More

    ಬಲವಂತದ ಮತಾಂತರದಿಂದ ಹಿಂದುಗಳನ್ನು ರಕ್ಷಿಸುವಲ್ಲಿ ಪಾಕ್​ ವಿಫಲ: ಅಲ್ಲಿಯದ್ದೇ ಸಂಸದೀಯ ಸಮಿತಿಯ ವರದಿ!

    ಇಸ್ಲಮಾಬಾದ್​: ಬಲವಂತವಾಗಿ ಮತಾಂತರದಿಂದ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾಗಿದೆ, ತನ್ನ ಹೊಣೆಗಾರಿಕೆ ನಿಭಾಯಿಸುವಲ್ಲಿಯೂ ಅದು ಸೋತಿದೆ ಎಂದು ಪಾಕಿಸ್ತಾನದ ಸಂಸತ್​ ಸದಸ್ಯ ಅನ್ವರುಲ್​ ಹಕ್ ಕಾಕರ್ ನೇತೃತ್ವದ ಸಂಸದೀಯ ಸಮಿತಿ ವರದಿ ಹೇಳಿರುವುದಾಗಿ ಡಾನ್ ನ್ಯೂಸ್ ವರದಿ ಮಾಡಿದೆ.

    ಬಲವಂತದ ಮತಾಂತರ ನಡೆಯುತ್ತಿರೋದು ಇಲ್ಲಿ..

    ಸಂಘರ್​, ಘೋಟ್ಕಿ, ಸುಕ್ಕೂರ್​, ಖೈರ್​ಪುರ್​ ಮತ್ತು ಮಿರ್​ಪುರ್ಖಾಸ್​ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಲವಂತದ ಮತಾಂತರಗಳಾಗುತ್ತಿವೆ. ಬಲೂಚಿಸ್ತಾನ್​ ಮತ್ತು ಖೈಬರ್ ಪಖ್ತುನ್​ಖ್ವಾ ಗಳಲ್ಲಿ ಇಂಥ ಕೇಸ್​ ಕಡಿಮೆ ಪ್ರಮಾಣದಲ್ಲಿದ್ದು, ಪಂಜಾಬ್​ನಲ್ಲಿ ಕ್ರಿಶ್ಚಿಯನ್ನರ ಬಲವಂತದ ಮತಾಂತರ ಪ್ರಕರಣ ಪತ್ತೆಯಾಗಿದೆ.

    ಇತ್ತೀಚೆಗೆ ಸಮಿತಿ ಸದಸ್ಯರೊಂದಿಗೆ ಸಿಂಧ್ ಪ್ರಾಂತ್ಯದ ಹಲವು ಭಾಗಗಳಿಗೆ ಭೇಟಿ ನೀಡಿದ್ದೆವು. ಅಲ್ಲಿ ಹಿಂದು ಸಮಾಜದ ಯುವತಿಯರನ್ನು ಬಲವಂತವಾಗಿ ಮತಾಂತರಿಸಿದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಬಹುತೇಕ ಕೇಸ್​ಗಳಲ್ಲಿ ಮತಾಂತರದ ಹಿಂದೆ ಸ್ವ ಇಚ್ಛೆ ಕೆಲಸ ಮಾಡಿಲ್ಲ. ಬಲವಂತದ ಮತಾಂತರಕ್ಕೆ ಹಲವು ವ್ಯಾಖ್ಯಾನಗಳಿವೆ. ಇದು ಸಮಿತಿಯೊಳಗೆ ಬಹಳ ಚರ್ಚೆಗೊಳಗಾದ ವಿಷಯವೂ ಹೌದು ಎಂದು ಕಾಕರ್ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ‘ಭಾರತ್ ತೇರೆ ತುಕ್​ಡೇ ಹೋಂಗೆ’ ಸ್ಲೋಗನ್​ಗಿಲ್ಲ ಇನ್ನು ಅವಕಾಶ; ಸಿಎಂ ಯೋಗಿ

    ಉತ್ತಮ ಭವಿಷ್ಯ ಮತ್ತು ಬದುಕಿಗಾಗಿ ಮತಾಂತರವಾದರೂ ಅದನ್ನು ಬಲವಂತದ ಮತಾಂತರ ಎಂದೇ ಪರಿಗಣಿಸಲಾಗುತ್ತದೆ. ಆರ್ಥಿಕ ಕಾರಣಗಳನ್ನು ಶೋಷಣೆ ಎಂದು ಪರಿಗಣಿಸಬಹುದು. ಆದರೆ, ಇದು ಒಪ್ಪಿಗೆಯೊಂದಿಗೆ ನಡೆಯುವ ಮತಾಂತರವಾಗಿದ್ದು ಬಲವಂತ ಅಲ್ಲ ಎಂಬ ವ್ಯಾಖ್ಯಾನ ನೀಡಿದ ಕಾಕರ್​, ಒಪ್ಪಿಗೆ ಮತ್ತು ಶೋಷಣೆಯನ್ನು ಪ್ರತ್ಯೇಕಿಸುವ ತೆಳುವಾದ ಗೆರೆಯಷ್ಟೇ ಇದೆ ಎಂಬುದನ್ನು ನೆನಪಿಸಿದರು.

    ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಮುಗೀತಿದ್ದಂತೆ ಸಿಎ ಫೌಂಡೇಷನ್ ಕೋರ್ಸ್​ಗೆ ಪ್ರಾವಿಷನಲ್ ಅಡ್ಮಿಷನ್ ಪಡ್ಕೋಬಹುದು..

    ಆದಾಗ್ಯೂ, ಹಿಂದು ಸಮಾಜದಲ್ಲಿ ಯಾರೆಷ್ಟೇ ಲಿಬರಲ್ ಆಗಿದ್ದರೂ, ತಮ್ಮ ಮನೆ ಮಗಳನ್ನು ಇಚ್ಛೆಗೆ ವಿರುದ್ಧವಾಗಿ ಇನ್ನೊಂದು ಧರ್ಮದವರನ್ನು ಮದುವೆಯಾಗಲು ಪ್ರೋತ್ಸಾಹಿಸುತ್ತಾರೆ ಹೇಳಿ? ಅದು ಅತ್ಯಂತ ಕೆಟ್ಟ ಪರಿಸ್ಥಿತಿಯಾಗಿದ್ದು, ಕುಟುಂಬ ವರ್ಗ ನೋವು ಮತ್ತು ಅವಮಾನವನ್ನು ಹೊಂದಬೇಕಾಗುತ್ತದೆ. ಇದನ್ನೆಲ್ಲ ಪರಿಗಣಿಸಲಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಮುಂದಿಟ್ಟ ಕಾಕರ್​, ಧಾರ್ಮಿಕ ಅಲ್ಪಸಂಖ್ಯಾತ ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗೆ ರಕ್ಷಣೆಯನ್ನು ಒದಗಿಸಿದರೆ ಬಲವಂತದ ಮತಾಂತರ ಕಡಿಮೆಯಾದೀತು ಎಂದು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)

    ಲವ್​ ಜಿಹಾದ್​ ಪೈಶಾಚಿಕ ಮುಖ: ಹೈದರಾಬಾದ್​ನ ರೇನ್​ ಬಜಾರ್​ ಏರಿಯಾದಲ್ಲಿ ಯುವತಿಯೊಬ್ಬ ಶವ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts