More

    ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೆ ಕ್ಷಣಗಣನೆ..: ಹೆಚ್ಚಿದ ನಿರೀಕ್ಷೆ, ಕುತೂಹಲ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಸಂಜೆ 6 ಗಂಟೆಗೆ ಮಾತನಾಡುವುದಾಗಿ ಬೆಳಗ್ಗೆಯೇ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಮಹತ್ವದ ಘೋಷಣೆಯ ನಿರೀಕ್ಷೆ ಗರಿಗೆದರಿದ್ದು, ಅವರ ಭಾಷಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲರೂ ಈ ಬಗ್ಗೆ ಕುತೂಹಲಭರಿತರಾಗಿದ್ದಾರೆ.

    ಕೋವಿಡ್​ 19 ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಅನೇಕ ಸಲ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಲಾಕ್​ಡೌನ್ ಘೋಷಣೆ ಮತ್ತು ಇತರೆ ಕ್ರಮಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಅದಾಗಿ ಲಾಕ್​ಡೌನ್ ನಿಲ್ಲಿಸಿ, ಅನ್​ಲಾಕ್ ಪ್ರಕ್ರಿಯೆ ಶುರುಮಾಡುವ ಮುನ್ನವೂ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಅವರ ಇಂದಿನ ಭಾಷಣ ಕೋವಿಡ್ 19 ಸಂಕಷ್ಟದ ಅವಧಿಯ 7 ಭಾಷಣವಾಗಿದೆ.

    ಇದನ್ನೂ ಓದಿ: ಅಣ್ಣನ ಮಗುವಿಗೆ ಧ್ರುವ ಸರ್ಜಾ ಕಡೆಯಿಂದ 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲು ಗಿಫ್ಟ್!

    ಟಿವಿ ಭಾಷಣದಲ್ಲಿ ಅವರು ಅನೇಕ ಮಹತ್ವದ ಘೋಷಣೆಗಳನ್ನು ಘೋಷಿಸಿರುವುದು ಇದುವರೆಗಿನ ವಾಡಿಕೆ. ಜೂನ್ 30ರ ಟಿವಿ ಭಾಷಣದಲ್ಲಿ ಅವರು ಪ್ರಧಾನಿ ಮಂತ್ರಿ ಗರೀಬ್ ಕಲ್ಯಅಣ್ ಅನ್ನ ಯೋಜನೆಯ ಅವಧಿ ವಿಸ್ತರಣೆಯನ್ನು ಘೋಷಿಸಿದ್ದರು. ಇದು 80 ಕೋಟಿಗೂ ಅಧಿಕ ಬಡವರಿಗೆ ಉಚಿತ ರೇಷನ್ ಒದಗಿಸುವ ಯೋಜನೆ. ಈ ಯೋಜನೆ ನವೆಂಬರ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. (ಏಜೆನ್ಸೀಸ್)

    ಇಂದು ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ಭಾಷಣ: ಟ್ವೀಟ್​ ಮೂಲಕ ಸರ್ಪ್ರೈಸ್​..!

    ಲವ್​ ಜಿಹಾದ್​ ಪೈಶಾಚಿಕ ಮುಖ: ಹೈದರಾಬಾದ್​ನ ರೇನ್​ ಬಜಾರ್​ ಏರಿಯಾದಲ್ಲಿ ಯುವತಿಯೊಬ್ಬ ಶವ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts