More

    ಹಾರ್ದಿಕ್​ ಪರ ಬ್ಯಾಟ್​ ಬೀಸಿದ​ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಫ್ಯಾನ್ಸ್ ಆಕ್ರೋಶಕ್ಕೆ ಹೆದರಿ ಯೂಟರ್ನ್​!

    ಮುಂಬೈ: ಮುಂಬೈ ಇಂಡಿಯನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಕುರಿತು ಅಪಹಾಸ್ಯ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ವರದಿಯನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ನಿರಾಕರಿಸಿದೆ.

    ಐಪಿಎಲ್​ ನಾಯಕತ್ವ ಬದಲಾವಣೆ ಆದಾಗಿನಿಂದ ಮುಂಬೈ ತಂಡದಲ್ಲಿ ಎಲ್ಲವೂ ಸರಿಯಿಲ್ಲ. ರೋಹಿತ್​ರಿಂದ ನಾಯಕತ್ವ ಕಸಿದು ಹಾರ್ದಿಕ್​ ಪಾಂಡ್ಯಗೆ ನೀಡಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಹಾರ್ದಿಕ್​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರಗಳು ನಡೆಯುತ್ತಿವೆ. ಗುಜರಾತ್​ ಟೈಟಾನ್​ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕೆ ನಾಯಿ ನುಗ್ಗಿದಾಗ ಕ್ರೀಡಾಂಗಣದಲ್ಲಿ ನೆರೆದಿದ್ದ ಬಹುತೇಕರು ಹಾರ್ದಿಕ್​ ಹೆಸರನ್ನು ಕೂಗುವ ಮೂಲಕ ಅವಮಾನ ಮಾಡಿದ್ದರು. ಅಲ್ಲದೆ, ಎಲ್​ಇಡಿ ಪರದೆ ಮೇಲೆ ಹಾರ್ದಿಕ್​ ಬಂದಾಗಲೆಲ್ಲ ಬೂ ಎಂದು ಕೂಗುವ ಮೂಲಕ ಅಪಹಾಸ್ಯ ಮಾಡುತ್ತಿದ್ದರು. ಸನ್​​ ರೈಸರ್ಸ್​ ಹೈದರಾಬಾದ್​ ಪಂದ್ಯದಲ್ಲೂ ಇದು ಮರುಕಳಿಸಿತ್ತು. ಇದನೆಲ್ಲ ರೋಹಿತ್​ ಅಭಿಮಾನಿಗಳು ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.

    ಇನ್ನು ಈಗಾಗಲೇ ಮುಂಬೈ ತಂಡದಲ್ಲಿ ರೋಹಿತ್​ ಮತ್ತು ಹಾರ್ದಿಕ್​ ಎಂಬ ಎರಡು ಬಣ ಸೃಷ್ಟಿಯಾಗಿದೆ ಎಂದು ಕೇಳಿಬರುತ್ತಿದೆ. ಹಾರ್ದಿಕ್​ ಪಾಂಡ್ಯ ಸಾಕಷ್ಟು ಟೀಕೆಗಳಿಗೆ ಗುರಿಯಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್​ 1ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ನಡೆಯುವ ಪಂದ್ಯದಲ್ಲಿ ಹಾರ್ದಿಕ್​ರನ್ನು ಅಪಹಾಸ್ಯ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ವರದಿಯಾಗಿತ್ತು. ಇಂಥದ್ದೊಂದು ನಿರ್ಧಾರವನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ತೆಗೆದುಕೊಂಡಿದೆ ಎನ್ನಲಾಗಿತ್ತು.

    ಎಂಸಿಎ ಭದ್ರತೆಯನ್ನು ಹೆಚ್ಚಿಸಲಿದೆ ಮತ್ತು ಕ್ರೀಡಾಂಗಣದಲ್ಲಿ ಪಂದ್ಯದುದ್ದಕ್ಕೂ ಪ್ರೇಕ್ಷಕರ ಮೇಲೆ ನಿಗಾ ಇಡಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಹಾರ್ದಿಕ್ ಪಾಂಡ್ಯ ವಿರುದ್ಧ ಯಾರಾದರೂ ಬೊಬ್ಬೆ ಹೊಡೆಯುವುದು ಅಥವಾ ಗೇಲಿ ಮಾಡುವುದು ಕಂಡುಬಂದರೆ ಅವರನ್ನು ಕ್ರೀಡಾಂಗಣದಿಂದ ಹೊರಹಾಕಲಾಗುವುದು ಎಂದು ವರದಿಯಾಗಿತ್ತು. ಈ ಬಗ್ಗೆ ಎಲ್ಲೆಡೆ ಭಾರಿ ಟೀಕೆಯು ವ್ಯಕ್ತವಾಗಿತ್ತು.

    ಇದೀಗ ಈ ವರದಿಯ ಬಗ್ಗೆ ಮುಂಬೈ ಕ್ರಿಕೆಟ್​ ಅಸೋಸಿಯೇಷನ್ ಸ್ಪಷ್ಟನೆ ನೀಡಿದ್ದು, ಇದೊಂದು ತಪ್ಪಾದ ಮತ್ತು ಆಧಾರರಹಿತ ವದಂತಿಗಳು ಎಂದು ಹೇಳಿದೆ. ಎಂಸಿಎ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಚಿಸಿರುವ ಮಾರ್ಗಸೂಚಿಗಳನ್ನು ಮಾತ್ರ ಅನುಸರಿಸಲಿದೆ ಎಂದು ಹೇಳಿದೆ. ಅಲ್ಲದೆ, ರೋಹಿತ್​ರನ್ನು ಬೆಂಬಲಿಸುವ ಮತ್ತು ಹಾರ್ದಿಕ್​ರನ್ನು ಅಪಹಾಸ್ಯ ಮಾಡುವವರನ್ನು ಕ್ರೀಡಾಂಗಣದಿಂದ ಹೊರಗಡೆ ಹಾಕಲು ಸೂಚನೆ ನೀಡಲಾಗಿದೆ ಎಂಬುದು ಆಧಾರರಹಿತ ವದಂತಿ ಎಂದು ಎಂಸಿಎ ತಿಳಿಸಿದೆ. (ಏಜೆನ್ಸೀಸ್​)

    ಇನ್ನು ಮುಂದೆ ಹಾರ್ದಿಕ್​ ಪಾಂಡ್ಯರನ್ನು ಟೀಕಿಸುವಂತಿಲ್ಲ; ಇಲ್ಲವಾದಲ್ಲಿ ಜಾರಿಯಾಗುತ್ತೆ ಕಠಿಣ ಕ್ರಮ

    ಧೋನಿ ನಾಯಕತ್ವದಡಿಯಲ್ಲಿ ದಿಗ್ಗಜರೇ ಆಡಿರಲಿಲ್ಲವೇ? ಹಾರ್ದಿಕ್ ಪಾಂಡ್ಯ ಪರ ಅಶ್ವಿನ್​ ಬ್ಯಾಟಿಂಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts