More

    ಶಿಕ್ಷಣ ವ್ಯಾಪಾರವೇ- ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಸಂಸ್ಥೆಗಳೇ?: ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್​

    ನವದೆಹಲಿ: ಶಿಕ್ಷಣ ಸಂಸ್ಥೆ ಅಥವಾ ಯೂನಿವರ್ಸಿಟಿಗಳು ಗ್ರಾಹಕ ರಕ್ಷಣೆ ಕಾನೂನಿನ ವ್ಯಾಪ್ತಿಗೆ ಒಳಪಡುತ್ತವೆಯೇ? ಸೇವಾ ಲೋಪದೋಷಗಳಾದಾಗ ಅವುಗಳ ವಿರುದ್ಧ ಗ್ರಾಹಕ ರಕ್ಷಣೆ ಕಾನೂನಿನ ಪ್ರಕಾರ ಕೋರ್ಟ್​ ಮೆಟ್ಟಿಲೇರಬಹುದೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್​ ಒಪ್ಪಿಕೊಂಡಿದೆ.

    ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಇಂದು ಮಲ್ಹೋತ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡ ನ್ಯಾಯಪೀಠ ಈ ದಾವೆಯ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ. ತಮಿಳುನಾಡಿನ ಸೇಲಂನಲ್ಲಿರುವ ವಿನಾಯಕ ಮಿಷನ್​ ಯೂನಿವರ್ಸಿಟಿ ವಿರುದ್ಧ ಮೆಡಿಕಲ್ ಕೋರ್ಸ್​ಗೆ ಅಡ್ಮಿಷನ್ ಆಗಿರುವ ಮನು ಸೋಲಂಕಿ ಮತ್ತು ಇತರೆ ವಿದ್ಯಾರ್ಥಿಗಳು ಸಲ್ಲಿಸಿರುವ ಅಪೀಲನ್ನು ನ್ಯಾಯಪೀಠ ವಿಚಾರಣೆಗೆ ಅಂಗೀಕರಿಸಿದೆ.

    ಇದನ್ನೂ ಓದಿ: ಬಲವಂತದ ಮತಾಂತರದಿಂದ ಹಿಂದುಗಳನ್ನು ರಕ್ಷಿಸುವಲ್ಲಿ ಪಾಕ್​ ವಿಫಲ: ಅಲ್ಲಿಯದ್ದೇ ಸಂಸದೀಯ ಸಮಿತಿಯ ವರದಿ!

    ಶಿಕ್ಷಣ ಸಂಸ್ಥೆಗಳು ಅಥವಾ ಯೂನಿವರ್ಸಿಟಿಗಳು 1986 ಗ್ರಾಹಕ ರಕ್ಷಣೆ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತವೆಯೇ ಇಲ್ಲವೇ ಎಂಬ ಬಗ್ಗೆ ಹಲವು ದೃಷ್ಟಿಕೋನಗಳಿದ್ದು, ಅದನ್ನು ಇತ್ಯರ್ಥಗೊಳಿಸುವುದಕ್ಕಾಗಿ ಈ ದಾವೆಯ ವಿಚಾರಣೆ ನಡೆಸುವುದು ಅಗತ್ಯವಾಗಿದೆ ಎಂದು ನ್ಯಾಯಪೀಠ ಅಕ್ಟೋಬರ್ 15ರಂದು ಹೇಳಿದೆ. ಈ ವಿಚಾರವಾಗಿ ನ್ಯಾಷನಲ್​ ಕನ್ಸೂಮರ್ ಡಿಸ್ಪ್ಯೂಟ್ಸ್ ರೆಡ್ರೆಸ್ಸಲ್ ಕಮಿಷನ್​ ನೀಡಿರುವ ತೀರ್ಮಾನದ ವಿರುದ್ಧ ಆರು ವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ತಡೆಕೋರಿದ ಯೂನಿವರ್ಸಿಟಿಯ ಪರ ವಕೀಲ ಸೌಮ್ಯಜಿತ್​ಗೆ ನ್ಯಾಯಪೀಠ ಸೂಚಿಸಿದೆ.

