ಬೆಂಗಳೂರು: ಕೆ.ಆರ್ ಸರ್ಕಲ್ ಅಂಡರ್ ಪಾಸ್ ಬಳಿ ಸಿಲುಕಿ ಯುವತಿ ಸಾವನ್ನಪ್ಪಿರುವ ಪ್ರಕರಣ ನಡೆದಿದ್ದು ಘಟನೆಯ ಸುದ್ದಿ ಕೇಳಿ ಬರುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ದೌಡಾಯಿಸಿದ್ದಾರೆ.
ಏನಿದು ಘಟನೆ?
ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದರ ಪರಿಣಾಮ ನಗರದ ಅನೇಕ ಅಂಡರ್ ಪಾಸ್ಗಳಲ್ಲಿ ನೀರು ನಿಂತಿತ್ತು. ಈ ಸಂದರ್ಭ, ಕೆ.ಆರ್ ಸರ್ಕಲ್ ಅಂಡರ್ ಪಾಸ್ ಬಳಿ ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದರು. ಡ್ರೈವರ್ ಮತ್ತು ಕುಟುಂಬಸ್ಥರು ಸೇರಿ ಏಳು ಜನ ಆಂಧ್ರ ಮೂಲದವರಾಗಿದ್ದು ಸಮಿತಾ 13, ಸೋಹಿತಾ 15, ಸಂಭ್ರಾಜ್ಯಂ 65, ಭಾನು ರೇಖಾ 22 ಹರೀಶ್ ಡ್ರೈವರ್ , ಸ್ವರೂಪ 47, ಸಂದೀಪ್ 35 ಕಾರಿನಲ್ಲಿದ್ದರು.
ಅಂಡರ್ ಪಾಸ್ನಲ್ಲಿ ಇಳಿಯುತ್ತಿದ್ದ ಹಾಗೆಯೇ, ಎಲ್ಲರಿಗೂ ಕೆಳಗಿಳಿಯಲು ಡ್ರೈವರ್ ಹೇಳಿದ್ದರು. ಚಾಲಕ, ನೀರು ಹೆಚ್ಚಾಗಿದೆ.. ಗಾಡಿ ಹೋಗಲ್ಲ ಎಂದಿದ್ದರು. ದರೂ ಕಾರು ಮೂವ್ ಮಾಡಿ ಹೋಗ್ಬೋದು ಅಂತಾ ಡ್ರೈವರ್ಗೆ ಪ್ರಯಾಣಿಕರು ಒತ್ತಾಯಿಸಿದ್ರು. ಹೀಗಾಗಿ ಚಾಲಕ ಗಾಡಿ ಮೂವ್ ಮಾಡಿದ್ದರು. ಆದರೆ ಕ್ಷಣ ಕ್ಷಣಕ್ಕೂ ನೀರು ಹೆಚ್ಚಾಗಿದ್ದು ಇಂಜಿನ್ ಗೆ ನೀರು ತುಂಬಿಕೊಂಡಿದೆ. ಇದರಿಂದಾಗಿ ಕಾರು ಬಂದ್ ಬಿದ್ದಿದ್ದು ನಂತರ ಕಾರು ರೀಸ್ಟಾರ್ಟ್ ಮಾಡಲು ಸಾಧ್ಯವಾಗಿಲ್ಲ.
ಅಷ್ಟರಲ್ಲೇ ನೀರು ಕಾರಿನ ಡೋರ್ ಮಟ್ಟ ಬಂದಿತ್ತು. ನಂತರ ಕಾರಿನ ಬಾಗಿಲುಗಳೂ ಬ್ಲಾಕ್ ಆಗಿದ್ದು ತೆಗೆಯೋಕೆ ಕಷ್ಟ ಆಗಿದೆ. ಈ ವೇಳೆ ಡ್ರೈವರ್ ಡೋರ್ ತೆಗೆದು ಒಬ್ಬೊಬ್ಬರನ್ನೇ ಕೆಳಗೆ ಇಳಿಸೋಕೆ ಪ್ರಯತ್ನ ಮಾಡಿದ್ದಾನೆ..
