೂ ಕಮಿಷನರ್ ಹಾಗೂ ಎಸ್​ಪಿಗೆ ನೀಡಿದ ಟಾಸ್ಕ್​ಗಳ ಬಗ್ಗೆ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ; ಬಿಜೆಪಿ ಮುಖಂಡನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

    ಈ ನಡೆಗಳಿಂದಾಗಿ ಪ್ರಿಯಾಂಕ ಖರ್ಗೆ ಮೂಲಕ ಗೃಹ ಖಾತೆ ಮೇಲೆ ಕಣ್ಣಿಟ್ಟಿದ್ದಾರಾ ಎಂಬ ಅನುಮಾನ ಹುಟ್ಟಿದ್ದು ಖಾತೆ ಹಂಚಿಕೆ ಮುನ್ನವೇ ಪೊಲೀಸ್ ಇಲಾಖೆ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts