Costly Catch : ದಕ್ಷಿಣ ಆಫ್ರಿಕಾದಲ್ಲಿ SA20 ಲೀಗ್ ಆರಂಭವಾಗಿದೆ. ಭಾರತದಲ್ಲಿ ನಡೆಯುವ ಐಪಿಎಲ್‌ನಂತೆಯೇ, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಈ ಲೀಗ್ ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಸದ್ಯ ಮೂರನೇ ಸೀಸನ್ ಪ್ರಾರಂಭವಾಗಿದ್ದು, ಎಲ್ಲ ಪ್ರಸಿದ್ಧ ಕ್ರಿಕೆಟಿಗರು ಈ ಲೀಗ್‌ನಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಕ್ರಿಕೆಟ್ ಆಡುವವರು ಮಾತ್ರ ಹಣ ಗಳಿಸುತ್ತಾರೆ. ಅದನ್ನು ಬಿಟ್ಟರೆ ಕ್ರೀಡಾಂಗಣದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಂಬಳ ದೊರೆಯುತ್ತದೆ. ಆದರೆ, ಪಂದ್ಯವನ್ನು ವೀಕ್ಷಿಸಲು ಹೋಗುವ ಕ್ರೀಡಾಭಿಮಾನಿಗಳಿಗೆ ಅಥವಾ ಪ್ರೇಕ್ಷಕರಿಗೆ ಹಣ ಖರ್ಚಾಗುತ್ತದೆ ಹೊರತು ಹಣ ಗಳಿಸಲು ಯಾವುದೇ ದಾರಿ ಇರುವುದಿಲ್ಲ. ಆದರೆ, ಕೆಲವು ಪಂದ್ಯಾವಳಿಗಳಲ್ಲಿ, ಪ್ರೇಕ್ಷಕರಿಗೆ ಹಣ ಗಳಿಸುವ ಅವಕಾಶವನ್ನು ಸಹ ನೀಡಲಾಗುತ್ತದೆ.
ಶುಕ್ರವಾರ SA20 ಲೀಗ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ವೀಕ್ಷಕನಿಗೆ ಹಣದ ಸುರಿಮಳೆಯಾಗಿದೆ. ನ್ಯೂಜಿಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಕೆನ್ ವಿಲಿಯಮ್ಸನ್ ಬಾರಿಸಿದ ಸಿಕ್ಸರ್ ಚೆಂಡನ್ನು ಹಿಡಿಯುವ ಮೂಲಕ ಕ್ರಿಕೆಟ್ ವೀಕ್ಷಕನೊಬ್ಬ ಲಕ್ಷಾಧಿತಿಯಾಗಿದ್ದಾನೆ. ಇದು ಅಚ್ಚರಿಯಾದರೂ ಸತ್ಯ.
ಅಂದಹಾಗೆ ಜನವರಿ 9ರಿಂದ SA20 ಲೀಗ್ ಪ್ರಾರಂಭವಾಗಿದೆ. ಶುಕ್ರವಾರ ಡರ್ಬನ್ ಸೂಪರ್ ಜೈಂಟ್ಸ್ ಮತ್ತು ಪ್ರಿಟೋರಿಯಾ ಕ್ಯಾಪಿಟಲ್ಸ್ ನಡುವೆ ಡರ್ಬನ್ನಲ್ಲಿ ಲೀಗ್ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಡರ್ಬನ್ ಸೂಪರ್ ಜೈಂಟ್ಸ್, ಕೆನ್ ವಿಲಿಯಮ್ಸನ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ರೋಚಕ ಪಂದ್ಯದಲ್ಲಿ ಕೇವಲ ಎರಡು ರನ್‌ಗಳಿಂದ ಗೆದ್ದಿತು.
ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಬಾರಿಸಿದ ಬೃಹತ್ ಸಿಕ್ಸರ್ ಕ್ರಿಕೆಟ್ ಅಭಿಮಾನಿಯನ್ನು ಲಕ್ಷಾಧಿಪತಿಯನ್ನಾಗಿ ಮಾಡಿದೆ. ವಿಲಿಯಮ್ಸನ್ ಬಾರಿಸಿದ ಬೃಹತ್ ಸಿಕ್ಸರ್ ಅನ್ನು ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರೊಬ್ಬರು ಒಂದೇ ಕೈಯಲ್ಲಿ ಹಿಡಿದರು. ಅದನ್ನು ನೋಡಿ ಕ್ರೀಡಾಂಗಣದಲ್ಲಿದ್ದವರು ಕೂಡ ಅಚ್ಚರಿಗೊಂಡರು. ಇತ್ತ ಕ್ಯಾಚ್ ಹಿಡಿದ ವ್ಯಕ್ತಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಪಕ್ಕದಲ್ಲಿದ್ದ ಇತರ ಕ್ರೀಡಾಭಿಮಾನಿಗಳು ಸಹ ಆ ವ್ಯಕ್ತಿಯನ್ನು ಅಭಿನಂದಿಸಿದರು.
ಏಕೆಂದರೆ SA20 ಲೀಗ್‌ನಲ್ಲಿ, ಪ್ರೇಕ್ಷಕರು ಕ್ಯಾಚ್ ಹಿಡಿದರೆ, ಅವರಿಗೆ ಆಫ್ರಿಕನ್ ಕರೆನ್ಸಿ ಎರಡು ಮಿಲಿಯನ್ ರಾಂಡ್‌ಗಳನ್ನು ನೀಡಲಾಗುತ್ತದೆ, ಇದು ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು 90 ಲಕ್ಷ ರೂಪಾಯಿಗಳು. ಒಂದೇ ಕ್ಯಾಚ್ನಲ್ಲಿ 90ಲಕ್ಷ ರೂಪಾಯಿಯನ್ನು ಗೆದ್ದ ನಂತರ ಆ ವ್ಯಕ್ತಿ ಸಂತೋಷಪಟ್ಟರು. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಲೀಗ್‌ನಲ್ಲಿ ಇದು ಎರಡನೇ ಕ್ಯಾಚ್ ಆಗಿದೆ. (ಏಜೆನ್ಸೀಸ್)
You’ll want to stick around to the end for this one… 👀
We’ve got another @Betway_za Catch 2 Million WINNER! 💰🎉#BetwaySA20 #DSGvPC #WelcomeToIncredible pic.twitter.com/hDYH4HKYVs— Betway SA20 (@SA20_League) January 10, 2025
ವಿರಾಟ್ ಕೊಹ್ಲಿ ಕಂಡರೆ ಅಂಬಾಟಿ ರಾಯುಡುಗೇಕೆ ಕೋಪ? ಕೊನೆಗೂ ಸಿಕ್ತು ಅಚ್ಚರಿಯ ಉತ್ತರ! Virat Kohli
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಪ್ರಕರಣ: ಓರ್ವನ ಬಂಧನ | Cow udder