Virat Kohli : ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಹೀನಾಯವಾಗಿ ಸೋಲುಂಡಿದ್ದರಿಂದ ಟೀಮ್ ಇಂಡಿಯಾದ ಹಿರಿಯ ಆಟಗಾರರ ವಿರುದ್ಧ ಎಲ್ಲೆಡೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಫಾರ್ಮ್ ಕೊರತೆ ಕಾಡುತ್ತಿದ್ದರೂ ಯುವ ಆಟಗಾರರಿಗೆ ಅವಕಾಶ ನೀಡದೆ ತಂಡದಲ್ಲಿಯೇ ಉಳಿದುಕೊಂಡಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಕ್ರೀಡಾಭಿಮಾನಿಗಳು ಮಾತ್ರವಲ್ಲ ಮಾಜಿ ಆಟಗಾರರು ಕೂಡ ಹಿರಿಯ ಆಟಗಾರರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಇದೀಗ ಭಾರತ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು ವಿರಾಟ್ ಕೊಹ್ಲಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿದ ಬಳಿಕ ಭಾರತ ತಂಡಕ್ಕೆ ಮರಳಲು ಯತ್ನಿಸಿದ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈಬಿಡಲು ಆ ಸಮಯದಲ್ಲಿ ನಾಯಕರಾಗಿದ್ದ ವಿರಾಟ್ ಕೊಹ್ಲಿಯೇ ಕಾರಣ ಎಂದು ಲಾಲಂಟಾಪ್ಗೆ ನೀಡಿದ ಸಂದರ್ಶನದಲ್ಲಿ ಉತ್ತಪ್ಪ ಆರೋಪಿಸಿದ್ದಾರೆ.
ಯುವರಾಜ್ ಸಿಂಗ್ ಮಾತ್ರವಲ್ಲ ಮತ್ತೊಬ್ಬ ಮಾಜಿ ಆಟಗಾರ ಅಂಬಾಟಿ ರಾಯುಡು ಅವರನ್ನು ತಂಡದಿಂದ ಕೈಬಿಡಲೂ ಕೊಹ್ಲಿಯೇ ಕಾರಣ ಎಂದು ಉತ್ತಪ್ಪ ಹೇಳಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರಾಯುಡು ಅವರು ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದರು. ಆದರೆ, ಈ ಸಂದರ್ಭದಲ್ಲಿ ಕೊಹ್ಲಿಯೇ ಅವರನ್ನು ತಂಡದಿಂದ ಕೈಬಿಟ್ಟರು. ಇದಕ್ಕೆ ರಾಯುಡು ಅವರು ನೀಡಿದ ಪ್ರತಿಕ್ರಿಯೆ ಆ ಸಮಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ರಾಯುಡು ಅವರನ್ನು ಸಂಪೂರ್ಣವಾಗಿ ತಂಡದಿಂದ ಕೈಬಿಟ್ಟಿತು ಎಂದು ಉತ್ತಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಪೋಷಕರೇ ಹುಷಾರ್! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips
ವಿರಾಟ್ ಕೊಹ್ಲಿ ಯಾರನ್ನಾದರೂ ಇಷ್ಟಪಡದಿದ್ದರೆ, ಆತ ಒಳ್ಳೆಯವನಲ್ಲ ಎಂದು ಅನಿಸಿದರೆ, ಅವರನ್ನು ಕೊಹ್ಲಿ ದೂರವಿಡುತ್ತಾರೆ. ಅದಕ್ಕೆ ಅಂಬಾಟಿ ರಾಯುಡು ಒಂದು ಪ್ರಮುಖ ಉದಾಹರಣೆ. ಪ್ರತಿಯೊಬ್ಬರಿಗೂ ವಿಭಿನ್ನ ಆದ್ಯತೆಗಳಿವೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ತಂಡದ ವಿಶ್ವಕಪ್ ಜೆರ್ಸಿಯೊಂದಿಗೆ ಉತ್ಸಾಹದಿಂದ ತಯಾರಿ ನಡೆಸುವಾಗ ಅವರ ಹಾದಿಗೆ ಅಡ್ಡಿಯಾಗಬಾರದು. ವಿಶ್ವಕಪ್ ಆಡಲು ಮನೆಯಲ್ಲಿ ತಮ್ಮ ಕಿಟ್ ಮತ್ತು ಬ್ಯಾಗ್ ಅನ್ನು ರಾಯುಡು ಸಿದ್ಧಪಡಿಸಿದ್ದರು. ಆದರೆ, ಅವರ ಹಾದಿಗೆ ಕೊಹ್ಲಿ ಅಡ್ಡಿಯಾದರು. ಕೊಹ್ಲಿಯ ಈ ನಡೆ ಒಳ್ಳೆಯದಲ್ಲ ಅನಿಸಿತು ಎಂದು ಉತ್ತಪ್ಪ ಹೇಳಿದರು.
ಅಂದಹಾಗೆ ತಂಡದಿಂದ ಕೈಬಿಟ್ಟ ನಿರ್ಧಾರವನ್ನು ರಾಯುಡು ಅವರು ತೀವ್ರವಾಗಿ ವಿರೋಧಿಸಿದ್ದರು. 2019ರ ವಿಶ್ವಕಪ್ ಸಮಯದಲ್ಲಿ ರಾಯುಡು ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಆದಾಗ್ಯೂ, ಮೂರು ತಿಂಗಳ ನಂತರ ಅವರು ಈ ನಿರ್ಧಾರವನ್ನು ಹಿಂತೆಗೆದುಕೊಂಡರು. 2022ರ ಐಪಿಎಲ್ ಸಮಯದಲ್ಲಿ ಅವರು ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದರು, ಆದರೆ ನಂತರ ಅದನ್ನು ಹಿಂತೆಗೆದುಕೊಂಡರು. ಆದಾಗ್ಯೂ, 2023ರ ಐಪಿಎಲ್ ಸೀಸನ್ ನಂತರ ನಿವೃತ್ತರಾದರು. ರಾಯುಡು 55 ಏಕದಿನ ಪಂದ್ಯಗಳಲ್ಲಿ 47ರ ಸರಾಸರಿಯಲ್ಲಿ 1694 ರನ್ ಗಳಿಸಿದರು. ರಾಯುಡು ಐಪಿಎಲ್ನಲ್ಲಿ ಸಾಕಷ್ಟು ಮಿಂಚಿದರು. (ಏಜೆನ್ಸೀಸ್)
ಪೋಷಕರೇ ಹುಷಾರ್! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips
ಮಹಿಳೆಯರಲ್ಲಿನ ಕುಡಿತದ ಚಟದ ಹಿಂದಿನ ರಹಸ್ಯ ಕೊನೆಗೂ ಬಹಿರಂಗ! ಎಲ್ಲದಕ್ಕೂ ಆ ಹಾರ್ಮೋನ್ ಕಾರಣ | Alcohol