

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೆ ಬಾಲಿವುಡ್ ಘಟಾನುಘಟಿಗಳಲ್ಲಿ ಒಂದಷ್ಟು ನಡುಕ ಉಂಟಾಗಿದೆ. ತನಿಖೆ ಎದುರಿಸುತ್ತಿದ್ದಾರೆ. ಇದೆಲ್ಲದರ ನಡುವೆ, ಸುಶಾಂತ್ ಅವರ ಹಳೇ ಪೋಸ್ಟ್ಗಳು, ವಿಡಿಯೋಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಅದರಲ್ಲಿ ಈಗಾಗಲೇ ತಾಯಿಯನ್ನು ನೆನೆದು ಕೊನೆಯ ಇನ್ಸ್ಟಾಗ್ರಾನಲ್ಲಿ ಹಾಕಿದ್ದ ಪತ್ರ ಕಂಬನಿ ತರಿಸಿತ್ತು. ಇದೀಗ ನಾಲ್ಕು ವರ್ಷದ ಹಿಂದಿನ ಪತ್ರವೊಂದು ಸಿಕ್ಕಿದೆ. ಅದರಲ್ಲಿಯೂ ತಾಯಯನ್ನೇ ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ಮನೆ ಮೇಲೆ ಬಾಂಬ್ ದಾಳಿ ಬೆದರಿಕೆ!
ತಾಯಿಗೆ ನನ್ನ ಪ್ರಣಾಮಗಳು.. ‘ನೀನು ಎಲ್ಲಿಯವರೆಗೂ ಇದ್ದಿಯೋ, ಅಲ್ಲಿಯವರೆಗೂ ನಾನಿದ್ದೆ... ಇದೀಗ ನಿನ್ನ ನೆನಪುಗಳಷ್ಟೇ ನನ್ನಲ್ಲಿ ಉಳಿದಿರುವುದು. ನಾನು ನೆರಳಿನಂತೆ ಒಬ್ಬಂಟಿಯಾಗಿ ಬಂದೆ.. ಒಂದು ಸಣ್ಣ ಕಂಪನದಂತೆ.. ನಿಜಕ್ಕೂ ಇದು ಸುಂದರ ಮತ್ತು ಶಾಶ್ವತ.. ನಿನಗೆ ನೆನಪಿದೆಯಾ?, ನೀನು ನನಗೆ ಪ್ರಮಾಣ ಮಾಡಿದ್ದೆ. ಎಂದಿಗೂ ನನ್ನ ಜತೆ ಇರುವುದಾಗಿ.. ನಾನೂ ಅದೇ ರೀತಿ ಪ್ರಮಾಣ ಮಾಡಿದ್ದೆ.. ನಗುತ್ತಲೇ ಇರುವೆನೆಂದು.. ’ ಹೀಗೆ ಅಮ್ಮನನ್ನು ನೆನಪು ಮಾಡಿಕೊಂಡಿದ್ದರು ಸುಶಾಂತ್.
ಇದೀಗ 2018ರ ಆಗಸ್ಟ್ 27 ರಂದು ಬರೆದ ಪತ್ರ ಎಲ್ಲೆಡೆ ವೈರಲ್ ಆಗುತ್ತಿದ್ದು, ಅಮ್ಮನ ನೆನೆದು ಆವತ್ತೇ ಸುಶಾಂತ್, ಬದುಕುವ ಆಸೆಯನ್ನು ಕಳೆದುಕೊಂಡಿದ್ರಾ, ಅಮ್ಮನ ಪ್ರೀತಿ ಇಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ರಾ ಎಂದೆಲ್ಲ ಇದೀಗ ಅಂದಿನ ಪೋಸ್ಟ್ಗೆ ಸಂದೇಶಗಳನ್ನು ರವಾನಿಸುತ್ತಿದ್ದಾರೆ.
‘ಮಸುಕಾದ ಗತಕಾಲವು ಕಣ್ಣಾಲಿಗಳೊಂದಿಗೆ ಬಾಷ್ಪೀಕರಣವಾಗುತ್ತಿದೆ… ಮುಗಿಯದ ಕನಸುಗಳು ನಗುವಿನ ಕಮಾನು ಕಟ್ಟಿವೆ….. ಕ್ಷಣಿಕವಾದ ಬದುಕು ಇವೆರಡರ ನಡುವಿನ ಹೊಯ್ದಾಟದಲ್ಲಿದೆ….’ ಎಂದು ಸುಶಾಂತ್ ತಾಯಿಯನ್ನು ನೆನೆದು ಕೊನೆಯದಾಗಿ ಇನ್ಸ್ಟಾ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು. (ಏಜೆನ್ಸೀಸ್)