ಲವ್​ ಜಿಹಾದ್​ ಪೈಶಾಚಿಕ ಮುಖ: ಹೈದರಾಬಾದ್​ನ ರೇನ್​ ಬಜಾರ್​ ಏರಿಯಾದಲ್ಲಿ ಯುವತಿಯೊಬ್ಬ ಶವ ಪತ್ತೆ

murder1
Published on

ಹೈದರಾಬಾದ್​: ಹಳೇ ಹೈದರಾಬಾದ್​ ನಗರ ಪ್ರದೇಶದ ರೇನ್ ಬಜಾರ್ ವ್ಯಾಪ್ತಿಯ ಹೋಟೆಲ್​ ಒಂದ ಸಮೀಪ 24 ವರ್ಷದ ಯುವತಿಯ ಶವ ಪತ್ತೆಯಾಗಿದೆ. ಇದರೊಂದಿಗೆ ಲವ್​ ಜಿಹಾದ್​ನ ಪೈಶಾಚಿಕ ಮುಖ ಅನಾವರಣಗೊಂಡಿದೆ.

ಪೊಲೀಸ್ ಮಾಹಿತಿ ಪ್ರಕಾರ, ಮೃತಳನ್ನು ಸಂಗಾರೆಡ್ಡಿ ಜಿಲ್ಲೆಯ ನಾರಾಯಣ ಖೇಡ್​ನ ನಾಗಲಗಿಡ್ಡ ಮಂಡಲದ ಕರಂಗುತ್ತಿಯ ರಾಜಕುಮಾರ್ ಎಂಬುವವರ ಪುತ್ರಿ ಎಂದು ಗುರುತಿಸಲಾಗಿದೆ. ಈಕೆ ಕೆಲವು ವರ್ಷಗಳ ಹಿಂದೆ ಹೈದರಾಬಾದ್​ಗೆ ಆಗಮಿಸಿದ್ದು, ಆಸಿಫ್​ ನಗರದ ದತ್ತಾತ್ರೇಯ ನಗರದಲ್ಲಿ ವಾಸವಿದ್ದಳು. ಮಹಾತ್ಮ ಗಾಂಧಿ ಕಾನೂನು ಕಾಲೇಜಿನಲ್ಲಿ ಎಲ್​ಎಲ್​ಬಿ ವ್ಯಾಸಂಗ ಮಾಡುತ್ತಿದ್ದಳು. ಪೀಪಲ್​​'ಸ್ ಫಾರ್ ಅನಿಮಲ್ ಸೊಸೈಟಿ ಎಂಬ ಎನ್​​ಜಿಒ ಒಂದರ ಸಕ್ರಿಯ ಕಾರ್ಯಕರ್ತೆ ಆಗಿದ್ದಳು.

ಅಲ್ಲಿ ಆಕೆಗೆ ಸೈಯದ್ ಮುಸ್ತಫಾ ಎಂಬಾತನ ಪರಿಚಯವಾಗಿದೆ. ಆತ ಕೂಡ ಅದೇ ಎನ್​ಜಿಒದಲ್ಲಿ ಕಾರ್ಯಕರ್ತ. ಇಬ್ಬರ ನಡುವಿನ ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗಿತ್ತು. ಬಳಿಕ ಸಂಬಂಧಕ್ಕೆ ಎಡೆಮಾಡಿಕೊಟ್ಟಿತ್ತು. ಅದರಂತೆ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದರು. ಇಷ್ಟಾದ ಬಳಿಕ ಆದಾಗ್ಯೂ, ಮುಸ್ತಫಾ ಈಕೆಯಿಂದ ತಲೆಮರೆಸಿಕೊಂಡು ತಿರುಗಾಡಲು ಶುರುಮಾಡಿದ. ಈಕೆಯ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಇದರಿಂದ ನೊಂದ ಈಕೆ ಮುಸ್ತಫಾ ಮನೆಗೆ ಹೋಗಲು ನಿರ್ಧರಿಸಿದ್ದಳು.

ಅದರಂತೆ, ಮುಸ್ತಫಾ ಮನೆಗೆ ಹೋದಾಗ ಅಲ್ಲಿ ಆತನ ಕುಟುಂಬದವರೊಂದಿಗೆ ವಾಗ್ವಾದ ಶುರುವಾಗಿದೆ. ಶುಕ್ರವಾರ ಸಂಜೆ ಇದು ನಡೆದಿದ್ದು, ಮುಸ್ತಫಾ ಸಹೋದರ ಜಮೀಲ್​ ಜತೆಗಿನ ಜಗಳ ಬೆಳಗಿನ ಜಾವ 4 ಗಂಟೆ ತನಕ ಮುಂದುವರಿದಿತ್ತು. ನಂತರ ಮುಸ್ತಫಾ ಈಕೆಯನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದ್ದು, ಮನೆಗೆ ತಲುಪಿಸುವುದಾಗಿ ತಿಳಿಸಿದ್ದ. ಕೊನೆಗೆ ಮುಸ್ತಫಾ ಮತ್ತು ಜಮೀಲ್ ಕೋಪದಿಂದ ಯುವತಿಯನ್ನು ಇರಿದು ಹತ್ಯೆ ಮಾಡಿ ರೇನ್ ಬಜಾರ್​ನ ಹೋಟೆಲ್​ ಸಮೀಪ ಈಕೆಯ ಶವವನ್ನು ಎಸೆದು ಹೋಗಿದ್ದಾರೆ ಎಂಬ ಅಂಶ ತನಿಖೆಯ ವೇಳೆ ಬಹಿರಂಗವಾಗಿದೆ.

ಈ ಸಂಬಂಧ ಹತ್ಯೆ ಮತ್ತು ಎಸ್​ಸಿ ಎಸ್​ಟಿ ಕಾಯ್ದೆ ಪ್ರಕಾರ ಪ್ರಕಣ ದಾಖಲಿಸಿಕೊಂಡಿರುವ ಪೊಲೀಸರು, ಶವವನ್ನು ಪೋಸ್ಟ್​ ಮಾರ್ಟಂಗಾಗಿ ಒಸ್ಮಾನಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net