    ಇದನ್ನೂ ಓದಿ: ವಾರದೊಳಗೆ ಶಿಕ್ಷಕರ, ಉಪನ್ಯಾಸಕರ ವರ್ಗಾವಣೆ ಕೂಡಲೇ ಆರಂಭಿಸುವಂತೆ ಸಿಎಂ ತಾಕೀತು

    ಮಹರ್ಷಿ ದಯಾನಂದ ಯೂನಿವರ್ಸಿಟಿ ಕೇಸ್​, ಪಿಟಿ ಕೋಶಿ ಕೇಸ್​ಗಳ ತೀರ್ಪುಗಳನ್ನು ಮುಂದಿಟ್ಟುಕೊಂಡು ವಿನಾಯಕ ಮಿಷನ್​ ಯೂನಿವರ್ಸಿಟಿ ಪರ ವಕೀಲರು ವಾದ ಮಂಡನೆಗೆ ಮುಂದಾಗಿದ್ದಾರೆ. ಶಿಕ್ಷಣವನ್ನು ಸರಕು ಮತ್ತು ಸೇವೆಯ ವ್ಯಾಪ್ತಿಯಲ್ಲಿ ಪರಿಗಣಿಸಲಾಗದು ಎಂಬುದು ಇವರ ವಾದ. ಆದರೆ, ಭಾರಿ ಶುಲ್ಕ ಪಡೆದುಕೊಂಡು ಸೇವೆಯನ್ನು ಒದಗಿಸುವ ಕಾರಣ ಶಿಕ್ಷಣ ಸಂಸ್ಥೆಗಳು ಕೂಡ ಗ್ರಾಹಕ ರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಉಚಿತವಾಗಿ ಏನನ್ನೂ ನೀಡಿದ ಕಾರಣ ಅವುಗಳು ಕೂಡ ಗ್ರಾಹಕ ಕಾಯ್ದೆ ವ್ಯಾಪ್ತಿಯೊಳಗೇ ಇವೆ ಎಂಬುದು ವಿದ್ಯಾರ್ಥಿಗಳ ಪರ ವಕೀಲರ ವಾದ.

    ಇದನ್ನೂ ಓದಿ: ಯೋಗಿ ರಾಜ್ಯದಲ್ಲಿ ಅಪರಾಧಿಗಳಿಗೆ ನಡುಕ- 125 ಎನ್​ಕೌಂಟರ್​, 14 ಗಲ್ಲು, 24 ಗಂಟೆಗಳಲ್ಲಿ 23 ಜೀವಾವಧಿ!

    ಸೋಲಂಕಿ ಮತ್ತು ಎಂಟು ಇತರೆ ವಿದ್ಯಾರ್ಥಿಗಳು ಮೆಡಿಕಲ್ ಕೋರ್ಸ್​ಗೆ ಸೇರಿದ್ದು, ಬಹಳ ನಷ್ಟ ಅನುಭವಿಸಿದ್ದಾರೆ. ಸಾಮಾಜಿಕವಾಗಿಯೂ ಅವಮಾನಗಳನ್ನು ಅನುಭವಿಸಿದ್ದಾರೆ. ಶೈಕ್ಷಣಿಕ ವರ್ಷ ನಷ್ಟ ಆಗಿದೆ. ಉದ್ಯೋಗದ ಅವಕಾಶಗಳು ಕೈಜಾರಿವೆ. ಮಾನಸಿಕ, ಶಾರೀರಿಕ ನೋವು, ಸಂಕಷ್ಟಗಳನ್ನು ಅನುಭವಿಸಿರುವ ಕಾರಣ ಪ್ರತಿಯೊಬ್ಬರಿಗೂ 1.4 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂಬ ಬೇಡಿಕೆಯೊಂದಿಗೆ ಕಾನೂನು ಹೋರಾಟ ಶುರುವಾಗಿದೆ. (ಏಜೆನ್ಸೀಸ್)

    ಮಹಾರಾಷ್ಟ್ರ ರಾಜಕಾರಣ: ಬಿಜೆಪಿಯಿಂದ ಹೊರಬಿದ್ದ ಏಕನಾಥ ಖಡ್ಸೆ; 23ರಂದು ಎನ್​ಸಿಪಿ ಸೇರ್ತಾರಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts