ಸಿನಿಮಾ

ಶುಭ್​ಮನ್ ಗಿಲ್​ ವಿರುದ್ಧ ನಿಂದನಾತ್ಮಕ ಕಾಮೆಂಟ್​ಗಳು! ರಿಷಭ್ ಪಂತ್ ರೀತಿ ಕಾರ್​ ಅಪಘಾತ ಆಗಬೇಕಿತ್ತು ಎಂದ ಕಿಡಿಗೇಡಿಗಳು…

ನವದೆಹಲಿ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅಜೇಯ ಶತಕ ಸಿಡಿಸಿದ್ದಾರೆ. IPL 2023 ರ ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯಲು RCB ಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ಆದಾಗ್ಯೂ, ಗಿಲ್ 52 ಎಸೆತಗಳಲ್ಲಿ 104 ರನ್ ಗಳಿಸಿ ವಿರಾಟ್ ಕೊಹ್ಲಿ ಅವರ ಶತಕವನ್ನು ನಿಶ್ಪ್ರಯೋಜಕಗೊಳಿಸಿದರು. 198 ರನ್ ಬೆನ್ನಟ್ಟಿದ ಗುಜರಾತ್, ಕೊನೆಯ ಓವರ್‌ನಲ್ಲಿ ಗಿಲ್ ಸಿಕ್ಸರ್ ಸಿಡಿಸುವ ಮೂಲಕ ಗುರಿ ತಲುಪಿ ಆರ್‌ಸಿಬಿಗೆ ನಿರಾಸೆ ಮೂಡಿಸಿತು.

ಪಂದ್ಯ ಮುಗಿದ ಕೂಡಲೇ RCB ಅಭಿಮಾನಿಗಳೆಂದು ಹೇಳಿಕೊಳ್ಳುವ ಸಾಮಾಜಿಕ ಮಾಧ್ಯಮ ಬಳಕೆದಾರರು ಗಿಲ್ ಅವರನ್ನು ನಿಂದಿಸಲು ಪ್ರಾರಂಭಿಸಿದರು. ಗಿಲ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಮತ್ತು ಟ್ವಿಟರ್‌ನಲ್ಲಿ ಅಸಹ್ಯಕರ ಮತ್ತು ದ್ವೇಷಪೂರಿತ ಕಾಮೆಂಟ್‌ಗಳು ಗೋಚರಿಸಿವೆ.

ಎಲ್ಲಿಯವರೆಗೆ ಎಂದರೆ ಶುಭ್​ಮನ್​ ಗಿಲ್​ ಸಹೋದರಿಯ ಇನ್​ಸ್ಟಾಗ್ರಾಂ ಖಾತೆಯ ಲಿಂಕ್​ಅನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಕಿಡಿಗೇಡಿಯೊಬ್ಬ “ಏನೇನು ಮಾಡಬೇಕೋ ಅದನ್ನು ಮಾಡಿ” ಎಂಬ ತಲೆಬರಹವನ್ನೂ ನೀಡಿದ್ದಾನೆ!

ಇನ್ನೋರ್ವ ಬಳಕೆದಾರರಂತೂ ರಿಷಭ್​ ಪಂತ್ ಎದುರಿಸಿದ್ದ ಭೀಕರ ಅಪಘಾತ, ಗಿಲ್​ಗೆ ಆಗಬೇಕಿತ್ತು ಎಂದು ಬರೆದುಕೊಂಡಿದ್ದಾರೆ.

ಇನ್ನು ಇನ್​ಸ್ಟಾಗ್ರಾಂ ಖಾತೆಯಲ್ಲೂ ಬಾಯಿಗೆ ಬಂದಂತೆ ಬೈದಿರುವ So called ಆರ್​ಸಿಬಿ ಅಭಿಮಾನಿಗಳು ಶಿಷ್ಟಾಚಾರದ ಎಲ್ಲೆಯನ್ನು ಮೀರಿದ್ದಾರೆ. 

Latest Posts

ಲೈಫ್‌ಸ್ಟೈಲ್