More

    ಎಸ್ಸೆಸ್ಸೆಲ್ಸಿ ಮುಗೀತಿದ್ದಂತೆ ಸಿಎ ಫೌಂಡೇಷನ್ ಕೋರ್ಸ್​ಗೆ ಪ್ರಾವಿಷನಲ್ ಅಡ್ಮಿಷನ್ ಪಡ್ಕೋಬಹುದು..

    ನವದೆಹಲಿ: ಹತ್ತನೆ ತರಗತಿ ಪರೀಕ್ಷೆ ಬರೆದ ನಂತರದಲ್ಲಿ ಆಸಕ್ತರು ಚಾರ್ಟರ್ಡ್ ಅಕೌಂಟೆಂಟ್​ (ಸಿಎ) ಫೌಂಡೇಷನ್ ಕೋರ್ಸ್​ಗೆ ಪ್ರಾವಿಷನಲ್ ಅಡ್ಮಿಷನ್ ಪಡೆಯುವುದಕ್ಕೆ ಈಗ ಅವಕಾಶ ಒದಗಿಸಲಾಗಿದೆ ಎಂದು ಇನ್​ಸ್ಟಿಟ್ಯೂಟ್ ಆಫ್​ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ (ಐಸಿಎಐ) ತಿಳಿಸಿದೆ.

    ಹೊಸ ನಿಯಮ ಜಾರಿಗೊಳಿಸುವುದಕ್ಕಾಗಿ, ಚಾರ್ಟರ್ಡ್ ಅಕೌಂಟಂಟ್ಸ್​ ರೆಗುಲೇಷನ್ಸ್ 1988ರ 25 ಇ, 25ಎಫ್​ ಮತ್ತು 28 ಎಫ್​ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಇದಕ್ಕೆ ಸರ್ಕಾರವೂ ಅನುಮೋದನೆ ನೀಡಿದೆ. ಹನ್ನೆರಡನೇ ತರಗತಿ ಪರೀಕ್ಷೆ ಮುಗಿದ ಬಳಿಕ ನಾಲ್ಕು ತಿಂಗಳ ನಂತರದಲ್ಲಿ ಈ ಎಕ್ಸಾಂ ನಡೆಯಲಿದ್ದು, ಆರು ತಿಂಗಳು ಮೊದಲೇ ಇವರ ಕೋರ್ಸ್ ಆರಂಭವಾಗುವ ಕಾರಣ, ಆರು ತಿಂಗಳು ಮೊದಲೇ ಇವರು ಸಿಎಗಳಾಗಿ ಹೊರಬರುತ್ತಾರೆ.
    ಅತುಲ್ ಕುಮಾರ್ ಗುಪ್ತಾ, ಐಸಿಎಐ ಅಧ್ಯಕ್ಷ

    ಹೊಸ ನಿಯಮಾವಳಿ ಪ್ರಕಾರ ಈ ಅವಕಾಶ ಒದಗಿಸಲಾಗಿದೆ. ಆದಾಗ್ಯೂ, 12ನೇ ತರಗತಿ ಪರೀಕ್ಷೆ ಉತ್ತೀರ್ಣರಾದ ಬಳಿಕ ಪ್ರಾವಿಷನಲ್ ಅಡ್ಮಿಷನ್​ ಅನ್ನು ರೆಗುಲರೈಸ್ ಮಾಡಬಹುದು. ಈಗಿನ ಕೋರ್ಸ್ ಅವಧಿಗೂ ಆರು ತಿಂಗಳು ಮೊದಲೇ ವಿದ್ಯಾರ್ಥಿಗಳು ಚಾರ್ಟರ್ಡ್ ಅಕೌಂಟಂಟ್ (ಸಿಎ) ಅನಿಸಿಕೊಳ್ಳಬಹುದು.

    ಇದನ್ನೂ ಓದಿ: ನ.6ರಿಂದ 8ರವರೆಗೆ ಜೂನಿಯರ್ ಅಥ್ಲೆಟಿಕ್ ಮೀಟ್ : ಅಥ್ಲೆಟಿಕ್ ಅಸೋಸಿಯೇಷನ್ ಆರ್ಥಿಕ ನಿರ್ದೇಶಕ ಮಾಹಿತಿ

    ವಿದ್ಯಾರ್ಥಿಗಳು ಹನ್ನೊಂದು ಮತ್ತು ಹನ್ನೆರಡನೇ ತರಗತಿ ಓದುತ್ತಿರುವಾಗಲೇ ಫೌಂಡೇಷನ್ ಕೋರ್ಸ್​ಗೆ ಸಿದ್ಧತೆ ನಡೆಸುವುದಕ್ಕೆ ಈ ಅವಕಾಶ ಸಹಕಾರಿಯಾಗುತ್ತದೆ. ಪ್ರಾವಿಷನಲ್ ಅಡ್ಮಿಷನ್ ಮಾಡಿಸಿಕೊಂಡ ಬಳಿಕ ಕೋರ್ಸ್ ಮಾಡಲು ಸಿದ್ಧರಾಗಬೇಕಾದ ಗಾಂಭೀರ್ಯತೆ ಅವರಲ್ಲಿ ಕಾಣುತ್ತದೆ. ಅಷ್ಟೇ ಅಲ್ಲ, ಅವರೂ ಅಪ್​ ಟು ಡೇಟ್ ಆಗಿರುತ್ತಾರೆ.

    ಇದನ್ನೂ ಓದಿ: ಲವ್​ ಜಿಹಾದ್​ ಪೈಶಾಚಿಕ ಮುಖ: ಹೈದರಾಬಾದ್​ನ ರೇನ್​ ಬಜಾರ್​ ಏರಿಯಾದಲ್ಲಿ ಯುವತಿಯೊಬ್ಬ ಶವ ಪತ್ತೆ

    ಐಸಿಎಐ ಕೂಡ ಉಚಿತ ಆನ್​ಲೈನ್ ತರಗತಿಯನ್ನು ಒದಗಿಸಲಿದ್ದು, ಅಡ್ಮಿಷನ್ ಮಾಡಿಸಿಕೊಂಡವರು ಯಾವಾಗ ಬೇಕಾದರೂ, ಎಲ್ಲಿಂದ ಬೇಕಾದರೂ ಅದಕ್ಕೆ ಲಾಗಿನ್​ ಆಗಿ ಪಡೆದುಕೊಳ್ಳಬಹುದು. ಹನ್ನರಡನೇ ತರಗತಿ ಪರೀಕ್ಷೆಗೆ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಹಾಜರಾದ ಬಳಿಕ, ಫೌಂಡೇಷನ್ ಕೋರ್ಸ್​ ಎಕ್ಸಾಂಗೆ ಮೇ ಅಥವಾ ಜೂನ್​ನಲ್ಲಿ ಹಾಜರಾಗಬಹುದು. (ಏಜೆನ್ಸೀಸ್)

    ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಕ್ಷಣಗಣನೆ..: ಹೆಚ್ಚಿದ ನಿರೀಕ್ಷೆ, ಕುತೂಹಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts