More

    ವಿಶೇಷ ತರಗತಿಗಳಿಗೆ ವಿದ್ಯಾರ್ಥಿಗಳ ನಿರಾಸಕ್ತಿ, ಮೊದಲ ದಿನ ಶೇ.25ರಷ್ಟು ಹಾಜರಾತಿ

    ಕೊಪ್ಪಳ: ಎಸ್ಸೆಸ್ಸೆಲ್ಸಿ ಲಿತಾಂಶ ಈ ಬಾರಿ ಗಣನೀಯವಾಗಿ ಕುಸಿದಿದೆ. ಮೂರು ಪರೀೆ ಬರೆಯಲು ಅವಕಾಶ ನೀಡಿರುವ ಶಿಕ್ಷಣ ಇಲಾಖೆ ಅನುತ್ತೀರ್ಣರಾದ ಹಾಗೂ ಕಡಿಮೆ ಅಂಕ ಗಳಿಸಿದವರಿಗೆ ವಿಶೇಷ ತರಗತಿ ಸೌಲಭ್ಯ ಕಲ್ಪಿಸಿದೆ. ಬುಧವಾರ ತರಗತಿ ಆರಂಭವಾಗಿದ್ದು, ವಿದ್ಯಾರ್ಥಿಗಳು ಅಷ್ಟಾಗಿ ಆಸಕ್ತಿ ತೋರಿಸಿಲ್ಲ.

    ಈ ವರ್ಷ 11,129 ಬಾಲಕ, 11,584 ಬಾಲಕಿಯರು ಸೇರಿ 22,713 ವಿದ್ಯಾರ್ಥಿಗಳು ಪರೀೆ ಬರೆದಿದ್ದಾರೆ. ಇವರಲ್ಲಿ 6165 ಬಾಲಕ, 8374 ಬಾಲಕಿಯರು ಒಳಗೊಂಡು 14,539 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.64.01ರಷ್ಟು ಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 16 ಸ್ಥಾನ ಕುಸಿತ ಕಂಡಿದೆ. ಶೇ.20ರಷ್ಟು ಲಿತಾಂಶ ಕುಸಿದಿದೆ. ಆದರೆ, ಶಿಕ್ಷಣ ಇಲಾಖೆ ಈ ಬಾರಿ ಮೂರು ಪರೀೆಗಳ ಮಾದರಿ ಪರಿಚಯಿಸಿದೆ. ಮೂರು ವಾರ್ಷಿಕ ಪರೀೆಗೆ ಸಮನಾಗಿದ್ದು, ವಿದ್ಯಾರ್ಥಿಗಳು ಮೂರಕ್ಕೂ ಹಾಜರಾಗಲು ಅವಕಾಶ ಕಲ್ಪಿಸಿದೆ.

    ಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಮೇ 15ರಿಂದ ಜೂನ್​5ವರೆಗೆ ವಿಶೇಷ ತರಗತಿಗಳನ್ನು ನಡೆಸಲು ಇಲಾಖೆ ಮುಂದಾಗಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲೆಗೆ ಬರುವಂತೆ ಸೂಚಿಸಲಾಗಿದೆ. ಶಿಕ್ಷಕರು ಹಾಜರಾಗಿದ್ದು, ಮಕ್ಕಳಿಗೆ ಪಾಠ ಮಾಡಿದ್ದಾರೆ. ಜೂನ್​ 7ರಿಂದ ಪರೀೆಗಳು ಆರಂಭವಾಗಲಿವೆ. ಪರೀೆಯಲ್ಲಿ ಅನುತ್ತೀರ್ಣರಾದವರು ಹಾಗೂ ಶೇ. 60ಕ್ಕಿಂತ ಕಡಿಮೆ ಅಂಕ ಗಳಿಸಿದವರಿಗೆ ಪರೀೆ ಬರೆಯಲು ಅವಕಾಶವಿದೆ. ಜಿಲ್ಲಾದ್ಯಂತ 8,174 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇವರೆಲ್ಲ ಕಡ್ಡಾಯವಾಗಿ ಪರೀೆ ಬರೆಯಬೇಕು. ಶೇ.60ಕ್ಕಿಂತ ಕಡಿಮೆ ಅಂಕ ಪಡೆದವು ಇಚ್ಛಿಸಿದಲ್ಲಿ ಮತ್ತೊಮ್ಮೆ ಪರೀೆ ಬರೆಯಬಹುದು.

