Astrology : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜನಿಸಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಅವರ ಭವಿಷ್ಯದ ಜೀವನ, ಆತನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಮನುಷ್ಯನ ಸ್ವಭಾವಗಳಲ್ಲಿನ ಬದಲಾವಣೆಗೆ ಗ್ರಹಗತಿಗಳೇ ಕಾರಣ ಎಂದು ನಂಬಲಾಗಿದೆ. ವ್ಯಕ್ತಿಯ ಒಳಿತು-ಕೆಡುಕಗಳ ಮೇಲೆಯೂ ಜಾತಕವೂ ಪ್ರಭಾವ ಬೀರುತ್ತದೆ.
ವೇದಗಳ ಪ್ರಕಾರ, ಸೂರ್ಯನು ಜನವರಿ 14 ರಂದು ಬೆಳಗ್ಗೆ 8.44ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನವನ್ನು ನಾವು ಸಂಕ್ರಾಂತಿ ಹಬ್ಬವನ್ನಾಗಿ ಆಚರಿಸುತ್ತೇವೆ. ಇದಕ್ಕೂ ಮುನ್ನ ಅಂದರೆ, ಜ.13ರಂದು ಭೋಗಿ ಹಬ್ಬವನ್ನು ಆಚರಿಸಲಾಗುತ್ತದೆ. ಸಂಕ್ರಾಂತಿಯ ಹಿಂದಿನ ದಿನ ಆಚರಿಸುವ ಹಬ್ಬವನ್ನು ಭೋಗಿ ಹಬ್ಬ ಎಂದು ಕರೆಯುತ್ತಾರೆ. ಈ ಹಬ್ಬವನ್ನು ಕರ್ನಾಟಕದಲ್ಲಿಯೂ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಜ.14ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿ ಪುಷ್ಯ ನಕ್ಷತ್ರದ ಮೂಲಕ ಸಾಗುತ್ತಾನೆ.
ಇನ್ನು ಈ ತಿಂಗಳು ಸೂರ್ಯ ಮತ್ತು ಗುರುಗಳು ಒಂಬತ್ತನೇ ಮತ್ತು ಐದನೇ ಮನೆಗಳಲ್ಲಿ ಒಂದೇ ಸಾಲಿನಲ್ಲಿ ಸಾಗುವುದರಿಂದ ನವಪಂಚಮ ಯೋಗ ಉಂಟಾಗುತ್ತದೆ. ಸೂರ್ಯನ ಈ ಸಂಚಾರವು 3 ನಿರ್ದಿಷ್ಟ ರಾಶಿಚಕ್ರ ಚಿಹ್ನೆಗಳ ಜನರಿಗೆ ಈ ತಿಂಗಳು ತುಂಬಾ ಶುಭ ಮತ್ತು ಫಲಪ್ರದವಾಗಿರುತ್ತದೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ವೃಶ್ಚಿಕ ರಾಶಿ
ಈ ರಾಶಿಯಲ್ಲಿ ಜನಿಸಿದವರಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮಲ್ಲಿರುವ ಸಾಮರ್ಥ್ಯವನ್ನು ಹೊರಹಾಕಲು ಮತ್ತು ನಿಮ್ಮ ಆಂತರಿಕ ಶಕ್ತಿಯನ್ನು ಬಹಿರಂಗಪಡಿಸಲು ಇದು ಸೂಕ್ತ ತಿಂಗಳಾಗಿದೆ. ಜೀವನದಲ್ಲಿನ ಬದಲಾವಣೆಗಳನ್ನು ಸ್ವೀಕರಿಸಿ ಮತ್ತು ಅವುಗಳನ್ನು ಬೆಳವಣಿಗೆಗೆ ಅವಕಾಶಗಳಾಗಿ ಬಳಸಿಕೊಂಡರೆ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು.
ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ… ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ದುರಂತ ಸಾವು! Pistachio shell
ಧನುಸ್ಸು ರಾಶಿ
ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅಲ್ಲದೆ, ಯಶಸ್ಸು ಹುಡುಕಿ ಬರುತ್ತದೆ. ಆರ್ಥಿಕ ಪ್ರಗತಿಗೆ ಹಲವು ಉತ್ತಮ ಅವಕಾಶಗಳು ದೊರೆಯುತ್ತವೆ. ಹೂಡಿಕೆಯ ಮೇಲಿನ ಲಾಭ ಹೆಚ್ಚಾಗುತ್ತದೆ. ಆದರೆ, ಅಪಾಯಕಾರಿ ಹೊಸ ಹೂಡಿಕೆಗಳನ್ನು ತಪ್ಪಿಸುವುದು ಉತ್ತಮ. ಆರ್ಥಿಕತೆಯು ಬಲಗೊಳ್ಳುತ್ತದೆ ಮತ್ತು ಕೆಲಸದಲ್ಲಿ ಬಡ್ತಿಯೂ ಸಿಗುತ್ತದೆ. ನಿಮ್ಮ ಶತ್ರುಗಳನ್ನು ಸೋಲಿಸುವ ಸಮಯವಾಗಿದೆ. ಬಾಕಿ ಇರುವ ಎಲ್ಲ ಕೆಲಸಗಳನ್ನು ನೀವು ಸುಗಮವಾಗಿ ಪೂರ್ಣಗೊಳಿಸಬಹುದು.
ಮಕರ ರಾಶಿ
ಈ ರಾಶಿಯವರಿಗೆ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ ಮತ್ತು ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅಲ್ಲದೆ, ನೈತಿಕತೆಯು ಕೂಡ ಹೆಚ್ಚಾಗುತ್ತದೆ. ಇದರಿಂದ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ. ವೈಯಕ್ತಿಕ ಬೆಳವಣಿಗೆ ಹಾಗೂ ಜೀವನದಲ್ಲಿ ಪ್ರಗತಿ ಹೆಚ್ಚಾಗುತ್ತದೆ. ನೀವು ನಿಮ್ಮ ಎಲ್ಲ ಜವಾಬ್ದಾರಿಗಳನ್ನು ಸರಿಯಾಗಿ ಪೂರ್ಣಗೊಳಿಸಬಹುದು. ನೀವು ಕಾನೂನು ವಿಚಾರಗಳಲ್ಲಿ ಯಶಸ್ಸು ಸಾಧಿಸಬಹುದು. ನಿಮ್ಮ ಹಣಕಾಸಿನ ಸಮಸ್ಯೆಗಳು ಬಗೆಹರಿಯುತ್ತವೆ. ಈ ಸಮಯದಲ್ಲಿ ನೀವು ಯಾರನ್ನೂ ಹೆಚ್ಚು ನಂಬಬೇಡಿ. ಏಕೆಂದರೆ, ಅತಿಯಾದ ನಂಬಿಕೆಯೇ ಹಾನಿಕಾರಕವಾಗಬಹುದು.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.