More

    ಮೂರನೇ ಬಾರಿಗೆ ಎಂ.ಬಿ. ಪಾಟೀಲರಿಗೆ ಮಂತ್ರಿಗಿರಿ

    ಬೆಂಗಳೂರು: ಮಾಜಿ ಸಚಿವ, ಶಿಕ್ಷಣ ಪ್ರೇಮಿ, ಸೋಲರಿಯದ ಸರದಾರ, ನಿರಂತರ 25 ವರ್ಷಗಳ ಕಾಲ ಕರ್ನಾಟಕ ಶಾಸನ ಸಭೆಯ ಸದಸ್ಯರಾಗಿದ್ದ ದಿ.ಬಿ.ಎಂ. ಪಾಟೀಲರ ಜೇಷ್ಠ ಪುತ್ರ ಎಂ.ಬಿ. ಪಾಟೀಲರು ಮೂರನೇ ಬಾರಿಗೆ ಮಂತ್ರಿಗಿರಿ ಪಡೆಯುವ ಮೂಲಕ ಬರದ ಜಿಲ್ಲೆಯ ರಾಜಕೀಯ ಬರ ಅಳಿಸಿದ್ದಾರೆ.

    1991-1994 ರ ಅವಧಿಯಲ್ಲಿ ತಮ್ಮ 27 ನೇ ವಯಸ್ಸಿನಲ್ಲಿಯೇ ಶಾಸನ ಸಭೆ ಪ್ರವೇಶಿಸುವ ಮೂಲಕ ರಾಜಕೀಯ ಪ್ರವೇಶಿಸಿದ ಎಂ.ಬಿ. ಪಾಟೀಲರು, 1998ರಲ್ಲಿ ಸಂಸದರಾಗಿಯೂ ಆಯ್ಕೆಯಾಗಿ, ತದನಂತರ 2004 ರಲ್ಲಿ ತಿಕೋಟಾ ಮತಕ್ಷೇತ್ರದಿಂದ, 2008, 2013, 2018 ಹಾಗೂ 2023ರಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಸತತ ಗೆಲುವು ಸಾಧಿಸಿದರು.

    2018ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವೆ ಸಾದ್ವಿ ನಿರಂಜನ ಜ್ಯೋತಿ ಅವರಂಥ ರಾಷ್ಟ್ರೀಯ ನಾಯಕರ ಪ್ರಚಾರ ಭರಾಟೆ ನಡುವೆಯೂ 30 ಸಾವಿರ ಮತಗಳ ಅಂತರದಿಂದ ಜಯ ಸಾಧಿಸುವ ಮೂಲಕ ಕ್ಷೇತ್ರದಲ್ಲಿ ದಾಖಲೆ ಬರೆದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಕರೆಯಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ ರಾಜ್ಯದ ಏಕೈಕ ನಾಯಕನೆಂಬ ಖ್ಯಾತಿ ಗಳಿಸಿದ್ದರು. 2023ರ ಚುನಾವಣೆಯಲ್ಲಿ 15216 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

    ಮೂರನೇ ಬಾರಿಗೆ ಮಂತ್ರಿ:

    2013ರಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಸರ್ಕಾರದ ಸಂಪುಟ ಸೇರ್ಪಡೆ ಮೂಲಕ ಎಂ.ಬಿ. ಪಾಟೀಲರು ಮೊದಲ ಬಾರಿಗೆ ಮಂತ್ರಿಯಾದರು. ಬಳಿಕ 2018ರಲ್ಲಿ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಗೃಹ ಮಂತ್ರಿಯಾದರು. ಸಮ್ಮಿಶ್ರ ಸರ್ಕಾರ ಪತನಾನಂತರ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಪ್ರಸಕ್ತ 2023ರ ಸಿದ್ದರಾಮಯ್ಯ ಸಂಪುಟದಲ್ಲಿ ಮತ್ತೆ ಮಂತ್ರಿ ಸ್ಥಾನ ಪಡೆದಿರುವುದು ಎಂ.ಬಿ. ಪಾಟೀಲರ ಸಾಧನೆಯ ಮೈಲಿಗಲ್ಲು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts