More

    ಅವರೆಲ್ಲ ಇರೋದು ನಿನ್ನ ದೇಹ ನೋಡಲು ಮಾತ್ರ! ಸೀಮಾಗೆ ಗಂಡನ​ ಎಚ್ಚರಿಕೆ, ಸಚಿನ್​ ಕಣ್ಣು ಕೀಳುವುದಾಗಿ ಬೆದರಿಕೆ

    ಇಸ್ಲಮಾಬಾದ್​: ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳ ಜತೆಗೆ ಭಾರತಕ್ಕೆ ಬಂದು ಪಬ್​ಜಿ ಪ್ರಿಯಕರನನ್ನು ಮದುವೆಯಾದ ಸೀಮಾ ಹೈದರ್​ ಪ್ರಕರಣ ಇದೀಗ ಕೊರ್ಟ್​ ಮೆಟ್ಟಿಲೇರಿದೆ. ಸೀಮಾಳ ಮಾಜಿ ಪತಿ ಗುಲಾಮ್​ ಹೈದರ್​ ಕೋಪಗೊಂಡಿದ್ದು, ತನ್ನ ವಕೀಲ ಮೊಮಿನ್​ ಮಲಿಕ್​ ಮೂಲಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

    ಸೀಮಾ ಮತ್ತು ಆಕೆಯ ಪ್ರಿಯಕರ ಮತ್ತು ಹಾಲಿ ಗಂಡ ಸಚಿನ್​ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿರುವ ಮೊಮಿನ್​ ಮಲಿಕ್​, ಸಿಆರ್‌ಪಿಸಿಯ ಸೆಕ್ಷನ್ 156 (3) ರ ಅಡಿಯಲ್ಲಿ ತನಿಖೆಗೆ ಮನವಿ ಮಾಡಿದ್ದಾರೆ. ತನಿಖೆಗೆ ಅನುಮತಿ ನೀಡಲು ಮ್ಯಾಜಿಸ್ಟ್ರೇಟ್‌ಗೆ ಈ ಸೆಕ್ಷನ್​ ಅವಕಾಶ ನೀಡುತ್ತದೆ.

    ಸೀಮಾ ಮತ್ತು ಸಚಿನ್ ನೇಪಾಳದ ಕಠ್ಮಂಡುವಿನಲ್ಲಿ ವಿವಾಹವಾದರು ಎಂದು ಹೇಳಲಾಗಿದೆ. ಗುಲಾಂ ಹೈದರ್‌ಗೆ ವಿಚ್ಛೇದನ ನೀಡದೆ ಸೀಮಾ ಸಚಿನ್‌ನನ್ನು ವಿವಾಹವಾಗಿದ್ದಾರೆ. ಆದ್ದರಿಂದ ಅವರ ಮದುವೆ ಮಾನ್ಯವಾಗಿಲ್ಲ ಎಂದು ಗುಲಾಮ್​ ಹೈದರ್​ ಪರ ವಕೀಲ ಮೊಮಿನ್ ವಾದಿಸಿದ್ದಾರೆ. ಈ ಸಂಬಂಧ ಏಪ್ರಿಲ್ 18 ರೊಳಗೆ ವರದಿ ನೀಡುವಂತೆ ನೋಯ್ಡಾ ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿದೆ ಎಂದು ಮೊಮಿನ್​ ತಿಳಿಸಿದ್ದಾರೆ.

    ಇದೇ ಸಂದರ್ಭದಲ್ಲಿ ಸೀಮಾ ಮತ್ತು ಸಚಿನ್ ಮೇಲೆ ಗುಲಾಮ್ ಹೈದರ್ ತುಂಬಾ ಕೋಪಗೊಂಡಿದ್ದಾರೆ. ತನ್ನ ಮಕ್ಕಳಿಗೆ ಭಾರತ ಸುರಕ್ಷಿತವಲ್ಲ ಎಂದು ಭಾವಿಸಿರುವ ಹೈದರ್​, ತಮ್ಮ ಮಕ್ಕಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲು ಕೋರಿದ್ದಾರೆ.