    ಮೂರು ಪರೀೆ ಬರೆದರೂ ವಿದ್ಯಾರ್ಥಿಗಳು ಬಯಸಿದ ಪರೀಾ ಲಿತಾಂಶ ಉಳಿಸಿಕೊಳ್ಳಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಬುಧವಾರದಿಂದ ವಿಶೇಷ ತರಗತಿಗಳನ್ನು ಆರಂಭಿಸಿದ್ದು, ಮೊದಲ ದಿನವೇ ವಿದ್ಯಾರ್ಥಿಗಳು ನಿರಾಸಕ್ತಿ ತೋರಿದ್ದಾರೆ. ಅನುತ್ತೀರ್ಣರಾದವರ ಪೈಕಿ ಕೇವಲ ಶೇ.25ರಷ್ಟು ಮಕ್ಕಳು ಮಾತ್ರ ತಗರತಿಗಳಿಗೆ ಹಾಜರಾಗಿದ್ದಾರೆ. ಹೀಗಾದಲ್ಲಿ ಲಿತಾಂಶ ಸುಧಾರಣೆ ಕಷ್ಟಸಾಧ್ಯವಾಗಲಿದೆ. ಮೊದಲ ದಿನವಾಗಿದ್ದು, ಮಕ್ಕಳು ಅಷ್ಟಾಗಿ ಬಂದಿಲ್ಲ. ಎರಡನೇ ದಿನದಿಂದ ಬರುವ ನಿರೀೆ ಇದೆ ಎನ್ನುತ್ತಾರೆ ಶಿಕ್ಷಕರು. ವಿಶೇಷ ತರತಿಗಳ ಬಗ್ಗೆಯೂ ಹೆಚ್ಚಿನ ಮಾಹಿತಿ ನೀಡುವ ಅವಶ್ಯವಿದೆ ಎನ್ನುತ್ತಾರೆ ಪಾಲಕರು.

    ವಿಶೇಷ ತರಗತಿ ಆರಂಭ
    ಕೊಪ್ಪಳ: ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಅನುತ್ತೀರ್ಣಗೊಂಡ ಹಾಗೂ ಶೇ.60ಕ್ಕಿಂತ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಆರಂಭಗೊಂಡಿವೆ. ಜೂನ್​ 7 ರಿಂದ 14 ವರೆಗೆ ಎಸ್ಸೆಸ್ಸೆಲ್ಸಿ ಪರೀೆ 2 ನಡೆಯಲಿದೆ. ಮೇ 16 ರಿಂದ ಆಯಾ ಶಾಲೆಗಳಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲ ಪ್ರೌಢಶಾಲೆಗಳಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಮೇ 15 ರಿಂದ ವಿಶೇಷ ತರಗತಿಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಡಿಡಿಪಿಐ ಮನವಿ ಮಾಡಿದ್ದಾರೆ.

    ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಅನುತ್ತೀರ್ಣರಾದವರಿಗೆ ಮೇ 15ರಿಂದ ವಿಶೇಷ ತರಗತಿಗಳನ್ನು ಆರಂಭಿಸಲಾಗಿದೆ. ಒಟ್ಟು 8174 ವಿದ್ಯಾರ್ಥಿಗಳು ನಪಾಸಾಗಿದ್ದಾರೆ. ಮೊದಲ ದಿನ ಶೇ.25ರಷ್ಟು ಮಕ್ಕಳು ಮಾತ್ರ ಹಾಜರಾಗಿದ್ದಾರೆ. ಅನುತ್ತೀರ್ಣರಾದವರು ಹಾಗೂ ಶೇ.60ಕ್ಕಿಂತ ಕಡಿಮೆ ಅಂಕ ಪಡೆದವರು ಮತ್ತೊಮ್ಮೆ ಪರೀೆ ಬರೆಯಲು ಅವಕಾಶವಿದೆ.

    ಶ್ರೀಶೈಲ ಬಿರಾದಾರ. ಡಿಡಿಪಿಐ ಕೊಪ್ಪಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts