More

  ನೀವೆಂದಿಗೂ ಈ ತಪ್ಪು ಮಾಡೋದಿಲ್ಲ ಅಂದುಕೊಂಡಿದ್ದೀನಿ; ‘ಕ್ಯಾಪ್ಟನ್ ಕೂಲ್’​ಗೆ ಬಹುಮುಖ್ಯ​ ಸಲಹೆ ಕೊಟ್ಟ ಸುನಿಲ್ ಗವಾಸ್ಕರ್!

  ನವದೆಹಲಿ: ಮೇ.26ರಂದು ಕೆಕೆಆರ್​ ಗೆಲುವಿನ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡ ಐಪಿಎಲ್ 17ನೇ ಆವೃತ್ತಿಗೆ ಅಂತಿಮ ವಿದಾಯ ತಿಳಿಸಿ, ಸತತ ಎರಡು ತಿಂಗಳು ತಮ್ಮನ್ನು ಮನರಂಜಿಸಿದ 10 ಬಲಿಷ್ಠ ತಂಡಗಳಿಗೂ ಕ್ರಿಕೆಟ್ ಅಭಿಮಾನಿಗಳು ಹೃತ್ಪೂರ್ವಕ ಧನ್ಯವಾದ ಹಾಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆದ್ರೆ, ಇದೆಲ್ಲದರ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಬಗ್ಗೆ ಇದೀಗ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಎಲ್ಲರ ಚಿತ್ತ ಧೋನಿ ನಿರ್ಧಾರದತ್ತ ಮೂಡಿದೆ.

  ಇದನ್ನೂ ಓದಿ: ಆದಿಲ್ ಸಾವಿನ ತನಿಖೆ ಸಿಐಡಿಗೆ ಚನ್ನಗಿರಿಗೆ ಬಂದ ನಾಲ್ವರು ಅಧಿಕಾರಿಗಳ ತಂಡ

  ಕಳೆದ ನಾಕೌಟ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಹೀನಾಯ ಸೋಲು ಕಾಣುತ್ತಿದ್ದಂತೆ ಲೀಗ್​ನಿಂದ ಹೊರನಡೆದ ಸಿಎಸ್​ಕೆ ತಂಡಕ್ಕೆ ಧನ್ಯವಾದ ತಿಳಿಸಿದ ಧೋನಿ, ತದನಂತರ ತನ್ನನ್ನು ಪ್ರೋತ್ಸಾಹಿಸಿ, ಬೆನ್ನುತಟ್ಟಿದ ಅಪಾರ ಅಭಿಮಾನಿಗಳಿಗೆ ತಾತ್ಕಾಲಿಕ ವಿದಾಯ ಹೇಳಿ, ತಮ್ಮ ಹುಟ್ಟೂರಿಗೆ ವಾಪಾಸ್​ ಆಗಿರುವ ಮಾಹಿ, ಸಿಎಸ್​ಕೆ ಮ್ಯಾನೆಜ್​ಮೆಂಟ್​ ಬಳಿ ತಮ್ಮ ನಿವೃತ್ತಿ ಬಗ್ಗೆ ಸಮಯ ಕೇಳಿರುವುದಾಗಿ ತಿಳಿಸಿದ್ದಾರೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳು ಭುಗಿಲೆದ್ದಿದ್ದು, ಧೋನಿ ನಿವೃತ್ತಿ ಘೋಷಿಸುವುದು ಒಳಿತು ಎಂದು ಕೆಲವರು ಹೇಳಿದರೆ, ಮಾಜಿ ಹಿರಿಯ ಕ್ರಿಕೆಟಿಗರು ಮಾತ್ರ ಕ್ಯಾಪ್ಟನ್ ಕೂಲ್ ನಿವೃತ್ತಿ ಘೋಷಿಸಬಾರದು ಎಂದು ಹೇಳಿದ್ದಾರೆ.