ಅಷ್ಟರಲ್ಲಾಗಲೇ ಕಾರಿನ ಒಳಗಡೆ ಮೃತ ಭಾನುರೇಖಾ ನೀರು ಕುಡಿದು ಜ್ಞಾನ ಕಳೆದು ಕೊಂಡಿದ್ದರು. ನಂತರ ಅಗ್ನಿಶಾಮಕ ಸಿಬ್ಬಂದಿ ಬಂದು ಒಬ್ಬೊಬ್ಬರನ್ನೇ ರಕ್ಷಣೆ ಮಾಡಿದ್ದಾರೆ.. ನಂತರ ಎಲ್ಲರನ್ನೂ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆ ತಂದಿದ್ದು ಬಂದ ಕೂಡಲೇ ಆಸ್ಪತ್ರೆ ವೈದ್ಯರು ಭಾನುರೇಖಾಳನ್ನ ಚೆಕ್ ಮಾಡಿದ್ದಾರೆ. ಈ ವೇಳೆ ಮೃತ ಆಗಿರುವುದು ಗೊತ್ತಾಗಿದೆ. ಸದ್ಯ ಘಟನೆ ಸಂಬಂಧ ಹಲಸೂರ್ ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟುಂಬಸ್ಥ ಸಂದೀಪ್ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದ್ದು ಸದ್ಯ ಎಫ್ಐಆರ್ ದಾಖಲು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿರೋ ಪೊಲೀಸರಿದ್ದಾರೆ.
ಡಿಕೆಶಿ ಹೇಳಿದ್ದೇನು?
ನಗರದ KR ಸರ್ಕಲ್ ಅಂಡರ್ ಪಾಸ್ ನಲ್ಲಿ ಸಿಲುಕಿ ಯುವತಿ ಮೃತಪಟ್ಟ ಹಿನ್ನೆಲೆ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಘಟನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.
K. R ಸರ್ಕಲ್ಗೆ ಡಿಕೆಶಿ ಜತೆಯಲ್ಲೇ ತುಷಾರ್ ಗಿರಿನಾಥ್ ಹಾಗೂ ರಾಮಲಿಂಗಾ ರೆಡ್ಡಿ ತೆರಳಿದ್ದರು. ಘಟನಾ ಸ್ಥಳದಲ್ಲಿ ಪರಿಶೀಲನೆ ಬಳಿಕ ಡಿಕೆಶಿ ಹೇಳಿಕೆ ನೀಡಿದ್ದು ಈ ಸಂದರ್ಭ “ನಾನು ಕೂಡ ಬಿಬಿಎಂಪಿ ಆಯುಕ್ತರ ಜೊತೆ ಮಾತಾಡಿದೆ.
ಅಂಡರ್ಪಾಸ್ಗಳಲ್ಲಿ ನೀರು ನಿಲ್ಲಬಾರದು. ಅಂಡರ್ ಪಾಸ್ ಗಳಿಗೆ ಕ್ಯಾಮೆರಾ ಅಳವಡಿಕೆಗೆ ಸೂಚನೆ ನೀಡಿದ್ದೇನೆ. ಈ ರೆಸ್ಕ್ಯೂನಲ್ಲಿ ಭಾಗಿಯಾದವರಿಗೆ ಅಭಿನಂದಿಸುತ್ತೆವೆ.
ಹೆಚ್ಚು ಪ್ರಾಣಾಪಾಯ ತಪ್ಪಿಸಿದೆ. ಪರಿಹಾರ ಮುಖ್ಯವಲ್ಲ ಪ್ರಾಣ ಮುಖ್ಯ ಒಂದು ಡೀಟೇಲ್ ಆಕ್ಷನ್ ಪ್ಲಾನ್ ಮಾಡಬೇಕಿದೆ. ನೀವು ಮಾಧ್ಯಮ ಸಹ ಉತ್ತಮ ಕೆಲಸ ಮಾಡಿದ್ದೀರಿ, ಅದನ್ನು ನಾನು ಅಭಿನಂದಿಸ್ತೇನೆ. ಈ ರೀತಿ ಮುಂದೆ ಆಗದಂತೆ ನೋಡಿಕೊಳ್ಳುತ್ತೇವೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ” ಎಂದಿದ್ದಾರೆ.