

ನವದೆಹಲಿ: ಇಂದು (ಮಂಗಳವಾರ) ಸಂಜೆ 6 ಗಂಟೆಗೆ ದೇಶದ ಜನತೆಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.
ಈ ಬಗ್ಗೆ ಕೆಲವೇ ಕ್ಷಣಗಳ ಹಿಂದೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸಂಜೆ ಆರು ಗಂಟೆಗೆ ದೇಶದ ಜನತೆಯ ಬಳಿ ಸಂದೇಶವೊಂದನ್ನು ಹಂಚಿಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ.
ಪ್ರಧಾನಿ ಟ್ವೀಟ್ ತೀವ್ರ ಕುತೂಹಲ ಮೂಡಿಸಿದ್ದು, ಯಾವ ವಿಷಯವನ್ನು ಹಂಚಿಕೊಳ್ಳಲಿದ್ದಾರೆ ಎಂಬ ಚರ್ಚೆ ಜನರಲ್ಲಿ ಶುರುವಾಗಿದೆ. ಕರೊನಾ ಲಸಿಕೆ ಕುರಿತು ಶುಭ ಸುದ್ದಿ ನೀಡಲಿದ್ದರಾ? ಅಥವಾ ಯಾವ ಸಿಹಿ ಸುದ್ದಿ ನೀಡಲಿದ್ದಾರೆ ಎಂಬ ಚರ್ಚೆ ಆರಂಭವಾಗಿದ್ದು, ಜನರ ಕುತೂಹಲಕ್ಕೆ ಸಂಜೆ 6ರ ಬಳಿಕ ಉತ್ತರ ಸಿಗಲಿದೆ. (ಏಜೆನ್ಸೀಸ್)