  ಐದು ಬಾರಿ ಸಿಎಸ್​ಕೆಯನ್ನು ಐಪಿಎಲ್​ ಚಾಂಪಿಯನ್ಸ್ ಪಟ್ಟಕ್ಕೆ ಕೂರಿಸಿರುವ ಧೋನಿ, ಕೇವಲ ಟೀಂ ಇಂಡಿಯಾಗೆ ಮಾತ್ರವಲ್ಲ, ಎಲ್ಲಾ ಫಾರ್ಮೆಟ್​ನ ತಂಡಕ್ಕೂ ಶ್ರೇಷ್ಠ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ 43ನೇ ವಯಸ್ಸಿನಲ್ಲಿಯೂ ತಂಡದ ಪರ ಈ ಸೀಸನ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಹೇಂದ್ರ ಸಿಂಗ್ ಧೋನಿ, ಅಭಿಮಾನಿಗಳು ಹಾಗೂ ಮಾಜಿ ಹಿರಿಯ ಕ್ರಿಕೆಟಿಗರ ಹುಬ್ಬೇರುವಂತೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಸದ್ಯ ಧೋನಿ ನಿವೃತ್ತಿ ಬಗ್ಗೆ ಪ್ರಶ್ನೆ ಎತ್ತಿರುವ ಕೆಲವರಿಗೆ ಇದೀಗ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.

  See also  19 ವಯೋಮಿತಿಯ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪಾಕ್‌ಗೆ ಶರಣಾದ ಭಾರತ ಕಿರಿಯರ ತಂಡ

  ಇದನ್ನೂ ಓದಿ: ಸವಾಲುಗಳನ್ನು ಗೆದ್ದುಬಂದ ಶ್ರೇಯಸ್​ ಅಯ್ಯರ್​; ಬಿಸಿಸಿಐ ಬಗ್ಗುಬಡಿಯಲು ಯತ್ನಿಸಿದರೂ ಬಗ್ಗಲಿಲ್ಲ!

  “ಧೋನಿ ಅತ್ಯಂತ ಯಶಸ್ವಿ ಕ್ಯಾಪ್ಟನ್ ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ನನ್ನ ಪ್ರಕಾರ, ತಮ್ಮ ಜನ್ಮದಿನವಾದ ಜುಲೈ 7ರಂದು ಮಾಹಿ ನಿವೃತ್ತಿ ಬಗ್ಗೆ ದೊಡ್ಡ ಅನೌನ್ಸ್​ಮೆಂಟ್ ಮಾಡಬಹುದು. ಆದ್ರೆ, ಧೋನಿಗೆ ನನ್ನ ಸಲಹೆ ಏನಂದರೆ, ಅವರು ಯಾವುದೇ ಕಾರಣಕ್ಕೂ ನಿವೃತ್ತಿ ಘೋಷಿಸಬಾರದು. ಬದಲಿಗೆ ಐಪಿಎಲ್ ಆಡುವುದನ್ನು ನಿಲ್ಲಿಸಲಿ. ಮಾಹಿಗೆ ಯಾವಾಗ ಓಕೆ, ಈಗ ನಾನು ಆಡಬಹುದು ಅಂತ ಅನಿಸುತ್ತದೆಯೋ, ಆಗ ಲೀಗ್​ನಲ್ಲಿ ಆಡಲಿ. ಇದಕ್ಕೆ ಬಿಸಿಸಿಐ ಕೂಡ ಒಪ್ಪುತ್ತದೆ. ಅದಕ್ಕೆ ಅವರೇನು ತಕರಾರು ತೆಗೆಯೋದಿಲ್ಲ. ಯಾಕಂದ್ರೆ, ಕ್ಯಾಪ್ಟನ್ ಕೂಲ್​ರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳಿದ್ದಾರೆ,(ಏಜೆನ್ಸೀಸ್).

  ಮುಂದಿನ ವರ್ಷ ಈ 4 ಸ್ಟಾರ್​ ಆಟಗಾರರನ್ನು ಕೈಬಿಡಲಿದೆ ಆರ್​ಸಿಬಿ ಫ್ರಾಂಚೈಸಿ! ಫ್ಯಾನ್ಸ್​ ಕಂಗಾಲು

  ಇವರಿಬ್ಬರಿಲ್ಲ ಅಂದ್ರೆ IPL​ಗೆ ಕಳೆಯೇ ಇಲ್ಲ! ಮುಂದೆ ಯಾರೂ ಹೀಗೆ ಹುಚ್ಚೆದ್ದು ನೋಡೋದಿಲ್ಲ: ನವಜೋತ್ ಸಿಂಗ್ ಸಿಧು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts