ನೆಪೋಟಿಸಂ ತಡೆಗೆ ನೆಪೋಮೀಟರ್​ ಆ್ಯಪ್​ ಬಿಡುಗಡೆ; ಸಡಕ್​ಗೆ ಸಿಕ್ತು ಬಾಯ್ಕಾಟ್​ ಪಟ್ಟ!

nepometer-sadak-759
Published on

ಸುಶಾಂತ್​ ಸಾವಿನ ಬೆನ್ನಲ್ಲೇ ಬಾಲಿವುಡ್​ನಲ್ಲಿನ ನೆಪೋಟಿಸಂ ಬಗ್ಗೆ ಹಲವಾರು ಕಲಾವಿದರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಹೊರಗಿನ ಪ್ರತಿಭೆಗಳಿಗೆ ಬಾಲಿವುಡ್​ನಲ್ಲಿ ಮನ್ನಣೆ ನೀಡುವುದಿಲ್ಲ ಎಂಬ ಮಾತುಗಳು ಹೇಳಿಬರುತ್ತಿವೆ. ಒಂದಷ್ಟು ಸಂಸ್ಥೆಗಳು ಇಡೀ ಬಾಲಿವುಡ್​ನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದರ್ಬಾರ್ ಮಾಡುತ್ತಿವೆ ಎಂದೂ ಆರೋಪಗಳು ಹೇಳಿಬರುತ್ತಿವೆ. ಇದೀಗ ಅದೇ ನೆಪೋಟಸಿಂ ಬಗ್ಗೆ ಸುಶಾಂತ್​ ಸಿಂಗ್ ಸಂಬಂಧಿ ನೆಪೋಮೀಟರ್​ ಅನ್ನೋ ಆ್ಯಪ್​ ಲಾಂಚ್​ ಮಾಡಿದ್ದು, ಸಡಕ್​ಗೆ ಬಾಯ್ಕಾಟ್​​ ಪಟ್ಟ ಸಿಕ್ಕಿದೆ!

ಆ ಆ್ಯಪ್​ ಮೂಲಕ ಸಡಕ್​ ಚಿತ್ರದಲ್ಲಿ ಕೆಲಸ ಮಾಡಿರುವವರೆಲ್ಲ ಬಹುತೇಕರು ಒಂದೇ ಕುಟುಂಬಕ್ಕೆ ಸಂಬಂಧಿಸಿದವರಾಗಿದ್ದಾರೆಂಬುದು ಆ್ಯಪ್​ ಮೂಲಕ ಗೊತ್ತಾಗಿದ್ದು, ಶೇ. 98 ಸ್ವಜನಪಕ್ಷಪಾತತೆಯಿಂದ ಕೂಡಿದೆ ಎಂದು ನೆಟ್ಟಿಗರು ವೋಟ್​ ಮಾಡಿ, ಬಾಯ್ಕಾಟ್​​​ ಸಿನಿಮಾ ಎಂಬ ಅಭಿಯಾನ ಶುರು ಮಾಡಿದ್ದಾರೆ. ಹೌದು, ನೆಪೋಮೀಟರ್​ ಆ್ಯಪ್​ನಲ್ಲಿ ಒಟ್ಟು 5 ಕೆಟಗೆರಿ ಮಾಡಲಾಗಿದೆ. ಆ ಪೈಕಿ ನಿರ್ಮಾಪಕರು, ಮುಖ್ಯ ಪಾತ್ರಧಾರಿಗಳು, ಪೋಷಕ ಕಲಾವಿದರು, ನಿರ್ದೇಶಕರು, ಬರಹಗಾರರು ಬಹುತೇಕರು ಒಂದೇ ಕುಟುಂಬದಿಂದ ಬಂದವರಾಗಿದ್ದಾರೆ. ಅದೇ ರೀತಿ ನೆಪೋಮಿಟರ್​ ಅನ್ನೋ ಟ್ವಿಟರ್​ ಖಾತೆ ಸಹ ತೆರೆಯಲಾಗಿದೆ.

‘ಬಾಲಿವುಡ್​ನಲ್ಲಿ ನೆಪೋಟಿಸಂ ವಿರುದ್ಧ ಹೋರಾಡಲು ಈ ವೇದಿಕೆ ಸೃಷ್ಟಿ ಮಾಡಿದ್ದೇವೆ. ಒಂದು ಸಿನಿಮಾದಲ್ಲಿನ ನೆಪೋಟಿಸ್ಟಿಕ್​ ಪ್ರಮಾಣ ಯಾವ ಮಟ್ಟದಲ್ಲಿದೆ ಮತ್ತು ಹೊರಗಿನ ಕಲಾವಿದರ ಸಂಖ್ಯೆ ಎಷ್ಟಿದೆ ಎಂಬುದನ್ನು ನೀಡುತ್ತೇವೆ. ಒಂದು ವೇಳೆ ನೆಪೋಮೀಟರ್ ಏರುಗತಿಯಲ್ಲಿದ್ದರೆ, ಆ ಚಿತ್ರವನ್ನು ಬೈಕಾಟ್​ ಮಾಡಬೇಕು’ ಎಂದು ಟ್ವಿಟ್​ ಸಹ ಮಾಡಲಾಗಿದೆ.

ನೆಪೋಮೀಟರ್ ಆ್ಯಪ್​ ಅಭಿವೃದ್ಧಿಪಡಿಸಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸುಶಾಂತ್​ ಸಿಂಗ್​ಗೆ ಆದ ಸ್ಥಿತಿ ಇನ್ಯಾರಿಗೂ ಬರುವುದು ಬೇಡ ಎಂದು ನೆಟ್ಟಿಗರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net