ನಿಮ್ಮ ಪ್ರೀತಿಗೆ ನಾನು ಚಿರಋಣಿ ... ಅಭಿಮಾನಿಗಳಿಗೆ ಮೇಘನಾ ರಾಜ್​ ಪತ್ರ

Meghana - Final
Published on

ಗುರುವಾರವಷ್ಟೇ ಅಗಲಿದ ಪತಿ ಚಿರು ಅವರನ್ನು ಹೃದಯಸ್ಪರ್ಶಿ ಪತ್ರದ ಮೂಲಕ ನೆನಪಿಸಿಕೊಂಡಿದ್ದ ಮೇಘನಾ ರಾಜ್​, ಇಂದು ಚಿರು ಸಾವಿನ ಸಂದರ್ಭದಲ್ಲಿ ಕಂಬನಿ ಮಿಡಿದ ಮತ್ತು ಧೈರ್ಯ ತುಂಬಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಪತ್ರ ಬರೆದಿರುವ ಅವರು, ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಆ ಪಾತ್ರದ ಒಕ್ಕಣೆ ಹೀಗಿದೆ ...

ಕಳೆದ ಕೆಲವು ದಿನಗಳು ನನ್ನ ಜೀವನದ ಅತೀ ಕಠಿಣ ಹಾಗೂ ಆಘಾತಕರ.ಕಲ್ಪನೆಗೂ ಮೀರಿ ಅದ್ಭುತವಾಗಿದ್ದ ನನ್ನ ಸುಂದರ ಲೋಕ ಅಲ್ಲೋಲ ಕಲ್ಲೋಲ ಆದಾಗ, ಇನ್ನು ನನಗಾಗಿ ಏನೂ ಇಲ್ಲವೆಂದು ಅಂದುಕೊಂಡಾಗ ಕಗ್ಗತ್ತಲೆಯಲ್ಲಿ ಆಶದೀಪದ ಬೆಳಕಿನಂತೆ ಕಂಡಿದ್ದು ನನ್ನ ಕುಟುಂಬ, ಸ್ನೇಹಿತರು, ಚಿತ್ರರಂಗದ ಸಹಪಾಠಿಗಳು, ಎಲ್ಲರಿಗಿಂತ ಹೆಚ್ಚಾಗಿ ಅಭಿಮಾನಿಗಳು ತೋರಿದ ಪ್ರೀತಿ, ವಾತ್ಸಲ್ಯ ಮತ್ತು ಮಮತೆ.

ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಅಭಿಮಾನಕ್ಕೆ ಕೃತಜ್ಱತೆ ಸಲ್ಲಿಸಲು ಒಂದು ಜನುಮ ಸಾಲದು. ಆ ನಿಮ್ಮ ಪ್ರೀತಿಯೇ ನನಗೆ ಆಸರೆ, ರಕ್ಷಾಕವಚ.

ನಾನು ಅತ್ತಾಗ ನೀವು ನನ್ನೊಂದಿಗೆ ಕಣ್ಣೀರು ಹಾಕಿದ್ದೀರಿ, ನನ್ನ ನೋವನ್ನು ನೀವೂ ಉಂಡಿದ್ದೀರಿ, ನನ್ನಷ್ಟೇ ಚಿರು ಅವರನ್ನು ಪ್ರೀತಿಸಿದ್ದೀರಿ. ನಿಮ್ಮ ಆ ಪ್ರೀತಿಗೆ ನಾನು ಚಿರಋಣಿ, ಇಂತಹ ನೋವಿನ ಸಮಯದಲ್ಲಿ ನಿಮ್ಮ ಅಭಿಮಾನ, ಚಿತ್ರರಂಗದ ಬೆಂಬಲ ಎಲ್ಲವೂ ಚಿರು ಸಂಪಾದಿಸಿದ ಪ್ರೀತಿಯ ರಾಶಿಯ ಗುರುತು. ನಿಮ್ಮ ಅಭಿಮಾನ ಗೆದ್ದ ಅವರಿಗಿಂತ ಸಿರಿವಂತ ಇನ್ಯಾರೂ ಇಲ್ಲ. ನಮ್ಮ ಮನೆಯಲ್ಲಿ ಎಂದು ಕರೆಯುತ್ತಿದ್ದ ಚಿರು ಅವರನ್ನು ನಿಮ್ಮ ಮಗನಂತೆ ಭಾವಿಸಿ ಇದ್ದಷ್ಟು ದಿನ ರಾಜನಂತೆ ಬದುಕ್ಕಿದ್ದ ಚಿರು ಅವರನ್ನು ಸಾಲುಸಾಲಾಗಿ ಬಂದು, ಪ್ರೀತಿಯಿಂದ ಮಹಾರಾಜನಂತೆ ಕಳುಹಿಸಿಕೊಟ್ಟ ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಆ ಮಹಾರಾಜ ನನ್ನ ಮಡಿಲಿಗೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ತಿರುಗಿ ಬರುವನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net