ನವದೆಹಲಿ: ‘ಕೋವಿಡ್ ಮತ್ತು ವ್ಯಾಕ್ಸೀನ್ಗಳಿಂದ ಜನ ಬೇಸತ್ತು ಹೋಗಿದ್ದಾರೆ’ ಎಂದು ಎಸ್ಐಐ (ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ) ಮುಖ್ಯಸ್ಥ ಆದರ್ ಪೂನಾವಾಲಾ ಇಂದು (ಅ.21) ಹೇಳಿದ್ದಾರೆ.
‘ಕಳೆದ ಡಿಸೆಂಬರ್ನಲ್ಲಿ ಲಭ್ಯವಿದ್ದ ಸುಮಾರು 100 ಮಿಲಿಯನ್ ಡೋಸ್ಗಳು ವಾಯ್ದೆ ಮೀರಿವೆ. 2021 ಡಿಸೆಂಬರ್ನಲ್ಲೇ ನಾವು ಕೋವಿಶೀಲ್ಡ್ ಲಸಿಕೆ ಉತ್ಪಾದನೆಯನ್ನು ನಿಲ್ಲಿಸಿದ್ದೇವೆ. ಈಗ ಕೋವೊವ್ಯಾಕ್ಸ್ ಅನ್ನು ಎರಡು ವಾರಗಳಲ್ಲಿ ಬಿಡುಗಡೆ ಮಾಡಲಾಗುವುದು. ಡಬ್ಯೂ.ಎಚ್.ಒ ಮತ್ತು ಭಾರತ ಸರ್ಕಾರ ಅನುಮತಿ ನೀಡಿದರೆ ಲಸಿಕೆ ಹಾಗೂ ಬೂಸ್ಟರ್ ಡೋಸ್ ನ ಮಿಶ್ರಣ ಮಾಡಲಾಗುವುದು’ ಎಂದರು.
‘ಈಗ ಜನರಲ್ಲಿ ಕೋವಿಡ್ ಬಗ್ಗೆ ನಿರ್ಲಕ್ಷ್ಯ ಹಾಗೂ ಆಲಸ್ಯವಿದೆ. ಬೂಸ್ಟರ್ ಡೋಸ್ಗಳಿಗೆ ಬೇಡಿಕೆ ಇಲ್ಲ. ನಿಜ ಹೇಳಬೇಕೆಂದರೆ ನಾನೂ ಕೋವಿಡ್ನಿಂದ ಬೇಸತ್ತು ಹೋಗಿದ್ದೇನೆ’ ಎಂದು ದೇಶಸಮಸತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)