    ನಿನ್ನ ದೇಹವನ್ನು ನೋಡಲು ಬಯಸುತ್ತಾರೆ
    ನೀನು ನೃತ್ಯ ಮಾಡುವುದರಿಂದ ಜನರು ನಿನ್ನನ್ನು ಬೆಂಬಲಿಸುತ್ತಾರೆ ಎಂದು ನೀನು ಭಾವಿಸಿರಬಹುದು ಆದರೆ, ಅವರು ನಿನ್ನ ದೇಹವನ್ನು ನೋಡಲು ಬಯಸುತ್ತಾರೆ ಹೊರತು ನಿನ್ನನ್ನು ಯಾರೊಬ್ಬರು ಗೌರವಿಸುವುದಿಲ್ಲ ಎಂದು ಹೈದರ್​ ಕಿಡಿಕಾರಿದ್ದಾರೆ. ಅಲ್ಲದೆ, ನೀನು ಇಂದು ನೃತ್ಯ ಮಾಡುವುದರಿಂದ ನಾಳೆ ನನ್ನ ಹೆಣ್ಣುಮಕ್ಕಳು ಕೂಡ ನೃತ್ಯ ಮಾಡುತ್ತಾರೆ ಎಂದು ನೀನು ಭಾವಿಸಿರಬಹುದು ಆದರೆ, ಅದು ನಿನ್ನ ತಪ್ಪು ಎಂದಿರುವ ಹೈದರ್​ ಸಚಿನ್‌ಗೆ ಬೆದರಿಕೆ ಸಹ ಹಾಕಿದ್ದಾರೆ. ನಾನು ಭಾರತೀಯ ನ್ಯಾಯಾಲಯಗಳನ್ನು ನಂಬುತ್ತೇನೆ ಮತ್ತು ಸಚಿನ್​ನನ್ನು ನ್ಯಾಯಾಲಯಕ್ಕೆ ಎಳೆದು ತರಲು ಹೆಚ್ಚು ಸಮಯವಿಲ್ಲ ಎಂದಿದ್ದಾರೆ.

    ಅವರ ತಂದೆ ಇನ್ನೂ ಬದುಕಿದ್ದಾರೆ
    ಸೀಮಾ ಮಕ್ಕಳು ನನ್ನ ಮಕ್ಕಳು ಎಂದು ಸಚಿನ್ ಹಲವು ಬಾರಿ ಹೇಳಿದ್ದು, ಈ ಸಂಬಂಧ ಪ್ರತಿಕ್ರಿಯೆ ನೀಡಿದ ಗುಲಾಮ್ ಹೈದರ್, ಅವರು ಸಚಿನ್ ಮಕ್ಕಳಲ್ಲ, ನನ್ನ ಮಕ್ಕಳು. ಅವರ ತಂದೆ ಇನ್ನೂ ಬದುಕಿದ್ದಾರೆ. ನಾನು ಸಚಿನ್​ನ ಕಣ್ಣುಗಳನ್ನು ಕಿತ್ತು ಹಾಕುತ್ತೇನೆ ಎಂದು ಹೈದರ್​ ಕೋಪದಲ್ಲಿ ಹೇಳಿದರು. ಅಲ್ಲದೆ, ತನ್ನ ಮಕ್ಕಳನ್ನು ಮರಳಿ ಕರೆತರಲು ಸಹಾಯ ಮಾಡುವಂತೆ ಭಾರತದ ಜನರನ್ನು ಕೇಳಿಕೊಂಡರು.

    ಸೀಮಾ ವಕೀಲರ ಪ್ರತಿಕ್ರಿಯೆ
    ಮೊಮಿನ್ ಸಲ್ಲಿಸಿರುವ ನ್ಯಾಯಾಲಯದ ಅರ್ಜಿಯು ಕೇವಲ ಗಮನ ಸೆಳೆಯಲು ಮಾತ್ರ ಎಂದು ಸೀಮಾ ಪರ ವಕೀಲ ಎಪಿ ಸಿಂಗ್ ಹೇಳಿದ್ದಾರೆ. ಸಿಆರ್‌ಪಿಸಿ ಅಡಿಯಲ್ಲಿ ಭಾರತದಲ್ಲಿ ಪ್ರಕರಣಗಳನ್ನು ದಾಖಲಿಸಲು ಪಾಕಿಸ್ತಾನಿ ನಾಗರಿಕರಿಗೆ ಅವಕಾಶವಿಲ್ಲ ಎಂದು ಹೇಳಿದರು. ಸೀಮಾ ಹಿಂದುತ್ವವನ್ನು ಒಪ್ಪಿಕೊಂಡು ಸಚಿನ್ ಅವರನ್ನು ಮದುವೆಯಾಗಿದ್ದಾರೆ ಎಂದು ತಿಳಿಸಿದರು. (ಏಜೆನ್ಸೀಸ್)

    ಗಂಟಲಲ್ಲಿ ಮೀನು ಸಿಲುಕಿಕೊಂಡು ವ್ಯಕ್ತಿ ದುರಂತ ಸಾವು: ಮೋಜಿಗಾಗಿ ಮಾಡಿದ್ದು ಪ್ರಾಣವನ್ನೇ ಕಸಿಯಿತು

    ಹಾರ್ದಿಕ್​ ಪರ ಬ್ಯಾಟ್​ ಬೀಸಿದ​ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಫ್ಯಾನ್ಸ್ ಆಕ್ರೋಶಕ್ಕೆ ಹೆದರಿ ಯೂಟರ್ನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts