

ನವದೆಹಲಿ: 'ಸರ್ವಿಕಲ್ ಕ್ಯಾನ್ಸರ್ಗೆ ಭಾರತದಲ್ಲಿ ಮೊದಲ ಸ್ವದೇಶಿ ವ್ಯಾಕ್ಸೀನ್ನನ್ನು ತಯಾರಿಸಲಾಗಿದೆ. ಕೋವಿಡ್ನಿಂದಾಗಿ ಇದು ತಡವಾಗಿದೆ. 2023ಕ್ಕೆ ಈ ವ್ಯಾಕ್ಸೀನ್ ಮಾರುಕಟ್ಟೆಗೆ ಬರಲಿದೆ' ಎಂದು ಎಸ್ಐಐ ಮುಖ್ಯಸ್ಥ ಆದರ್ ಪೂನಾವಾಲಾ ಹೇಳಿದ್ದಾರೆ.
'ಈ ವ್ಯಾಕ್ಸೀನ್ ಜನರಿಗೆ ಕೈಗೆಟಕುವ ದರದಲ್ಲಿ ಸಿಗಲಿದೆ. ಇದರ ಬೆಲೆ 200-400 ರೂಪಾಯಿ ಇರಲಿದೆ. ದರವನ್ನು ನಾವು ಸರ್ಕಾರದ ಜೊತೆಗೆ ಮಾತುಕತೆ ನಡೆಸಿ ನಿರ್ಧರಿಸುತ್ತೇವೆ' ಎಂದು ಪೂನಾವಾಲಾ ಮಾಹಿತಿ ನೀಡಿದ್ದಾರೆ.
ಸಂಪೂರ್ಣ ಸ್ವದೇಶಿ ವ್ಯಾಕ್ಸಿನ್ ಆಗಿರುವ CERVAVACಅನ್ನು ಕ್ಯಾನ್ಸರ್ ತಡೆಗಟ್ಟಲು ಬಳಸಲಾಗುತ್ತದೆ. ಅದಷ್ಟೇ ಅಲ್ಲದೇ ಇದು ಸ್ವದೇಶಿಯಾಗಿ ನಿರ್ಮಿಸಲ್ಪಟ್ಟ ಮೊದಲ HPV (ಹ್ಯೂಮನ್ ಪ್ಯಾಪಿಲ್ಲೋಮಾ ವೈರಸ್) ಆಗಿದೆ.