IRS ಅಧಿಕಾರಿ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದ ಮಹಿಳಾ IAS ಅಧಿಕಾರಿ!

arrested
Published on: 

ನವದೆಹಲಿ: ಮಹಿಳಾ IAS ಅಧಿಕಾರಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ IRS ಅಧಿಕಾರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354, 354-ಡಿ (ಹಿಂಬಾಲಿಸುವಿಕೆ), 506 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. 2020 ರಲ್ಲಿ ಕೋವಿಡ್-19 ಸಪೋರ್ಟ್​ ಗ್ರೂಪ್​ನಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿ ಅಧಿಕಾರಿ ತನ್ನೊಂದಿಗೆ ಸಂಪರ್ಕಕ್ಕೆ ಬಂದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಆರೋಪಿ ಅಧಿಕಾರಿ ಹಲವಾರು ಬಾರಿ ತನ್ನ ಹತ್ತಿರ ಬರಲು ಪ್ರಯತ್ನಿಸಿದರೂ ನಿರಾಕರಿಸುತ್ತಲೇ ಇದ್ದರು ಎಂದು ಆರೋಪಿಸಿದರು.

ಪತಿಗೆ ಈ ವಿಷಯ ತಿಳಿದಾಗ, ಅವರು ಆರೋಪಿಯನ್ನು ಮಾತನಾಡಿಸಿ ನಡತೆಯನ್ನು ಸರಿಪಡಿಸಲು ಹೇಳಿದರು ಎಂದು ಸಂತ್ರಸ್ತೆ ಹೇಳಿದ್ದಾರೆ. ಆರೋಪಿಗಳು ಭೇಟಿಯಾಗುವಂತೆ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತೆ ಅಧಿಕಾರಿ ಹೇಳಿದರು. ಆರೋಪಿಯು ತನ್ನ ಕಚೇರಿಯಲ್ಲಿ ಅವಳನ್ನು ಭೇಟಿಯಾಗಲು ಬಂದಿದ್ದು ತನ್ನೊಂದಿಗೆ ಸಂಬಂಧ ಹೊಂದಲು ಅವಳನ್ನು ಬೆದರಿಸಲು ಪ್ರಯತ್ನಿಸಿದನು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)​